ದೆಹಲಿ ಇಸ್ರೇಲ್ ರಾಯಭಾರಿ ಕಛೇರಿ ಬಳಿ ಬಾಂಬ್ ಸ್ಪೋಟ..!
ದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಕಡಿಮೆ ತೀವ್ರತೆಯ ಐಇಡಿ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ವಾಹನಗಳು ಸಂಪರ‍್ಣ ಜಖಂಗೊಂಡಿವೆ. ಸ್ಥಳಕ್ಕೆ ವಿಶೇಷ ಪೊಲೀಸ್ ಪಡೆಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆ ಬೆನ್ನಲ್ಲೇ ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿಗೆ ಭದ್ರತೆ ಕಲ್ಪಿಸಲಾಗಿದೆ. ಘಟನೆಯಲ್ಲಿ ಐದರಿಂದ ಆರು ವಾಹನಗಳು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಔರಂಗಜೇಬ್ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಿಂದ ಕೇವಲ 50 ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
#WATCH | Delhi Police team near the Israel Embassy where a low-intensity explosion happened.
Nature of explosion being ascertained. Some broken glasses at the spot. No injuries reported; further investigation underway pic.twitter.com/RphSggzeOa
— ANI (@ANI) January 29, 2021
ದೆಹಲಿಯ ಜಿಂದಾಲ್ ಹೌಸ್ ಬಳಿ ರಸ್ತೆ ಡಿವೈಡರ್ ನ ಫ್ಲವರ್ ಪಾಟ್ ನಲ್ಲಿ ಸುಧಾರಿತ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಚಲಿಸುವ ವಾಹನದಿಂದ ಅದನ್ನು ಎಸೆದಿರುವ ಸಾಧ್ಯತೆ ಇದೆ. ಸ್ಫೋಟದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅರ‍್ಟ್ ಘೋಷಿಸಲಾಗಿದೆ. ಘಟನೆಯಲ್ಲಿ ಯಾವುದೇ ಗಾಯದ ಬಗ್ಗೆ ವರದಿಯಾಗಿಲ್ಲ. ಇಲ್ಲಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆಯ ಸಮೀಪದಲ್ಲಿರುವ ರಾಯಭಾರ ಕಚೇರಿಯ ಸುತ್ತಮುತ್ತ ನಿಲ್ಲಿಸಿದ್ದ ಹಲವಾರು ಕಾರುಗಳ ವಿಂಡ್‌ಸ್ಕ್ರೀನ್‌ಗಳು ಹಾನಿಗೊಳಗಾದವು.
ಪ್ರಪಂಚದ ಅಸಹ್ಯ, ಕೆಟ್ಟ ಆಹಾರ ಪದಾರ್ಥಗಳು..! ಭಾಗ -3
ವಿಶೇಷವಾದ ಈ ಕುಂಕುಮ ಹಚ್ಚಿ ಈ ಮಂತ್ರ ಹೇಳಿದ್ರೆ ದೇವಿ ಕೃಪೆ ದೊರೆಯುತ್ತದೆ
ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಆಗಿ ಪರಿಗಣಿಸಿ: ಪ್ರಧಾನಿಗೆ ಸುರೇಶ್ ಕುಮಾರ್ ಮನವಿ
ಜುಲೈ 16 ಕ್ಕೆ ಬರಲಿದ್ದಾನೆ ರಣಬೇಟೆಗಾರ : ಕೆಜಿಎಫ್ 2 ರಿಲೀಸ್ ಡೇಟ್ ಘೋಷಣೆ..!
ಚೆನ್ನೈ ಟೆಸ್ಟ್ ಗೆ ಸಿದ್ಧತೆ : ಹೋಟೆಲ್ ರೂಂನಲ್ಲಿ ಕೊಹ್ಲಿ ವರ್ಕೌಟ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel