ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
ಲಾಕ್ ಡೌನ್ ನಂತರ ಥಿಯೇಟರ್ ಗಳಲ್ಲಿ ಒಂದೋ ಎರೆಡೋ ಹೊಸ ಸಿನಿಮಾಗಳು ಮಾತ್ರ ರಿಲೀಸ್ ಆಗಿದ್ದು, ಸಿನಿ ಪ್ರಯರು ಬೇಸರಗೊಂಡಿದ್ದಾರೆ. ಇದರ ನಡುವೆಯೇ ಸ್ಟಾರ್ ನಟರ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅಭಿಮಾನಿಗಳು ಖುಷ್ ಆಗಿದ್ದಾರೆ. ಇದರ ನಡುವೆಯೇ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹೌದು ಜನವರಿ 22 ರಂದು ಒಂದೇ ದಿನ ಬರೋಬ್ಬರಿ ಕನ್ನಡದ 5 ಸಿನಿಮಾಗಳು ತೆರೆಕಾಣಲಿದ್ದು, ಸಿನಿಪ್ರಿಯರನ್ನ ಭರ್ಜರಿಯಾಗಿ ರಂಜಿಸಲಿವೆ.
ಇನ್ನೂ ಫೆಬ್ರವರಿಯಿಂದ ಮೇ ವರೆಗೂ ಸ್ಟಾರ್ ಸಿನಿಮಾಗಳ ಅಬ್ಬರ ಶುರುವಾಗಲಿದೆ. ಹೀಗಾಗಿಯೇ ಅನೇಕ ಸಿನಿಮಾಗಳು ಈಗಲೇ ಬುಡುಗಡೆಯಾಗೋದು ಸೂಕ್ತ ಅನ್ನೋ ನಿರ್ಧಾರಕ್ಕೆ ಚಿತ್ರತಂಡಗಳು ಬಂದಿವೆ. ಅದರಂತೆ ಈ ವಾರ ಅದ್ರಲ್ಲೂ ಜನವರಿ 22ಕ್ಕೆ 5 ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡಲಿವೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಹಾಗಾದ್ರೆ ಆ ಸಿನಿಮಾಗಳು ಯಾವ್ಯಾವು..!
ಪಂಟ್ರು : ಪಂಟ್ರು ಸಿನಿಮಾ ಇದೇ ವಾರವೇ ರಿಲೀಸ್ ಆಗ್ತಿದೆ. ಈ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ, ದಿವಂಗತ ನಟ ರಾಕ್ ಲೈನ್ ಸುಧಾಕರ್, ಶಿವಮೊಗ್ಗ ಸಂತೋಷ್, ಮೇಘಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಲನ್ ಧನು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ತಲಾಖ್ ತಲಾಖ್ ತಲಾಖ್ : ತಲಾಖ್ ತಲಾಖ್ ತಲಾಖ್ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಆರ್ ಜೆ ನೇತ್ರಾ, ಸುಚೇತನ್ ಸ್ವರೂಪ್, ಶ್ರೀನಿವಾಸ್ ಮೂರ್ತಿ, ರವಿ ಭಟ್, ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜಮಾರ್ಗ : ಇದೊಂದು ಗ್ರಾಮೀಣ ಭಾಗದ ಮಕ್ಕಳ ಕಥೆಯಾಗಿದ್ದು, ಜನವರಿ 22ಕ್ಕೆ ರಿಲೀಸ್ ಆಗಲಿದೆ.
ಕತ್ಲೆಕಾಡು : ಈ ಸಿನಿಮಾವು ಸಹ ಇದೇ ವಾರವೇ ರಿಲೀಸ್ ಆಗ್ತಿದೆ. ಸಿನಿಮಾದಲ್ಲಿ ಶಿವಾಜಿನಗರ ಲಾಲ್, ಸಂಜೀವ್, ಸಿಂಧು ರಾವ್, ಸಂಹಿತಾ ಶಾ, ಸಿಂಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜು ದೇವಸಂದ್ರ ನಿರ್ದೇಶನ ಚಿತ್ರಕ್ಕಿದೆ.
ಲಡ್ಡು : ‘ಲಡ್ಡು’ ಇದೇ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ರಾಮಾನಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಬಿಂದುಶ್ರೀ, ಪವಿತ್ರಾ, ಹರೀಶ್, ದಿವಂಗತ. ರಾಕ್ ಲೈನ್ ಸುಧಾಕರ್, ಸಮೀರ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಸ್ಯಾಂಡಲ್ ವುಡ್ ಬಚ್ಚನ್ ’ ಜೊತೆ “ಪ್ಯಾಂಟಮ್” ನಲ್ಲಿ ‘ಬಾಲಿವುಡ್ ನ ಬಚ್ಚನ್’ ..?
ಮೆಗಾ ಸ್ಟಾರ್ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ..! ಯಾರ್ ಗೊತ್ತಾ..!
‘ರಿಯಲ್ ಹೀರೋ’ ಸೋನು ಸೂದ್ ಗೆ ಹೈಕೋರ್ಟ್ ನಲ್ಲಿ ಹಿನ್ನೆಡೆ..!
140 ದಿನಗಳ ಸೆರೆವಾಸದ ಬಳಿಕ ‘ತುಪ್ಪದ ಬೆಡಗಿ’ಗೆ ಸಿಕ್ತು ಬೇಲ್ ಭಾಗ್ಯ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel