Food : ಸಿಂಪಲ್ ರೀತಿಯಲ್ಲಿ ತಯಾರಿಸಿ ನೋಡಿ ಈ ರುಚಿಕರ್ ಎಗ್ ರೋಲ್..!!!

1 min read

Food : ಸಿಂಪಲ್ ರೀತಿಯಲ್ಲಿ ತಯಾರಿಸಿ ನೋಡಿ ಈ ರುಚಿಕರ್ ಎಗ್ ರೋಲ್..!!!

EGG ROLLS

ರೋಲ್ ಗಳನ್ನ ನಾನಾ ರೀತಿಯಲ್ಲಿ , ವಿಧಾನಗಳಲ್ಲಿ ವಿವಿಧ ಪದಾರ್ಥಗಳಿಂದ ತಯಾರಿಸಬಹುದು…

ಮೈದಾ ಹಿಟ್ಟಿನ ಅಥವ ಗೋದಿ ಹಿಟ್ಟಿನಿಂದ ತಯಾರಿಸಿಕೊಂಡ ಚಪಾತಿ – 1

ಮೊಟ್ಟೆ – 1

ಚೀಸ್ ಒಂದು ಕ್ಯೂಬ್ ( ಆಪ್ಷನಲ್ )

ಉಪ್ಪು

ಬ್ಲಾಕ್ ಪೆಪ್ಪರ್ ಪೌಡರ್

ಅರಿಶಿಣ ಪುಡಿ

ಹೆಚ್ಚಿಟ್ಟುಕೊಂಡ ಈರುಳ್ಳಿ 1 ಅಥವ ಅರ್ಧ ಕಪ್

ಹಸಿಮೆಣಸಿನಕಾಯಿ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.

ಟೊಮಾಟೋ ಕೆಚನ್…

ಮಯೋನಿಸ್ ( ಆಪ್ಷನಲ್ )

ಮಾಡುವ ವಿಧಾನ  :

ಮೊದಲಿಗೆ ಒಂದು ಬಟ್ಟಲಿಗೆ  ಮೊಟ್ಟೆ , ಈರುಳ್ಳಿ , ಮೆಣಸಿನ ಕಾಯಿ , ಉಪ್ಪು , ಪೆಪ್ಪರ್ ಪುಡಿ ಹಾಕಿ ಚೆನ್ನಾಗಿ ಬೀಟ್ ಮಾಡಿ ,,, ಮಿಕ್ಸ್ ಮಾಡಿಕೊಳ್ಳಿ ,,, ನಾ ನಂತರ ಒಂದು ಪಾನ್ ಕಾಯಲು ಇಡಿ.. ಕಾದ ನಂತರ ಒಂದು ಸ್ಪೂನ್ ಎಣ್ಣೆ ಹಾಕಿ ಅದ್ರ ಮೇಲೆ ಕಲಸಿಟ್ಟುಕೊಂಡ ಮೊಟ್ಟೆ ಮಿಶ್ರಣ ಹಾಕಿ ಸ್ಪ್ರೆಡ್ ಮಾಡಿ.. ಸ್ಪಲ್ಪ ಬೆಂದ ನಂತರ ಅದೇ ಮಿಶ್ರಣದ ಮೇಲೆ ಚಪಾತಿ ಇಡಿ… ನಂತರ ಅದನ್ನ ಮೊಟ್ಟೆ ಸಮೇತ ತಿರುಗಿಸಿ.. ಈ ವೇಳೆ ಬೇಕಿದ್ದಲ್ಲಿ ಚೀಸ್ / ಮಯೋನಿಸ್ ಹಾಕಿಕೊಳ್ಳಿ… ಎರಡರಲ್ಲಿ ಒಂದು… ಅದು ಬೇಕಿದ್ದರಷ್ಟೇ…   ಚೀಸ್ ಹಾಕಿದ್ರೆ 3 ನಿಮಿಷ ಹಾಕಿಯೇ  ಪ್ಲೇಟ್ ಮುಚ್ಚಿ ಬಿಡಿ.. ಚೀಸ್ ಹಾಕದೇ ಇದ್ದರೆ ಒಂದು 30 ರಿಂದ 40 ಸೆಕೆಂಡ್ ಸಾಕು..

ಒಂದು ಪ್ಲೇಟ್ ತೆಗೆದುಕೊಂಡು ನಾಜೂಕಾಗಿ ಮೊಟ್ಟೆ ಚಪಾತಿ ಒಟ್ಟಿಗೆ ಪ್ಲೇಟ್ ಗೆ ತೆಗೆದುಕೊಳ್ಳಿ.. ಈ ವೇಳೆ ಬೇಕಿದ್ರೆ ಮೊಟ್ಟೆ ಮೇಲೆ ಕೆಚಪ್ ಹಾಕಿಕೊಳ್ಳಬಹುದು… ಇಲ್ಲ ನಿಮ್ಮಿಷ್ಟದ ಸಾಸ್ ಹಾಕಿಕೊಳ್ಬಹುದು… ಆನ ನಂತರ ಅದನ್ನ ರೋಲ್ ಮಾಡಿ… ಒಂದು ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.. ಶಕ್ತಿಯ ಮೂಲ ಮೊಟ್ಟೆ.. ಮಕ್ಕಳಿಗೆ ಭರಪೂರ ಪೌಷ್ಠಿಕಾಂಶವೂ ,,, ಜೊತೆಗೆ ಟೇಸ್ಟಿ ಬ್ರೇಕ್ ಫಾಸ್ಟ್ ಅಥವ ಸ್ನಾಕ್ಸ್ ಆಗಲಿದೆ..

 

 

 

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd