ಕೆನಡಾದಿಂದ 108 ವರ್ಷಗಳ ನಂತರ ಕಾಶಿಗೆ ಮರಳಿದ ಅನ್ನಪೂರ್ಣೇಶ್ವರಿ ವಿಗ್ರಹ..!

1 min read

ಕೆನಡಾದಿಂದ 108 ವರ್ಷಗಳ ನಂತರ ಕಾಶಿಗೆ ಮರಳಿದ ಅನ್ನಪೂರ್ಣೇಶ್ವರಿ ವಿಗ್ರಹ..!

ವಾರಣಾಸಿ : 108 ವರ್ಷಗಳ ಬಳಿಕ ಕೆನಾಡದಿಂದ ಅನ್ನಪೂರ್ಣೇಶ್ವರಿ ದೇವಿಯ  ವಿಗ್ರಹ ಕಾಶಿಗೆ ಮರಳಿ ತರಲಾಗಿದೆ..  ವಿಗ್ರಹವನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ನಿನ್ನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಷ್ಠಾಪನೆ ಮಾಡಿದ್ದಾರೆ.

ಈ ವಿಗ್ರಹಲವು 18ನೇ ಶತಮಾನದ್ದಾಗಿದ್ದು, ಸುಮಾರು 108 ವರ್ಷಗಳ ಹಿಂದೆ ಕಳವಾಗಿತ್ತು. ಬಳಿಕ ಕೆನಡಾದಲ್ಲಿ ಪತ್ತೆ ಆಗಿದ್ದ ಮೂರ್ತಿ, ಮೋದಿ ಸರ್ಕಾರದ ಪ್ರಯತ್ನದ ಫಲವಾಗಿ ಭಾರತಕ್ಕೆ ಮರಳಿದೆ. ಇನ್ನೂ ವಿಗ್ರಹ ಪ್ರತಿಷ್ಠಾಪನೆ ವೇಳೆ ಹಬ್ಬದಂತೆ ಉತ್ತರಪ್ರದೇಶದ ಜನ ಸಂಭ್ರಮಿಸಿದ್ದಾರೆ.

17 ಸೆಂ.ಮೀ ಎತ್ತರ, 9 ಸೆಂ.ಮೀ ಅಗಲ, 4 ಸೆಂ.ಮೀ ದಪ್ಪವಿರುವ ಈ ವಿಗ್ರಹವನ್ನು ಇರಿಸಲಾಗಿದ್ದ ಬೆಳ್ಳಿಯ ಪಲ್ಲಕ್ಕಿಗೆ ಯೋಗಿ ಆದಿತ್ಯನಾಥ್ ಅವರು ಸ್ವತಃ ಹೆಗಲ ನೀಡಿದರು. ಮಂತ್ರೋಚ್ಚರಣೆಯೊಂದಿಗೆ ದೇವಾಲಯ ಈಶಾನ್ಯ ಭಾಗದಲ್ಲಿ ಅನ್ನಪೂರ್ಣಾ ದೇವಿ ವಿಗ್ರಹ ಸೇರಿದಂತೆ ಈ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ.

https://twitter.com/i/broadcasts/1kvKpAYEjMQGE

108 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಇದು ಕೈಯಿಂದ ಕೈಗೆ ಬದಲಾವಣೆ ಹೊಂದುತ್ತಾ ಕಡೆಗೆ ಕೆನಡಾದ ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯ ತಲುಪಿತ್ತು. ಕೆನಡಾ ವಿಶ್ವವಿದ್ಯಾನಿಲಯದಿಂದ ವಿಗ್ರಹ ಮರಳಿಸುವಂತೆ ಭಾರತ ಸರ್ಕಾರ ಮನವಿ ಮಾಡಿದ ಬಳಿಕ ವಿಗ್ರಹವನ್ನು ಮರಳಿ ನೀಡಲಾಗಿದೆ..

ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದೂರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd