ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

1 min read

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಅವಲಕ್ಕಿ ಪಾಯಸ

ಬೇಕಾಗುವ ಸಾಮಾಗ್ರಿಗಳು :

ಅವಲಕ್ಕಿ – 200 ಗ್ರಾಂ
ಬೆಲ್ಲ – 1/4 ಕೆಜಿ
ಹಾಲು – 1/2 ಲೀಟರ್
ಏಲಕ್ಕಿ – 4
ಒಣ ದ್ರಾಕ್ಷಿ/ ಗೋಡಂಬಿ – ಸ್ವಲ್ಪ
ತೆಂಗಿನಕಾಯಿಯ ಹಾಲು – 1/2 ಕಪ್
ತುಪ್ಪ
Saakshatv cooking recipe poha payasa

ಮಾಡುವ ವಿಧಾನ :
ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ ಸ್ವಲ್ಪ ತುಪ್ಪ ಹಾಕಿ, ಒಣದಾಕ್ಷಿ, ಗೋಡಂಬಿಯನ್ನು ಹುರಿದು ಪಕ್ಕದಲ್ಲಿಟ್ಟುಕೊಳ್ಳಿ.
ನಂತರ ಬಾಣಲೆಗೆ ‌ ಅವಲಕ್ಕಿಯನ್ನು ಸೇರಿಸಿ ಕಂದುಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾಯಿಸಿ. ಅದಕ್ಕೆ ಬೆಲ್ಲವನ್ನು ಸೇರಿಸಿ ಕುದಿಸಿ. ಹಾಲು ಕುದಿಯಲು ಪ್ರಾರಂಭಿಸಿದಾಗ ಹುರಿದಿಟ್ಟುಕೊಂಡ ಅವಲಕ್ಕಿಯನ್ನು ಸೇರಿಸಿ, ತಳಹಿಡಿಯದಂತೆ ಕೈಯಾಡಿಸುತ್ತಾ ಇರಿ. ಅವಲಕ್ಕಿ ಚೆನ್ನಾಗಿ ಬೆಂದ ನಂತರ ತೆಂಗಿನಕಾಯಿಯ ಹಾಲನ್ನು ಸೇರಿಸಿ. ಐದು ನಿಮಿಷ ಕುದಿಸಿ ಒಲೆಯಿಂದ ಕೆಳಗಿಳಿಸಿ.
ಈಗ ಹುರಿದಿಟ್ಟುಕೊಂಡ ಒಣ ದ್ರಾಕ್ಷಿ ಗೋಡಂಬಿ ಸೇರಿಸಿ. ನಂತರ ಪುಡಿಮಾಡಿದ ಏಲಕ್ಕಿಯನ್ನು ಹಾಕಿ ಕಲಸಿ. ರುಚಿಯಾದ ಅವಲಕ್ಕಿ ಪಾಯಸ ಸವಿಯಲು ಸಿದ್ದ.

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಬೂದುಕುಂಬಳಕಾಯಿ ಮಜ್ಜಿಗೆ ಹುಳಿ

ಬೇಕಾಗುವ ಸಾಮಗ್ರಿಗಳು

ಬೂದುಕುಂಬಳದ ಸಣ್ಣ ಹೋಳುಗಳು – 2 ಕಪ್‌,
ಹಸಿಮೆಣಸು – 9ರಿಂದ 10,
ಜೀರಿಗೆ – 1/4 ಚಮಚ,
ಕಾಳುಮೆಣಸು – 6,
ಹಸಿಶುಂಠಿ– 1 ತುಂಡು,
ಉಪ್ಪು – ರುಚಿಗೆ ತಕ್ಕಷ್ಟು,
ಅರಶಿನಪುಡಿ – 1/4 ಚಮಚ,

ಬೆಳ್ಳುಳ್ಳಿ – 3 ಎಸಳು,
ಕಾಯಿತುರಿ – 1/4 ಕಪ್‌,
ಮೊಸರು – ಅಗತ್ಯವಿರುವಷ್ಟು
ಗೋಡಂಬಿ – ಸ್ವಲ್ಪ
ಅಕ್ಕಿ – 1 ಚಮಚ

ಒಗ್ಗರಣೆಗೆ
ಸಾಸಿವೆ – 1 ಚಮಚ,
ಕರಿಬೇವಿನ ಸೊಪ್ಪು – ಸ್ವಲ್ಪ
ಕೆಂಪು ಮೆಣಸು – 2
ಎಣ್ಣೆ – ಸ್ವಲ್ಪ

ಮಾಡುವ ವಿಧಾನ:

ಮೊದಲಿಗೆ ಬೂದುಗುಂಬಳದ ಹೋಳುಗಳನ್ನು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ.‌ 1 ಚಮಚ ಅಕ್ಕಿಯನ್ನು 1/2 ಗಂಟೆ ನೀರಲ್ಲಿ ನೆನೆಸಿ. ‌ ನಂತರ ಕಾಯಿತುರಿ, ಹಸಿಮೆಣಸು, ಜೀರಿಗೆ, ಗೋಡಂಬಿ, ನೆನೆಸಿದ ಅಕ್ಕಿ, ಹಸಿಶುಂಠಿ, ಬೆಳ್ಳುಳ್ಳಿ, ಗೋಡಂಬಿಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ‌ನಂತರ ಈ ಮಿಶ್ರಣಕ್ಕೆ ಬೆಂದ ಹೋಳುಗಳನ್ನು ಸೇರಿಸಿ ಉಪ್ಪು, ಅರಿಶಿನ ಪುಡಿ, ಇಂಗನ್ನು ಹಾಕಿ ಕುದಿಸಿ. ಬಳಿಕ ಮೊಸರನ್ನು ಸೇರಿಸಿ. ಈಗ ಸಾಸಿವೆ, ಕೆಂಪು ಮೆಣಸು, ಕರಿಬೇವಿನ ಒಗ್ಗರಣೆ ಕೊಟ್ಟರೆ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ ರೆಡಿ.

ಪಲ್ , ಟೇಸ್ಟಿ ಅಡುಗೆ ರೆಸಿಪಿಗಳು

ಕ್ಯಾರೆಟ್ ಹೋಳಿಗೆ

ಕಣಕ
1 ಮೈದಾ
1/4 ಚಿರೋಟಿ ರವೆ,
1/2 ಚಮಚ ಉಪ್ಪು,
ಎಣ್ಣೆ
ಅಗತ್ಯವಿರುವಷ್ಟು ನೀರು

ಹೂರಣ
1/4 ಕೆ.ಜಿ‌ ಕ್ಯಾರೆಟ್
200 ಗ್ರಾಂ ಬೆಲ್ಲ
ತುಪ್ಪ
ಏಲಕ್ಕಿ ಪುಡಿ 1/2
Saakshatv cooking recipe Carrot holige

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಮೈದಾ, ಚಿರೋಟಿ ರವೆ ಮತ್ತು ಉಪ್ಪು ಹಾಕಿ, ಎಷ್ಟು ಬೇಕೋ ಅಷ್ಟು ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ಚೆನ್ನಾಗಿ ನಾದಿಸಿ ಕಲೆಸಿ. ಸ್ವಲ್ಪ ಎಣ್ಣೆ ಮೇಲೆ ಹಾಕಿ 2 ಗಂಟೆ ನೆನೆಯಲು ಬಿಡಿ..

ಈಗ 1/4 ಕೆ.ಜಿ‌ ಕ್ಯಾರೆಟ್ ಚೆನ್ನಾಗಿ ತೊಳೆದು ತುರಿದಿಟ್ಟುಕೊಳ್ಳಿ.
ನಂತರ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವ ವಾಸನೆ ಬರುವ ತನಕ ಹುರಿದು ಪಕ್ಕ ಇಡಿ.

200 ಗ್ರಾಂ ಬೆಲ್ಲ ತುರಿದು ಅಥವಾ ಜಜ್ಜಿ 4 ಚಮಚ ನೀರು ಸೇರಿಸಿ ಒಲೆಯ ಮೇಲಿಟ್ಟು ಕರಗಿಸಿ ಸೋಸಿ ಪಾಕ ಮಾಡಿಕೊಳ್ಳಿ.‌ ಪುಡಿಮಾಡಿದ ಏಲಕ್ಕಿಯನ್ನು ಸೇರಿಸಿ ಕಲಸಿ. ಈಗ ಹುರಿದಿಟ್ಟುಕೊಂಡ ಕ್ಯಾರೆಟ್ ಅನ್ನು ಮಿಶ್ರ ಮಾಡಿ. ಹೂರಣ ಸ್ವಲ್ಪ ತಣ್ಣಗಾದ ನಂತರ ಮೃದುವಾದ ಸಣ್ಣ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
Saakshatv cooking recipe Carrot holige

ನಂತರ ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಬಟ್ಟಲಿನಾಕಾರಕ್ಕೆ ಚಪ್ಪಟೆ ಮಾಡಿ. ಹೂರಣದ ಉಂಡೆಯನ್ನು ಒಳಗೆ ಸೇರಿಸಿ ಮತ್ತು ಅಂಚುಗಳನ್ನು ಮಡಿಸಿ.
ಬಳಿಕ ದುಂಡಗಿನ ಆಕಾರದಲ್ಲಿ ತೆಳುವಾಗಿ ಲಟ್ಟಿಸಿ.
ನಂತರ ಅದನ್ನು ತವಾದಲ್ಲಿ ಹುರಿಯಿರಿ. ಹುರಿಯುವಾಗ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ ಎರಡೂ ಬದಿಗಳನ್ನು ಸ್ವಲ್ಪ ಒತ್ತಿ ಬೇಯಿಸಿ. ಈಗ ಬಿಸಿ ಬಿಸಿಯಾದ ಕ್ಯಾರೆಟ್ ಹೋಳಿಗೆ ರೆಡಿ.

ಆರೋಗ್ಯದ ಜೊತೆಗೆ ರುಚಿಕರ ರೆಸಿಪಿಗಳು

ಮಾವಿನ ಪದಾರ್ಥ (ಮಾವಿನ ಹಣ್ಣಿನ ಸಾಸಿವೆ)

ಬೇಕಾಗುವ ಸಾಮಗ್ರಿಗಳು

ಮಾಗಿದ ಮಾವಿನ ಹಣ್ಣು – 4
ತುರಿದ ತೆಂಗಿನಕಾಯಿ 1/2 ಕಪ್
ಎಣ್ಣೆ – 2 ಚಮಚ
ಸಾಸಿವೆ -1/2 ಚಮಚ
ಅರಿಶಿನ ‌-1/4 ಚಮಚ
ಬೆಲ್ಲ – 1/2 ಕಪ್
ಕಾಶ್ಮೀರಿ ಮೆಣಸು – 3
ಬ್ಯಾಡಗಿ ‌ಮೆಣಸು – 3
ಹುಣಸೆ ಹಣ್ಣಿನ ರಸ -2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe mango Curry

ಒಗ್ಗರಣೆಗೆ

ಎಣ್ಣೆ – 2 ಚಮಚ
ಸಾಸಿವೆ -1/4 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಇಂಗು -ಚಿಟಕಿಯಷ್ಟು

ಮಾಡುವ ವಿಧಾನ

ಮಾಗಿದ ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳಿ. ನಂತರ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಪಕ್ಕಕ್ಕೆ ಇರಿಸಿಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ‌ಕಾಶ್ಮೀರಿ ಮತ್ತು ಬ್ಯಾಡಗಿ ಮೆಣಸನ್ನು ಸೇರಿಸಿ ಹುರಿದು ಪಕ್ಕದಲ್ಲಿ ಇಡಿ
ಈ ಬಾಣಲೆಗೆ ಸಾಸಿವೆ, ತುರಿದ ತೆಂಗಿನಕಾಯಿ, ಅರಿಶಿನವನ್ನು ಸೇರಿಸಿ ಹುರಿಯಿರಿ.
ನಂತರ ಇದಕ್ಕೆ ಹುರಿದಿಟ್ಟುಕೊಂಡ ಮೆಣಸು, ಹುಣಸೆ ರಸ ಸೇರಿಸಿ, ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ಗ್ರೈಂಡ್ ಮಾಡಿ ಪಕ್ಕದಲ್ಲಿ ಇರಿಸಿ.
Saakshatv cooking recipe mango Curry

ಸಿಪ್ಪೆ ತೆಗೆದಿಟ್ಟುಕೊಂಡ ಮಾವಿನ ಹಣ್ಣುಗಳನ್ನು ಬೆಲ್ಲದೊಂದಿಗೆ ಸ್ವಲ್ಪ ನೀರಿನಲ್ಲಿ ಕುದಿಸಿ. ಈಗ ಅದಕ್ಕೆ ಗ್ರೈಂಡ್ ಮಾಡಿಟ್ಟುಕೊಂಡ ಮಸಾಲೆಯನ್ನು ಸೇರಿಸಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ. ಗ್ರೇವಿಯ ದಪ್ಪವನ್ನು ಹೊಂದಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
ಸಾಸಿವೆ, ಇಂಗು ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ‌ಕೊಡಿ.

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಕೂಲ್ ಕೂಲ್ ಸೌತೆಕಾಯಿ ಜ್ಯೂಸ್

ಬೇಕಾಗುವ ಸಾಮಗ್ರಿಗಳು

ಸೌತೆಕಾಯಿ – 1
ಪುದಿನಾ ಎಲೆಗಳು – ಸ್ವಲ್ಪ
ನೀರು – 1 ಕಪ್
ನಿಂಬೆ – 1
ಉಪ್ಪು ಚಿಟಿಕೆ

Saakshatv cooking recipe cucumber juice

ಮಾಡುವ ವಿಧಾನ

ಸೌತೆಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರಿನಲ್ಲಿ ಹಾಕಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ‌ಪುದೀನ ಎಲೆಗಳ ಚೂರು, ಉಪ್ಪು, ನಿಂಬೆ ರಸ ಮತ್ತು ನೀರು ಸೇರಿಸಿ 5ನಿಮಿಷ ಚೆನ್ನಾಗಿ ಗ್ರೈಂಡ್ ಮಾಡಿ.
ಬಳಿಕ ಈ ಮಿಶ್ರಣವನ್ನು ಸೋಸಿ, ಬೇಕಿದ್ದರೆ ಐಸ್ ಕ್ಯೂಬ್ ಸೇರಿಸಿ ಕುಡಿಯಿರಿ. ಸೌತೆಕಾಯಿ ಜ್ಯೂಸ್, ಬಿಸಿಲಿನ ದಾಹ ತಣಿಸುವ ಜೊತೆಗೆ ದೇಹಕ್ಕೆ ಕೂಡ ತುಂಬಾ ತಂಪು ಮತ್ತು ಆರೋಗ್ಯಕರ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd