ಭಾರತಕ್ಕಿಂತ ಹೆಚ್ಚಾಗಿ ಚೀನಾವನ್ನ ದ್ವೇಷಿಸುವ ದೇಶ ಯಾವುದು ಗೊತ್ತಾ…? ಈ ದೇಶದಲ್ಲಿ ನಂಬರ್ 4ನೇ ಫ್ಲೋರ್ ಇರೋದೇ ಇಲ್ಲ..!
ತೈವಾನ್ … ಚೀನಾದ್ದೇ ಸಂಸ್ಕೃತಿ , ಒಂದೇ ಭಾಷೆ ಆದ್ರೂ ಚೀನಾದ ವಿರೋಧಿ ದೇಶ. ತೈವಾನ್ ಅನ್ನ ಅನೇಕರು ಚೀನಾ ಅಂತಲೇ ಭಾವಿಸುತ್ತಾರೆ. ಅಲ್ಲಿನ ಸಿನಿಮಾಗಳು , ಅಲ್ಲಿನ ಜನರನ್ನ ಚೀನಾದವರಂತಲೇ ಕರೆಯುತ್ತಾರೆ. ಆದ್ರೆ ಇದು ಅಲ್ಲಿನ ಜನರಿಗೆ ಕೊಂಚವೂ ಇಷ್ಟವಾಗೋದಿಲ್ಲ. ಕಾರಣ ತೈವಾನ್ ಚೀನಾ ಎರಡೂ ಕೂಡ ಬೇರೆ ಬೇರೆ ದೇಶಗಳು. ಸಂಸ್ಕೃತಿ ಬಾಷೆ ಒಂದೇ ಆದ್ರೂ ಎರಡೂ ದೇಶಗಳ ನಡುವೆ ಅಜಗಜಾಂತರ ಅಂತರವಿದೆ. ತೈವಾನ್ ಕೇವಲ ತಾನಾಯ್ತು. ಜನ್ನ ದೇಶದ ಜನರಾಯ್ತು ಅಂತ ಇದ್ರೆ ಚೀನಾ ಪ್ರಪಂಚನ್ನ ಹೇಗೆಲ್ಲಾ ನಾಶ ಮಾಡಬಹುದು ಅನ್ನೋ ದಾರಿಗಳನ್ನ ಹುಡುಕುತ್ತಿರುತ್ತೆ. ಹಾಗೆ ನೋಡೋದಾದ್ರೆ ಪ್ರಸ್ತುತ 2-3 ವರ್ಷಗಳಿಮದ ಇಡೀ ವಿಶ್ವ ಚೀನಾದಿಂದಲೇ ಸಂಕಷ್ಟಕ್ಕೆ ಸಿಲುಕಿರೋದು ಗೊತ್ತಿದೆ. ಚೀನಾದ ಕೊರೊನಾ ವಿಶ್ವವನ್ನ ಕಾಡಿದೆ. ಇದು ಕೂಡ ಚೀನಾದ ಬಯೋಟಿಕ್ ವಾರ್ ಅಂತಲೇ ವಾದಗಳಿದ್ರು ಕಪಟಿ ಚೀನಾ ಒಪ್ಪೋದಕ್ಕೆ ತಯಾರಿಲ್ಲ.
ತೈವಾನ್ ಹಾಗೂ ಬಾರತದ ನಡುವೆ ಸಾಕಷ್ಟು ಸ್ವಾಮ್ಯತೆಗಳಿವೆ. ಆದ್ರೆ ಒಂದು ವಿಚಾರದಲ್ಲಿ ಎರೆಡೂ ದೇಶಗಳ ನಿಲುವು ಒಂದೇ. ಪ್ರಸ್ತುತ ಭಾರತ ಹಾಗೂ ತೈವಾನ್ ಎರೆಡೂ ದೇಶಗಳು ಚೀನಾದ ವೈರಿ ರಾಷ್ಟ್ರಗಳೇ. ಚಿಕ್ಕ ದೇಶವೇ ಆದ್ರೂ ತುಂಬ ಸುಂದರ , ಶಕ್ತಿಯುತ ರಾಷ್ಟ್ರಗಳಲ್ಲಿ ಒಂದು ತೈವಾನ್. ಈ ದೇಶದ ಅನೇಕ ವಿಶೇಷತೆಗಳು , ಕಾನೂನುಗಳು ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳೋಣ.
ಏಷ್ಯಾದ ಸುಂದರ ದೇಶ ತೈವಾನ್.. ಚೀನಾದ ಬಹುದೊಡ್ಡ ಶತ್ರು ದೇಶ ಚೀನಾ. ಕಾರಣ ಚೀನಾ ತೈವಾನ್ ದೇಶವನ್ನ ತನ್ನದೇ ದೇಶದ ಭಾಗ ಎಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲಲ ತೈವಾನ್ ಅನ್ನ ಹಾಂಗ್ ಕಾಂಗ್ ನ ರೀತಿಯಲ್ಲೇ ಒನ್ ನೇಷನ್ 2 ಸಿಸ್ಟಮ್ಸ್ ನ ರೀತಿಯಲ್ಲಿ ಇಟ್ಟುಕೊಳ್ಳುವುದು ಚೀನಾದ ಉದ್ದೇಶ. ಮತ್ತೊಂದೆಡೆ ತೈವಾನ್ ಯಾವುದೇ ಕಾರಣಕ್ಕೂ ಚೀನಾದ ಭಾಗವಾಗುವುದಕ್ಕೆ ತಯಾರಿಲ್ಲ.
ಈ ದೇಶದ ರಾಜಧಾನಿ ತೈಪೆ0020
ತೈವಾನ್ ನ ಜನಸಂಖ್ಯೆ ಸುಮಾರು 3 ಕೋಟಿ. ಈ ಪೈಕಿ 84 % ರಷ್ಟು ಜನ ತೈವಾನಿಗಳಾದ್ರೆ 14 % ರಷ್ಟು ಜನ ಚೀನಾದವರು. 2 % ರಷ್ಟು ಜನ ಇಂಡೋನೇಷ್ಯಾದವರಾಗಿದ್ದಾರೆ. ಈ ದೇಶದ ಸುಮಾರು 90 % ಜನರು ಬೌದ್ಧ ಧರ್ಮವನ್ನ ಅನುಸರಿಸಿದ್ರೆ ಉಳಿದ 10 % ರಷ್ಟು ಜನರು ಅನ್ಯ ಧರ್ಮೀಯರಾಗಿದ್ದಾರೆ.
ತೈವಾನ್ ದೇಶವನ್ನ 1590 ರಲ್ಲಿ ಪೋರ್ಚುಗಲ್ ಜನರು ಪತ್ತೆಹಚ್ಚಿದ್ದರು. ಆದ್ರೆ ಇದಕ್ಕೂ ಮುಂಚೆ ಚೀನಾ ಈ ದೇಶದ ಬಗ್ಗೆ ಮಾತನಾಡಿಕೊಂಡು ತಿರುಗುತ್ತಿತ್ತು ಎನ್ನಲಾಗಿದೆ. ಆದ್ರೆ ಇದೊಂದು ಮಣ್ಣಿನ ದ್ವೀಪವಷ್ಟೇ. ಈ ದ್ವೀಪ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡು ತಿರುತ್ತಿತ್ತು. ಕೊಚ್ಚೆ ಅಂತ ಹೇಳಿಕೊಳ್ತಿತ್ತು ಎನ್ನಲಾಗಿದೆ. ಆದ್ರೆ ಇಂದು ಅದೇ ಚೀನಾ ತೈವಾನ್ ಅನ್ನ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ನಾನಾ ಕಸರತ್ತುಗಳನ್ನ ಮಾಡ್ತಿದೆ.
ಈ ದೇಶದಲ್ಲಿ ಪ್ರತಿ ವರ್ಷ ಸುಮಾರು 1000 ಕ್ಕೂ ಅಧಿಕ ಭೂಕಂಪನ ಸಂಭವಿಸುತ್ತದೆ. ಈ ದೇಶದಲ್ಲಿನ ಟೈನನ್ ನಗರ ತೈವಾನ್ ನ ಅತಿ ಪ್ರಾಚೀನ ನಗರಗಳಲ್ಲಿ ಒಂದು. ತೈವಾನ್ ನಲ್ಲಿ ನಂಬರ್ 4 ಅಶುಭದ ಸಂಕೇತ ಅಂತ ಪರಿಗಣಿಸುತ್ತಾರೆ. ಹೋಟೆಲ್ ಇರಲಿ , ಇಲ್ಲಿನ ರೆಸ್ಟೋರೆಂಟ್ ಗಳಾಗಲಿ , ಲಿಫ್ಟ್ ಗಳೇ ಆಗಲೇ ಎಲ್ಲೂ ಕೂಡ 4ನೇ ಫ್ಲೋರ್ ಕಾಣಿಸೋದಿಲ್ಲ. ನೇರವಾಗಿ 3 ಆದ ನಂತರ 5, 6 ಹೀಗೆ ಸಂಖ್ಯೆಗಳು ಮುಂದುವರೆಯುತ್ತದೆ. ಇಲ್ಲಿನ ಜನರ ಪ್ರಕಾರ ನಂಬರ್ 4 ದೆವ್ವ ಭೂತ ಪ್ರೇತಾತ್ಮಗಳ ಸಂಕೇತವಾಗಿದೆ. 2009ರಲ್ಲಿ ಈ ದೇಶದಲ್ಲಿ ಭೀಕರ ಟೈಫೂನ್ ಸಂಭವಿಸಿತ್ತು. ಭಯಾನಕ ಮೋರೋಕಾಡ್ ಟೈಫೂನ್ ನಿಂದಾಗಿ ಸುಮಾರು 700 ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾಗಿದ್ರು.
ಮತ್ತೊಂದು ನಂಬಲು ಅಸಾಧ್ಯವಾದ ಆಶ್ಚರ್ಯಕರ ಸಂಗತಿ ಅಂದ್ರೆ ಈ ಇಡೀ ದೇಶವನ್ನ ಕೇವಲ 8 ಗಂಟೆಯೊಳಗೆ ಸುತ್ತು ಹೊಡಡೆಯಬಹುದು. ಈ ದೇಶದಲ್ಲಿ ಬಹುತೇಕ ಎಲ್ಲಾ ಮಹಿಳೆಯರು ಕೂಡ ವಿದ್ಯಾವಂತರೇ ಆಗಿದ್ದು, ಪ್ರತಿಯೊಬ್ಬರು ಕೂಡ ಹೊರಗಡೆ ಕೆಲಸ ಮಾಡುವವರೇ ಆಗಿದ್ದಾರೆ. ಅಂದ್ರೆ ಸುಮಾರು 4 % ರಷ್ಟು ಮಹಿಳೆಯರು ಮಾತ್ರವೇ ಹೌಸ್ ವೈಫ್ ಗಳಿದ್ದಾರೆ.
ತೈಳ್ಯಾಂಡ್ ನಲ್ಲಿನ ಪೋರ್ಕ್ ರೈಸ್ ಇಡೀ ವಿಶ್ವಾದ್ಯಂತ ಫೇಮಸ್. ಇಲ್ಲಿ ಸಿಗುವಂತಹ ಪೋರ್ಕ್ ರೈಸ್ ವಿಶ್ವದಲ್ಲಿ ಮತ್ತೆಲ್ಲೂ ಸಿಗಲ್ಲ ಅಂತ ಹೇಳಲಾಗುತ್ತದೆ. ಇನ್ನೂ ಸಸ್ಯಹಾರಿಗಳಿಗೂ ಕೂಡ ಇಲ್ಲಿ ಸಾಕಷ್ಟು ಸ್ವಾದಿಷ್ಟ ಆಹಾರಗಳು ಸಿಗುತ್ತವೆ. ಇಲ್ಲಿನ ರೂಸ್ ಐಸ್ ಕ್ರೀಮ್ ವರ್ಲ್ಡ್ ಫೇಮಸ್ ಡೆಸರ್ಟ್.
ಇಲ್ಲಿನ ಜನರ ಪ್ರಕಾರ ಬಿಳಿ ಬಣ್ಣ ನಿರಾಶೆಯ ಹತಾಶೆಯ ಪ್ರತೀಕ ಎನ್ನಲಾಗುತ್ತದೆ. ಹೀಗಾಗಿ ಬಹುತೇಕರು ಬಹುತೇಕ ಸಂದರ್ಭಗಳಲ್ಲಿ ಹೆಚ್ಚಾಗಿ ಬಿಳಿ ಬಣ್ಣ ಧರಿಸುವುದಿಲ್ಲ. ಯಾರಾದ್ರೂ ಸಾವನಪ್ಪಿದ್ದು, ಅವರ ಅಂತಿಮ ಸಂಸ್ಕಾರಕ್ಕೆ ಹೋದಂತಹ ಸಮಯದಲ್ಲಿ ಮಾತ್ರ ಜನ ಬಿಳಿ ಬಣ್ಣದ ಬಟ್ಟೆ ಧರಿಸುತ್ತಾರೆ.
ಇನ್ನೂ ಚೀನಾದ ಸಂಪ್ರದಾಯದಂತೆಯೇ ಈ ದೇಶದಲ್ಲಿ ಮದುವೆಯಲ್ಲಿ ವಧುವರರು ಕೆಂಪು ಬಣ್ಣದ ಬಟ್ಟೆ ಧರಿಸಿರುತ್ತಾರೆ. ಈ ವಿಚಾರದಲ್ಲೂ ಭಾರತಕ್ಕೆ ತೈವಾನ್ ಭಿನ್ನವಾಗಿಲ್ಲ. ಕಾರಣ ನಮ್ಮಲ್ಲೂ ಸಾಮಾನ್ಯವಾಗಿ ಯಾರಾದ್ರೂ ಮೃತಪಟ್ಟಿದ್ದು, ಅಂತಿಮ ದರ್ಶನಕ್ಕೆ ತೆರಳುವಾಗ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುತ್ತೇವೆ. ಮದುವೆಯಲ್ಲಿ ಸಾಮಾನ್ಯವಾಗಿ ಅದ್ರಲ್ಲೂ ಉತ್ತರ ಭಾರತದ ಭಾಗದಲ್ಲಿ ಕೆಂಪು ಬಟ್ಟೆಗಳನ್ನ ಧರಿಸಿರೋದನ್ನ ನೋಡಬಹುದು.
ನಮ್ಮ ದೇಶದ ತರಹವೇ ಈ ದೇಶದಲ್ಲಿ ಮದುವೆಗೆ ಮುಂಚೆ ಜಾಕತ ಹೊಂದಾಣಿಕೆ ಮಾಡಿ ಯಾವ ದಿನ ಯಾವ ಸಮಯದಲ್ಲಿ ಮದುವೆ ಮಾಡಬೇಕು ಎಂಬುದನ್ನೂ ನಿರ್ಧರಿಸಲಾಗುತ್ತದೆ. ಇನ್ನೂ ಈ ದೇಶದ ಬಗ್ಗೆ ಮತ್ತೊಂದು ಖುಷಿಯ ವಿಚಾರವೆಂದ್ರೆ ಈ ದೇಶದಲ್ಲಿನ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಅಲ್ಲಿನ ಸರ್ಕಾರ ಉಚಿತ ಚಿಕಿತ್ಸೆಯ ಸೌಲಭ್ಯ ನೀಡಿದೆ. ಯಾವುದೇ ನಾಗರಿಕರಿಗೂ ಏನೇ ಆದ್ರೂ ಸಹ ಒಂದು ಫೋನ್ ಕಾಲ್ ಮಾಡಿದ್ರೆ ಸಾಕು ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತದೆ.
ತೈವಾನ್ ಕರೆನ್ಸಿ –ನ್ಯೂ ತೈವಾನ್ ಡಾಲರ್ – ಭಾರತದ 2.67 ರೂಪಾಯಿಗೆ ಸಮ
ತೈಪೆ , ರೈಲಿ ಬೀಚ್ , ಕೋಹ್ ಪಿಪಿ ಚೀಚ್ , ಗ್ರ್ಯಾಂಡ್ ಪ್ಯಾಲೆಸ್ ಬ್ಯಾಂಗ್ ಕಾಕ್ , ಸಂಡೇ ವಾಕಿಂಗ್ ಸ್ಟ್ರೀಟ್ ಚಿಯಾಂಗ್ ಮಿಯಾಂಗ್ , ಪೈ , ಆಯುಟ್ಟಯ್ಯಾ ಹೀಗೆ ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಇಗರು ವಿಸಿಟ್ ಮಾಡಬಹುದು.