ADVERTISEMENT
Friday, February 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Malenadu Karnataka

ನಾಳೆ ಶೃಂಗೇರಿ ಬಂದ್ – ಆಸ್ಪತ್ರೆ ಬೇಕೆಂದು ಪಟ್ಟು ಹಿಡಿದ ಯುವಕರು

Namratha Rao by Namratha Rao
October 21, 2021
in Malenadu Karnataka, Newsbeat, ಮಲೆನಾಡು ಕರ್ನಾಟಕ
Share on FacebookShare on TwitterShare on WhatsappShare on Telegram

ನಾಳೆ ಶೃಂಗೇರಿ ಬಂದ್ – ಆಸ್ಪತ್ರೆ ಬೇಕೆಂದು ಪಟ್ಟು ಹಿಡಿದ ಯುವಕರು

ಕಳೆದ ಒಂದು ವರ್ಷದಿಂದ ಸುದೀರ್ಘವಾಗಿ ಸುಸಜ್ಜಿತವಾದ 100 ಬೆಡ್ ಆಸ್ಪತ್ರೆಗಾಗಿ ಹೋರಾಟ ನಡೆಸಿದ ಶೃಂಗೇರಿಯ ಯುವಕರ ಗುಂಪು ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಕರೆ ನೀಡಿದೆ. 2007 ನೆಯ ಇಸವಿಯಲ್ಲಿ ಶೃಂಗೇರಿ ತಾಲೂಕು ಆರೋಗ್ಯ ಕೇಂದ್ರವನ್ನು 100 ಬೆಡ್ ಆಸ್ಪತ್ರೆಯ ನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಆದೇಶ ಹೊರಡಿಸಿದ್ದರೂ ಕೂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗದ ಕೊರತೆಯ ನೆಪ ಹೇಳಿಕೊಂಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪೂರ್ಣ ಮಾಡಿಲ್ಲ ಎಂದು 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿ ತಿಳಿಸಿದೆ.

Related posts

The master of the political chessboard.. the echo of the voice of the exploited class.. the great leader admired by the people, CM Siddaramaiah

February 20, 2026
Are you repeatedly experiencing difficulties in life...! Then just try this one Kushmanda and all your difficulties will go away and a peaceful life will be yours...!!

ಪದೇ ಪದೇ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದೀರಾ…! ಹಾಗಾದರೆ ಈ ಒಂದು ಕೂಷ್ಮಾಂಡ ಪ್ರಯೋಗ ಮಾಡಿ ಸಾಕು ಕಷ್ಟಗಳು ದೂರವಾಗಿ ನೆಮ್ಮದಿ ಜೀವನ ನಿಮ್ಮದಾಗುತ್ತದೆ…!!

February 19, 2026

ಶೃಂಗೇರಿ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ಊರಾಗಿದ್ದು ಅಕ್ಕ ಪಕ್ಕದ ತಾಲೂಕಿನ ಕನಿಷ್ಟ 10 ಸಾವಿರ ಜನರಿಗೆ ಶೃಂಗೇರಿಯು ಹತ್ತಿರ ಕೇಂದ್ರವಾಗಿದೆ, ವರ್ಷಕ್ಕೆ ಸರಾಸರಿ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಹೀಗಿದ್ದರೂ ಕೂಡ ಈ ಕ್ಷೇತ್ರಕ್ಕೆ ಸುಸಜ್ಜಿತವಾದ ನೂರು ಬೆಡ್ ಆಸ್ಪತ್ರೆ ಇಲ್ಲದೇ ಇರುವುದು ವಿಷಾದನೀಯ ಸಂಗತಿ.

ಈಗಿರುವ ಆಸ್ಪತ್ರೆಯಲ್ಲಿ ಯಾವುದೇ ಅತ್ಯಾಧುನಿಕ ಸಲಕರಣೆಗಳು ಹಾಗೂ ಸುಸಜ್ಜಿತ ಸೌಲಭ್ಯಗಳು ಇಲ್ಲದ ಕಾರಣ ತೀವ್ರ ತರಹದ ಅನಾರೋಗ್ಯ, ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ಶೃಂಗೇರಿಯಿಂದ ಸುಮಾರು 100 ಕಿ.ಮೀ ದೂರದ ಊರಿನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಬೇಕಿದೆ. ಬಹುಪಾಲು ಜನರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದರೆ ಉಳಿದವರು ಹಣದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದು 100 ಬೆಡ್ ಆಸ್ಪತ್ರೆಯ ಹೋರಾಟ ಸಮಿತಿಯು ಜನರ ಸಂಕಷ್ಟಗಳನ್ನು ವಿಸ್ಕೃತವಾಗಿ ವಿವರಿಸಿದೆ.

ಮೆಡಿಕಲ್ ಮಾಫಿಯಾ?

ಇದರ ಹಿಂದೆ ಮೆಡಿಕಲ್ ಮಾಫಿಯಾ ಒತ್ತಡ ಇರುವ ಬಗ್ಗೆಯೂ ಸಹ ಸಾಕಷ್ಟು ಅನುಮಾನವಿದೆ, ಆ ಕಾರಣಕ್ಕಾಗಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ ಎಂಬ ಅನುಮಾನವಿದೆ ಮತ್ತು ರಾಜಕೀಯ ಒತ್ತಡ ಕೆಲಸ ಮಾಡುತ್ತಿರುವ ಸಾಧ್ಯತೆಯೂ ಇದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಈ ತಿಂಗಳ 20 ನೇ ತಾರೀಖಿನ ಒಳಗೆ ಈ ಕಾರ್ಯಗಳನ್ನು ಪೂರ್ಣಗೊಳಿಸ ದಿದ್ದಲ್ಲಿ ಶೃಂಗೇರಿ ಬಂದ್ ಗೆ ಕರೆ ನೀಡಲಾಗುವುದು ಎಂದು ಹೋರಾಟ ಸಮಿತಿಯು ಈ ಹಿಂದಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಯಾವುದೇ ಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ಅಕ್ಟೋಬರ್ 22 ನೆಯ ತಾರೀಕು ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಕರೆ ನೀಡಲಾಗಿದೆ ( ಈ ಮಧ್ಯದಲ್ಲಿ ನವರಾತ್ರಿ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ಧೇಶದಿಂದ) ಎಂದು 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿಯು ತಿಳಿಸಿದೆ.

ಪ್ರಮುಖ ಬೇಡಿಕೆಗಳು:
1. ಕೂಡಲೇ 100 ಬೆಡ್ ಆಸ್ಪತ್ರೆ ಜಾಗ ಮಂಜೂರಾತಿ ಸಮಸ್ಯೆ ಬಗೆಹರಿಸಿ ಆರೋಗ್ಯ ಇಲಾಖೆಗೆ ಜಾಗ ಮಂಜೂರು ಮಾಡುವುದು, ಹಾಗೂ 100 ಬೆಡ್ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡುವುದು.

2. ಪ್ರಸ್ತುತ ಈಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಎಂಡೊಸ್ಕೋಫಿ, ಹಾಗೂ ಸಿ.ಟಿ ಸ್ಕ್ಯಾನ್ ಮೆಷಿನ್ ಸೌಲಭ್ಯ ಒದಗಿಸುವುದು

ರಾಜಕೀಯೇತರ ಹೋರಾಟ :
ಈ ಹೋರಾಟವು ಸಂಪೂರ್ಣ ರಾಜಕೀಯೇತರವಾಗಿದ್ದು, ಊರಿಗೆ ಬೇಕಾದ ಸುಸಜ್ಜಿತ ಆಸ್ಪತ್ರೆ ಅನಿವಾರ್ಯತೆ ಇದ್ದು ಇದಕ್ಕಾಗಿ ಸಾರ್ವಜನಿಕರು ಮತ್ತು ವಿವಿಧ ರಾಜಕೀಯ ಪಕ್ಷದಲ್ಲಿರುವ ಸಮಾನ ಮನಸ್ಕರು ಒಟ್ಟಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆ. ಇದಕ್ಕೆ ಸಮಾಜದ ಎಲ್ಲಾ ಸಂಘಟನೆಗಳು, ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ಈ ಬಂದ್ ನ್ನು ಯಶಸ್ವಿಗೊಳಿಸಲು ಕೈಜೋಡಿಸುವ ಮೂಲಕ ಶೃಂಗೇರಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ನೂರು ಬೆಡ್ ಆಸ್ಪತ್ರೆ ಸಮಿತಿಯ ಸಂಘಟಕರು ಕೋರಿದ್ದಾರೆ.

ನಾಳೆ ಶೃಂಗೇರಿಯ ಕಡೆ ಪ್ರವಾಸವನ್ನ ಕೈಗೊಳ್ಳುವವರಿಗೆ ಅಡೆತಡೆ ಉಂಟಾಗಲಿದ್ದು ಪ್ರವಾಸಿಗರು ಬದಲಿ ಮಾರ್ಗವನ್ನ ಬಳಸುವುದು ಅಥವಾ ಪ್ರವಾಸವನ್ನ ಮುಂದೂಡೂವುದು ಒಳಿತು….

ಅಮೀರ್ ಖಾನ್ ಕಾಣಿಸಿಕೊಂಡಿರುವ ಜಾಹೀರಾತು ಹಿಂದೂ ವಿರೋಧಿ – ಅನಂತ್ ಕುಮಾರ್ ಹೆಗಡೆ

ಉತ್ತರಾಖಂಡ್ ನಲ್ಲಿ ಮೇಘಸ್ಫೋಟಕ್ಕೆ 52 ಬಲಿ

ಕೊರೊನಾ : ಭಾರತಕ್ಕಿಂದು ಶತಕೋಟಿಯ ಸಂಭ್ರಮ

“KGF” ಸುಂದರಿಗೆ ಹುಟ್ಟುಹಬ್ಬದ ಸಂಭ್ರಮ..!

ಭಾರತಕ್ಕಿಂದು ಶತಕೋಟಿಯ ಸಂಭ್ರಮ…!

Tags: #saakshatvbengaluruchikkamaglurukarnatakaPROTESTpublicshrungeri
ShareTweetSendShare
Join us on:

Related Posts

The master of the political chessboard.. the echo of the voice of the exploited class.. the great leader admired by the people, CM Siddaramaiah

by admin
February 20, 2026
0

ರಾಜಕೀಯ ಚದುರಂಗದ ಅಧಿಪತಿ..ಶೋಷಿತ ವರ್ಗದ ಧ್ವನಿಗೆ ಪ್ರತಿಧ್ವನಿ.. ಜನ ಮೆಚ್ಚಿದ ಮಹಾನಾಯಕ ಸಿಎಂ ಸಿದ್ದರಾಮಯ್ಯ ------------------ The master of the political chessboard.. the echo...

Are you repeatedly experiencing difficulties in life...! Then just try this one Kushmanda and all your difficulties will go away and a peaceful life will be yours...!!

ಪದೇ ಪದೇ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದೀರಾ…! ಹಾಗಾದರೆ ಈ ಒಂದು ಕೂಷ್ಮಾಂಡ ಪ್ರಯೋಗ ಮಾಡಿ ಸಾಕು ಕಷ್ಟಗಳು ದೂರವಾಗಿ ನೆಮ್ಮದಿ ಜೀವನ ನಿಮ್ಮದಾಗುತ್ತದೆ…!!

by admin
February 19, 2026
0

ಕೂಷ್ಮಾಂಡ ದೀಪ ‌ ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ ಆದರೆ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ ಮತ್ತು ಕೆಲವೊಂದು ಯಾವ ರೀತಿಯಾಗಿ...

Carrying these two items while going to the temple of the ancestral deity can help us move to the next stage of progress in our lives.

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ಈ ಎರಡು ವಸ್ತುಗಳನ್ನು ಹೊತ್ತುಕೊಂಡರೆ ನಮ್ಮ ಜೀವನದಲ್ಲಿ ಮುಂದಿನ ಪ್ರಗತಿಯ ಹಂತಕ್ಕೆ ಹೋಗಬಹುದು.

by admin
February 19, 2026
0

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ಈ ಎರಡು ವಸ್ತುಗಳನ್ನು ಹೊತ್ತುಕೊಂಡರೆ ನಮ್ಮ ಜೀವನದಲ್ಲಿ ಮುಂದಿನ ಪ್ರಗತಿಯ ಹಂತಕ್ಕೆ ಹೋಗಬಹುದು. ಜೀವನ ಯಶಸ್ಸಿನ ಕುಲದೈವಂ ಹೂಗಳು ಈ ಜಗತ್ತಿನಲ್ಲಿ ಹುಟ್ಟಿದ...

Player on the field.. Leader of the people in the arena- The gem of Chintamani Dr. M.C. Sudhakar

ಅಂಗಣದಲ್ಲಿ ಆಟಗಾರ.. ಅಖಾಡದಲ್ಲಿ ಜನನಾಯಕ- ಚಿಂತಾಮಣಿಯ ಮಾಣಿಕ್ಯ ಡಾ. ಎಂ.ಸಿ. ಸುಧಾಕರ್

by admin
February 19, 2026
0

ಡಾ.ಎಂ.ಸಿ. ಸುಧಾಕರ್. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು. ಡಾ. ಎಂ. ಸುಧಾಕರ್. ಹೆಸರಿಗೆ ತಕ್ಕಂತೆ ಇವರ ನಡೆತೆ, ಸ್ವಭಾವ, ಪ್ರವೃತ್ತಿ, ಮನೋಭಾವನೆ, ದೂರದೃಷ್ಟಿ, ಹವ್ಯಾಸ ಹೀಗೆ...

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

by Shwetha
February 19, 2026
0

ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram