ಗೋಬಿ ಮಂಚೂರಿ
ಬೇಕಾಗುವ ಸಾಮಗ್ರಿಗಳು
ಸ್ವಚ್ಛಗೊಳಿಸಿದ ಹೂಕೋಸು(ಗೋಬಿ) – 1 ಬೌಲ್
ಕಾರ್ನ್ ಪ್ಲೋರ್ – 1/2 ಬೌಲ್
ಜೋಳದ ಹಿಟ್ಟು – 2 ಚಮಚ
ಅಕ್ಕಿ ಹಿಟ್ಟು – 1 ಚಮಚ
ಮೆಣಸಿನ ಪುಡಿ 1/2-1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಬೆಳ್ಳುಳ್ಳಿ ಎಸಳು – 8-10
ಹೆಚ್ಚಿದ ಈರುಳ್ಳಿ – 1/4 ಕಪ್
ಹೆಚ್ಚಿದ ಹಸಿಮೆಣಸಿನ ಕಾಯಿ – 4-5
ಚಿಕ್ಕದಾಗಿ ಹೆಚ್ಚಿದ ಶುಂಠಿ – 1ಚಮಚ
ಹೆಚ್ಚಿದ ದೊಣ್ಣೆ ಮೆಣಸಿನ ಕಾಯಿ – 1/2 ಕಪ್
ಟೊಮೆಟೋ ಸಾಸ್ – 4-5 ಚಮಚ
ಚಿಲ್ಲಿ ಸಾಸ್ – 2-3 ಚಮಚ
ಸೋಯಾ ಸಾಸ್ – 2 ಚಮಚ
ಮೆಣಸಿನ ಪುಡಿ 1/2-1 ಚಮಚ
ಕರಿಮೆಣಸಿನ ಪುಡಿ – 1/4 ಚಮಚ
ಮಾಡುವ ವಿಧಾನ
ಮೊದಲಿಗೆ ಸ್ವಚ್ಛಗೊಳಿಸಿದ ಹೂಕೋಸನ್ನು 2 ನಿಮಿಷ ಕುದಿಯುವ ನೀರಿನಲ್ಲಿ ಉಪ್ಪು ಸೇರಿಸಿ ಬೇಯಿಸಿ. ನಂತರ ನೀರನ್ನು ಸೋಸಿ ತೆಗೆಯಿರಿ.
ಈಗ ಸಾಸ್ ತಯಾರಿಸಲು 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ನುಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ ಹುರಿಯಿರಿ.
ನಂತರ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು ಮತ್ತು ದೊಣ್ಣೆ ಮೆಣಸು ಸೇರಿಸಿ ಹುರಿಯಿರಿ. ನಂತರ ಮೆಣಸಿನ ಪುಡಿ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ. ಈಗ ಅದಕ್ಕೆ ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. ಸ್ವಲ್ಪ ಮಂದವಾಗುವವರೆಗೆ ಮಗುಚಿ.
ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಈಗ ಸಾಸ್ ತಯಾರಾಗಿದೆ.
ಈಗ ಒಂದು ಬೌಲ್ ಗೆ ಕಾರ್ನ್ ಪ್ಲೋರ್ ಹಾಕಿ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ. ಈ ಮಿಶ್ರಣಕ್ಕೆ ಗೋಬಿ ಚೂರುಗಳನ್ನು ಹಾಕಿ ಕಲಸಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಹೂಕೋಸಿನ ಚೂರುಗಳನ್ನು ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ ತೆಗೆಯಿರಿ.
ನಂತರ ತಯಾರಿಸಿದ ಸಾಸ್ ಗೆ ಕರಿದ ಗೋಬಿ ಸೇರಿಸಿ , ದೊಡ್ಡ ಉರಿಯಲ್ಲಿ ಚೆನ್ನಾಗಿ ಕಲಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ರುಚಿಯಾದ ಗೋಬಿ ಮಂಚೂರಿ ಸವಿಯಲು ರೆಡಿಯಾಗಿದೆ.