ಕನಸಿನಲ್ಲಿ ರಾಕ್ಷಸರು , ದೆವ್ವ, ಭೂತ ಕಾಣಿಸಿದರೆ ಅದರ ಅರ್ಥವೇನು..?
ಕನಸುಗಳ ಬಗ್ಗೆ ಹಲವರಿಗೆ ಹಲವು ರೀತಿಯಾದ ನಂಬಿಕೆಗಳಿವೆ.. ಕೆಲವರು ಇದಕ್ಕೆ ಅದ್ರದ್ದೇ ಆದ ಕಾರಣ ಇದೆ.. ಈ ರೀತಿ ಕನಸು ಬಂದ್ರೆ ಹಾಗಾಗುತ್ತೆ ಇದು ಒಳ್ಲೆಯದು ಅದು ಕೆಟ್ಟದ್ದು ಹೀಗೆ ನಾನಾ ರೀತಿಯಾದ ಕನಸುಗಳಿಗೆ ನಾನಾ ಅರ್ಥ ಕಲ್ಪಿಸುವವರ ನಡುವೆ ಇನ್ನೂ ಹಲವರು ಕನಸನ್ನ ಕೇವಲ ನಿದ್ದೆ ಮಾಡಿ ಏಳುವ ತನಕ ಅದಾದದ ನಂತರ ಅದು ಕನಸಷ್ಟೇ ಯಾವುದೇ ಅರ್ಥವಿಲ್ಲ ಅಂತಲೂ ಯೋಚನೆ ಮಾಡ್ತಾರೆ.
ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ. ಅವರ ಪ್ರಕಾರ ಒಂದು ಕನಸು ವ್ಯಕ್ತಿಯ ಹಿಂದಿನ, ವರ್ತಮಾನ/ಭವಿಷ್ಯದ ಪ್ರತಿಬಿಂಬವಾಗಿದೆ. ನಮಗೆ ಅನೇಕ ರೀತಿಯಾದ ಕನಸುಗಳು ಬೀಳುತ್ತವೆ. ಪ್ರಪಂಚದಾದ್ಯಂತ ಜನರು ನಿದ್ದೆ ಮಾಡುವಾಗ ಕನಸು ಕಾಣುತ್ತಾರೆ. ಮತ್ತು ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ. ಕನಸುಗಳು ನಮಗೆ ಹಿಂದೆ ಸಂಭವಿಸಿದ ಅಥವಾ ವರ್ತಮಾನದ ಬಗ್ಗೆ ಅಥವಾ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಸೂಚಕಗಳು ಎಂದು ಕೆಲವರು ಹೇಳ್ತಾರೆ.
ನೀವು ರಾಕ್ಷಸರ ಅಥವಾ ಭೂತ ಪ್ರೇತ ಪಿಶಾಚಿ ದೆವ್ವಗಳ ಬಗ್ಗೆ ಬೇರೆಯರು ಹೇಳುವ ಕಥೆಗಳನ್ನ ಕೇಳಿದ್ರೆ ಅಥವ ಅಂತಹ ಸಿನಿಮಾಗಳನ್ನ ನೋಡಿದಾಗ ಸಹಜವಾಗಿಯೇ ಭಯ ಪಡೋದು , ಥ್ರಿಲ್ , ಎಕ್ಸೈಟ್ ಆಗೋದು ಇವೆಲ್ಲಾ ಕಾಮನ್. ಮುಖ್ಯವಾಗಿ ಮಾನ್ಸ್ ಟರ್ ( ರಾಕ್ಷಸರು ) ಕೆಟ್ಟದ್ದನ್ನೇ , ಕೆಡುಕನ್ನೇ ಸೂಚಿಸುವಂತಹವರು. ಇಂತಹ ರಾಕ್ಷಸರು ದೆವ್ವ ಭೂತ , ಪ್ರೇತ ಪಿಶಾಚಿಗಳು ಕನಸಿನಲ್ಲಿ ಬಂದ್ರೆ ಅದರ ಅರ್ಥ ಏನಿರಬಹುದು ಎಂಬ ಕುತೂಹಲ ಹಾಗೂ ಗಾಬರಿಯೂ ಇರುತ್ತದೆ. ಮಧ್ಯರಾತ್ರಿಯಲ್ಲಿ ಇಂತಹ ಕನಸುಗಳನ್ನ ಕಂಡಾಗ ಬೆಚ್ಚಿ ಒಮ್ಮೆಲೆ ಎದ್ದು ಬಿಡ್ತೇವೆ. ಕೆಲವೊಮ್ಮೆ ಭಯದಲ್ಲಿ ಕನವರಿಸುವುದು ಕಿರುಚಾಡುವುದೂ ಉಂಟು. ನಾವು ದೆವ್ವಗಳ ಬಗ್ಗೆ ಒಂದು ಕನಸನ್ನು ವಿಶ್ಲೇಷಿಸುವುದಾದರೆ ಒತ್ತಡ , ಆರಾಮದಾಯಕಕರವಲ್ಲದ ಯಾವುದೋ ಒಂದು ಕಾರ್ಯವನ್ನು ನಿಭಾಯಿಸುತ್ತಾಯಿದ್ದೇವೆ ಅಂತಲೂ ಯೋಚಿಸಬಹುದಾಗಿದೆ. ಅದು ಒಬ್ಬ ವ್ಯಕ್ತಿಯ ಪರಿಸ್ಥಿತಿಯನ್ನು ಅಥವಾ ಬಿಕ್ಕಟ್ಟನ್ನು ಪ್ರತಿನಿಧಿಸಬಹುದು. ನಾವು ನಿಜಜೀವನದಲ್ಲಿ ಯಾರನ್ನ ನಂಬಲಾಗದಂತಹ ವ್ಯಕ್ತಿ ಅವರೊಂದಿಗೆ ನಾವು ಸುರಕ್ಷಿತರಲ್ಲ ಎಂದು ಬಾವಿಸುತ್ತೇವೋ ಕೆಲವೊಮ್ಮೆ ಆ ವ್ಯಕ್ತಿಗಳು ಸಹ ಕನಸಿನಲ್ಲಿ ರಾಕ್ಷಸರು ಅಥವ ದೆವ್ವ ಪಿಸಾಚಿಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದು ಕೆಲ ತಜ್ಞರು ಹೇಳ್ತಾರೆ.