ಬಾಲಿವುಡ್ ನ ಖ್ಯಾತ ನಟ ಗೋವಿಂದ ಅವರಿಗೆ ಕೊರೊನಾ ಪಾಸಿಟಿವ್..!
ಮುಂಬೈ: ಬಾಲಿವುಡ್ ನ ಖ್ಯಾತ ನಟ ಗೋವಿಂದ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಅಲ್ಲದೇ ಸೋಂಕಿನ ಲಕ್ಷಣಗಳು ಕಂಡುಬಂದಿದೆ. ಅವರು ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿ ಇದ್ದಾರೆ. ಈ ಬಗ್ಗೆ ಗೋವಿಂದು ಅವರ ಪತ್ನಿ ಸುನಿತಾ ಸ್ಪಷ್ಟಪಡಿಸಿದ್ಧಾರೆ.
ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಪಾಲಿಸಿದರೂ ಗೋವಿಂದ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಇನ್ನೂ ಕುಟುಂಬದ ಇತರೇ ಸದಸ್ಯರು ಟೆಸ್ಟ್ ಮಾಡಿಸಿದ್ದಾರೆ. ಆದ್ರೆ ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಸುನಿತಾ ಅವರು ತಿಳಿಸಿದ್ದಾರೆ.
ಇನ್ನೂ ಕೆಲ ದಿನಗಳ ಹಿಂದೆ ಗೋವಿಂದ ಅವರ ಪತ್ನಿ ಸುನಿತಾಗೂ ಕೊರೊನಾ ಪಾಸಿಟಿವ್ ಆಗಿತ್ತು. ಬಳಿಕ ಅವರು ಗುಣಮುಖರಾಗಿದ್ದರು. ಇದೀಗ ಗೋವಿಂದ ಅವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಎಲ್ಲಾ ಓಕೆ.. ಸಿನಿಮಾಗೆ ನಿರ್ಬಂಧ ಯಾಕೆ : ಡಾಲಿ ಧನಂಜಯ್
ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಗೂ ಕೊರೊನಾ ಪಾಸಿಟಿವ್..!
50 % ಸೀಟಿಂಗ್ ನಿರ್ಬಂಧದಲ್ಲಿ ಸಡಿಲಿಕೆ – ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಅಪ್ಪು..!