ಸೆಲೆಬ್ರಿಟಿಗಳು ಕಂಡರೆ ಸಾಕು ಹೆಚ್ಚಿನ ಜನ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಹೆಚ್ಚಿನ ಅಭಿಮಾನಿಗಳು ಹೊಂದಿದವರ ಪರಿಸ್ಥಿತಿಯಂತೂ ಹೇಳತೀರದು. ಸದ್ಯ ಯಶ್ ನೋಡಬು ಮುಗಿಬಿದ್ದ ಯುವಕ ಗಾಯಗೊಂಡಿರುವ ಘಟನೆ ನಡೆದಿದೆ.
ನಟ ಯಶ್ ಬೆಂಗಾವಲು ವಾಹನ ಹರಿದು ಅಭಿಮಾನಿಗೆ ಗಾಯವಾಗಿರುವ ಘಟನೆ ನಡೆದಿದೆ. ಈ ಘಟನೆ ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ ನಲ್ಲಿ ನಡೆದಿದೆ. ಬಳ್ಳಾರಿಯ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮಕ್ಕೆ ಯಶ್ ಆಗಮಿಸಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಅವರನ್ನು ಕಾಣಲು ನೂಕುನುಗ್ಗಲು ಉಂಟಾಗಿದೆ.
ಆಗ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಬೆಂಗಾವಲು ಪಡೆಯ ವಾಹನ ಹರಿದಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಯಶ್ ಕಟೌಟ್ ಹಾಕುತ್ತಿದ್ದ ವೇಳೆ ಯುವಕರು ವಿದ್ಯುತ್ ಶಾಕ್ ಗೆ ಬಲಿಯಾಗಿದ್ದರು. ಅದು ಮಾಸುವ ಮುನ್ನವೇ ಈ ಘಟನೆ ನಡೆದಿದೆ.