01 ಕರಾವಳಿ ಗಡಿಭಾಗದಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದೂ ಸಂಘಟನಕಾರರು, ಒತ್ತಾಯ ಪೂರ್ವಕವಾಗಿ ಕೇಸರಿ ಶಾಲು ಹಾಕಿಸಿದ್ದಾರೆ. ಇತ್ತ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ಎಂದು ಪಟ್ಟು ಹಿಡಿದ್ದಾರೆ. ಹೀಗಾಗಿ ಕೇಸರಿ ಶಾಲು – ಹಿಜಾಬ್ ವಿವಾದ ತಾರಕ್ಕೇರಿದ್ದು, ಬೇರೆ ಬೇರೆ ಜಿಲ್ಲೆಗಳಿಗೆ ವ್ಯಾಪಿಸಿದೆ.
Udupi | ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು..?!
02 ಸಿನಿಮಾ ಮಂದಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ ಮೇಲೆ ಹೇರಲಾಗಿದ್ದ ನಿಯಮವನ್ನು ಸರ್ಕಾರ ತೆಗೆದು ಹಾಕಿದೆ. ನಾಳೆಯಿಂದಲೇ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
Cinema ಮಂದಿಗೆ ಗುಡ್ ನ್ಯೂಸ್ : ಥಿಯೇಟರ್ ಹೌಸ್ ಫುಲ್ ಗೆ ಗ್ರೀನ್ ಸಿಗ್ನಲ್
03 ನದಿಗಳ ಜೋಡಣೆ ಘೋಷಣೆಯು ಸರ್ವಾಧಿಕಾರಿ ಧೋರಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದವರು, ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ನದಿಗಳ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸುಮಾರು 46 ಸಾವಿರ ಕೋಟಿ ರೂಪಾಯಿ ಇಡುತ್ತೇವೆ ಎಂದು ಹೇಳಿದ್ದಾರೆ. ಇದು ಕಾರ್ಯಸಾಧುವಾದ ಯೋಜನೆ ಅಲ್ಲ ಎಂದರು.
Siddaramaiah | ನದಿಗಳ ಜೋಡಣೆ ಘೋಷಣೆ.. ಸರ್ವಾಧಿಕಾರಿ ಧೋರಣೆ
04 ಕಿದ್ವಾಯಿ ಇಡೀ ದೇಶದಲ್ಲಿ ದೊಡ್ಡ ಕ್ಯಾನ್ಸರ್ ಸಂಸ್ಥೆಯಾಗಿದ್ದು, ಆಧುನೀಕರಣ ಮಾಡಬೇಕಿದೆ. ಕ್ಯಾನ್ಸರ್ ಗುರುತಿಸುವ ಸ್ಕ್ಯಾನ್ ಮಾಡುವ ಅತ್ಯಾಧುನಿಕ ಸವಲತ್ತು ತರಬೇಕಿದೆ. ಇದನ್ನು 10 ಸಾವಿರದೊಳಗೆ ಸ್ಕ್ಯಾನಿಂಗ್ ಮಾಡಿಕೊಡುವ ಅವಕಾಶ ಮಾಡಲಿದ್ದೇವೆ. ಎಲ್ಲಾ ಸ್ಥಳೀಯ ಸೆಂಟರ್ ಗಳಲ್ಲಿ ಕ್ಯಾನ್ಸರ್ ಟ್ರೀಟ್ಮೆಂಟ್ ಸೆಂಟರ್ ಆರಂಭಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Basavaraja Bommai | ಆರೋಗ್ಯ ಕರ್ನಾಟಕಕ್ಕೆ ಸರ್ಕಾರ ಬದ್ಧ
05 ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,49,394 ಲಕ್ಷ ಹೊಸದಾಗಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 14,35,569ಕ್ಕೆ ತಲುಪಿದೆ. ನಿನ್ನೆ 2,46,674 ಜನರು ಚೇತರಿಸಿಕೊಂಡಿದ್ದಾರೆ.1,072 ಜನರು ಸಾವನ್ನಪ್ಪಿದ್ದಾರೆ.
National: ದೇಶದಲ್ಲಿ ಹೊಸದಾಗಿ 1,49 ಲಕ್ಷ ಕೊರೊನಾ ಪ್ರಕರಣಗಳು ಪತ್ತೆ
06 ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆ ಇಂದು ದೆಹಲಿ-ಮೀರತ್ ಇ-ವೇನಲ್ಲಿ ನಡೆದಿದೆ. ಉತ್ತರಪ್ರದೇಶದ ಮೀರತ್ ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಓವೈಸಿ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಲಾಗಿದೆ.
National: ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿ
07 ಕೆಜಿಎಫ್ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ… ಇದೀಗ ಪ್ರೇಮಿಗಳ ದಿನಾಚರಣೆಗೆ ಸಿನಿಮಾ ತಂಡ ಪ್ರೇಮಿಗಳಿಗೆ ದೊಡ್ಡದೊಂದು ಸರ್ಪ್ರೆಸ್ ಕೊಡಲು ಮುಂದಾಗಿದೆ. ಫೆಬ್ರವರಿ 14 ರಂದು ಸಿನಿಮಾದ ಐಟಂ ಹಾಡು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.
KGF 2 : ವಾಲೆಂಟೈನ್ ಡೇ ರಾಕಿ ಭಾಯ್ ಫ್ಯಾನ್ಸ್ ಬಿಗ್ ಸರ್ಪ್ರೈಸ್….!!
08. ಕನ್ನಡ, ತೆಲುಗು ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿ ಶ್ರೀಲಾಲಾ, ನಟ ಧನ್ವೀರ್ ನಟನೆಯ ಬೈ ಟು ಲವ್ ಸಿನಿಮಾದ ರೋಮ್ಯಾಂಟಿಕ್ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಸಾಂಗ್ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಿಲಿಯನ್ ವೀವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.
Bytwo Love : ಆಫೀಸ್ ಲವ್ ಸ್ಟೋರಿ ಬೈ ಟು ಲವ್ – ಕ್ಯೂಟ್ ಸಾಂಗ್ ರಿಲೀಸ್….
09 ಅಂಡರ್ 19 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತದ ಯುವ ಆಟಗಾರರಿಗೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಕೊಹ್ಲಿ ಭಾರತದ ಯುವ ಆಟಗಾರರೊಂದಿಗೆ ಆನ್ಲೈನ್ ಸಂವಾದ ನಡೆಸಿದ್ದಾರೆ.
Team India | ಯಂಗ್ ಇಂಡಿಯಾಗೆ ಕಿಂಗ್ ಕೊಹ್ಲಿ ಟಿಪ್ಸ್
10. ದಕ್ಷಿಣ ಆಫ್ರಿಕಾದ ಯುವ ಸೆನ್ಸೇಷನ್ ಡೆವಾಲ್ಡ್ ಬ್ರೆವಿಸ್ ಹೊಸ ದಾಖಲೆ ಬರೆದಿದ್ದಾರೆ. ಅಂಡರ್-19 ವಿಶ್ವಕಪ್ನ ಸಿಂಗಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಬ್ರೆವಿಸ್ ಮೆಗಾ ಟೂರ್ನಿಯಲ್ಲಿ ಇದುವರೆಗೆ ಒಟ್ಟು 506 ರನ್ ಗಳಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ದಾಖಲೆಯನ್ನು ಮುರಿದಿದ್ದಾರೆ.








