BIGGBOSS 8 – 5ನೇ ವಾರ ದೊಡ್ಮನೆಗೆ ಎಂಟ್ರಿಯಾದ ಹೊಸ ಸದಸ್ಯ..!

1 min read

BIGGBOSS 8 – 5ನೇ ವಾರ ದೊಡ್ಮನೆಗೆ ಎಂಟ್ರಿಯಾದ ಹೊಸ ಸದಸ್ಯ..!

ಬಿಗ್ ಬಾಸ್ ಪ್ರತಿ ಆವೃತ್ತಿಯಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ ಸಹಜ. ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಯಾದ ಕೆಲವರು ಶೈನ್ ಆಗ್ತಾರೆ, ಇನ್ನೂ ಕೆಲವರೂ ಫೋಕಸ್ ಆಗೋದಲ್ಲಿ. ಆದ್ರೆ ಹೊಸ ಸದಸ್ಯನ ಎಂಟ್ರಿಯಿಂದಾಗಿ ಮನೆ ಸದಸ್ಯರು ಇನ್ ಸೆಕ್ಯುರಿಟೀಸ್ ಹೆಚ್ಚಾಗುತ್ತೆ.

ಆದ್ರೆ ಬಿಗ್ ಬಾಸ್ 8ನೇ ಆವೃತ್ತಿಯ 5ನೇ ವಾರದಲ್ಲಿ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಸದಸ್ಯ ಪಕ್ಕಾ ಹೈಲೆಟ್ ಆಗಲಿದ್ದಾರೆ. ಶೈನ್ ಆಗೋದ್ರಲ್ಲೂ ಅನುಮಾನ ಇಲ್ಲ. ದೊಡ್ಮನೆಯಲ್ಲಿ ಇನ್ಮುಂದೆ ಹೆಚ್ಚು ಹೆಚ್ಚು ಹೈಡ್ರಾಮಾಗಳನ್ನ ಕೂಡ ನಿರೀಕ್ಷೆ ಮಾಡಬಹುದು.

ಅಂದ್ಹಾಗೆ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಸ್ಪರ್ಧಿ ಪತ್ರಕರ್ತ, ಸಿನಿಮಾ ನಿರ್ದೇಶಕ ಚಂದ್ರಚೂಡ ಚಕ್ರವರ್ತಿ.. ಇವರು ಮನೆಗೆ ಎಂಟ್ರಿ ಕೊಡ್ತಿದ್ದಂತೆ ಮನೆ ಸದಸ್ಯರು ಮುಖದ ಬಣ್ಣವೇ ಬಾಡಿ ಹೋಗಿದೆ. ಮನೆಯ ಪ್ರತಿ ಸದಸ್ಯರಿಗೂ ಅವರ ವರ್ತನೆ, ಸ್ವಭಾವ, ಹಾವ , ಭಾವ ಪರ್ಸನಾಲಿಟಿಯನ್ನ ಅಳೆದು ಅವರಿಗೆ ಅಂಕಗಳನ್ನ ನಿಡಿದ್ದಾರೆ. ಜೊತೆಗೆ ಕಾರಣಗಳನ್ನೂ ನೇರವಾಗಿಯೇ ನೀಡಿ ಅನೇಕರಿಗೆ ನಿಷ್ಠೂರ ಕೂಡ ಆಗಿದ್ದಾರೆ.

ಮೊದಲಿಗೆ ಮನೆಯವರೊಂದಿಗೆ ತಮ್ಮ ಪರಿಚಯ ಮಾಡಿಕೊಂಡ ಚಂದ್ರಚೂಡರವರು, ಬಳಿಕ ಮನೆಯ ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ಅಂಕಗಳನ್ನು ನೀಡಿದರು.
ಈ ವೇಳೆ ಮನೆಯ ಸದಸ್ಯರಾದ ಶಂಕರ್ ಅವರಿಗೆ 0, ವಿಶ್ವನಾಥ್ ಗೆ ಅರ್ಧ, ಶಮಂತ್ ಗೆ ಅರ್ಧ, ರಾಜೀವ್ ಗೆ 1, ಲ್ಯಾಗ್ ಮಂಜು ಗೆ 2, ದಿವ್ಯಾ ಉರುಡುಗ ಗೆ 2, ಶುಭ ಪೂಂಜಾ ಗೆ 2, ಅರವಿಂದ್ ಗೆ 3, ವೈಷ್ಣವಿ ಗೆ 3 ಗೆ 3 ಅಂಕಗಳನ್ನು ನೀಡಿದ್ದಾರೆ.

ಆದ್ರೆ ನಿಧಿ ಸುಬ್ಬಯ್ಯ ಗೆ ಮಾತ್ರ ಮನೆಯ ಎಲ್ಲ ಸದಸ್ಯರಿಗಿಂತಲೂ ಹೆಚ್ಚು ಅಂಕಗಳನ್ನ ನೀಡಿದ್ದಾರೆ. 10ಕ್ಕೆ 6 ಅಂಕಗಳನ್ನು ನೀಡಿದ್ದಾರೆ. ಮನುಷ್ಯ ಸಂದರ್ಭ ಬಂದಾಗ ತನ್ನ ನೋವನ್ನು ಹೇಳಿಕೊಂಡು ಬಿಡುತ್ತಾನೆ. ಇದು ಕನಿಷ್ಟ ಮನುಷ್ಯನ ಗುಣ. ಮನುಷ್ಯನ ಮೂಲ ಗುಣ ನಮ್ಮೊಳಗಿರುವ ನೋವು ಹಾಗೂ ಪ್ರೀತಿಯನ್ನು ಯಾರೊಂದಿಗದರೂ ಹಂಚಿಕೊಳ್ಳಬೇಕು. ಇಲ್ಲಿಯವರೆಗೂ ನಿಧಿ ಒಂದೇ ಒಂದು ಕ್ಷಣ ನೋವಿನ ಮುಖವನ್ನು ನಮ್ಮೊಂದಿಗೆ ತೋರಿಸಿಕೊಂಡಿಲ್ಲ. ಆದರೆ ಅವರ ನೋವು ಏನೆಂಬುವುದು ನನಗೆ ಗೊತ್ತು.

ಯಾರನ್ನು ತೋಳಿಗೆ ಸೇರಿಸದೇ.. ಯಾವುದೇ ತೋಳದಲ್ಲಿ, ತೋಳದ ಗುಂಪಿನ ಹಿಂಡಿನಲ್ಲಿ ಒಂದಾಗದೇ.. ಯಾರನ್ನು ಭಾವಬಂಧನಕ್ಕೆ ಒಂದಾಗದೇ.. ಯಾರಿಗೂ ಬಾಹುವನ್ನು ಕೊಡದೇ ತನ್ನಷ್ಟಕ್ಕೆ ತಾನು ತಬ್ಬಿಕೊಂಡಿರುವುದಕ್ಕೆ ಮರಕ್ಕೆ ಮಾತ್ರ ಸಾಧ್ಯ. ಅದೊಂದು ಗುಣಕ್ಕೆ ನಾನು ನಿಧಿ ಸುಬ್ಬಯ್ಯರವರಿಗೆ ಅತೀ ಹೆಚ್ಚು ಅಂಕ ನೀಡುತ್ತೇನೆ ಎಂದು ಹೇಳಿದ್ದಾರೆ.

ಧೂಮಪಾನ ನಿಷೇಧ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಕಿ ಈಗ ಕನ್ನಡ ಸಿನಿಮಾದ ನಾಯಕಿ..!

‘ಬಾಲಿವುಡ್ ಸಿಂಗಂ’ಗೆ ಬರ್ತ್ ಡೇ ಸಂಭ್ರಮ – ಭರ್ಜರಿ ಗಿಫ್ಟ್ ಕೊಟ್ಟ ‘RRR’ ತಂಡ – ಅಜಯ್ ದೇವಗನ್ ಲುಕ್ ರಿಲೀಸ್..!

ಬಾಲಿವುಡ್ ನ ಆಲಿಯಾ ಗೆ ಕೊರೊನಾ ದೃಢ..!

‘ಡಾರ್ಲಿಂಗ್’ ಹಿಂದೆ ಬಿದ್ದ ಬಾಲಿವುಡ್ ಸಿನಿಮಾ ಮಂದಿ…! ಹಾಲಿವುಡ್ ಸಿನಿಮಾದ ರೀಮೇಕ್ ನಲ್ಲಿ ಪ್ರಭಾಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd