ಹಸಿರು ಪಟಾಕಿ ಬಗ್ಗೆ ನನಗೂ ಗೊತ್ತಿಲ್ಲ : ಸುಧಾಕರ್
ಮೈಸೂರು : ಕೊರೊನಾ ಹಿನ್ನೆಲೆ ಈ ಬಾರಿಯ ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಆದ್ರೆ ಹಸಿರು ಪಟಾಕಿ ಹೊಡೆಯಬಹುದು ಎಂದು ಹೇಳಿದೆ.
ಈ ಬಗ್ಗೆ ಮೈಸೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಬಗ್ಗೆ ನಮ್ಮ ಇಲಾಖೆಯಿಂದ ಮುಖ್ಯಮಂತ್ರಿಗಳಿಗೆ ತಜ್ಞರ ಸಮಿತಿ ವರದಿ ಕೊಟ್ಟಿದ್ದು, ಅದನ್ನು ಸಿಎಂಗೆ ನೀಡಿದ್ದೇವೆ.
ಆ ವರದಿಯಲ್ಲಿ ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿಯನ್ನು ಮಾತ್ರ ಉಪಯೋಗಿಸಬೇಕು ಬೇರೆ ಪಟಾಕಿಯನ್ನು ಉಪಯೋಗಿಸಬಾರದು ಎಂದಿದೆ.
ದೀಪಾವಳಿ ದಿನ ರಾತ್ರಿ 8 ರಿಂದ 10 ಗಂಟೆ ಸಮಯ ಈ ಪಟಾಕಿ ಸಿಡಿಸಲು ಸಮಯ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಹಸಿರು ಪಟಾಕಿ ಎಂದರೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಸಿರು ಪಟಾಕಿ ಎಂದರೆ ನನಗೂ ಗೊತ್ತಿಲ್ಲ, ತಿಳಿದುಕೊಂಡು ಹೇಳುತ್ತೇನೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಉಪಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿ, ಚುನಾವಣೆಯ ಪ್ರಚಾರದ ವೇಳೆ ನಾನು ಮುನಿರತ್ನ 50000 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದೆ.
ಅದು ಫಲಿತಾಂಶದಲ್ಲಿ ಸಾಬೀತಾಗಿದೆ ಎಂದರು.
ಸುಳ್ಳು ಹೇಳುವುದು ಕಾಂಗ್ರೆಸ್ ರಕ್ತಗತ : ಈಶ್ವರಪ್ಪ ಕಿಡಿ
ಇನ್ನು ಕೋವಿಡ್ ಸಂದರ್ಭದಲ್ಲಿ ಆರ್.ಆರ್.ನಗರದ ಗ್ರೌಂಡ್ ರಿಪೋರ್ಟ್ ತಿಳಿಯಲು ಕಾಂಗ್ರೆಸ್ ಪಕ್ಷ ವಿಫಲವಾಗಿದೆ.
ಡಿ.ಕೆ. ಬ್ರದರ್ಸ್ ಇಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅವರ ಮೇಲೆ ನಾನು ಆಪಾದನೆ ಮಾಡುವುದಿಲ್ಲ.
ಕಾಂಗ್ರೆಸ್ ನವರು ಒಟ್ಟಾಗಿ ಆರ್.ಆರ್.ನಗರದ ಗ್ರೌಂಡ್ ರಿಪೋರ್ಟ್ ತಿಳಿದುಕೊಳ್ಳಲು ವಿಫಲರಾಗಿದ್ದು, ಅಲ್ಲಿನ ರಿಯಾಲಿಟಿ ಅವರಿಗೆ ಅರ್ಥ ಆಗಿಲ್ಲ ಎಂದು ಹೇಳಿದರು.
ಇನ್ನು ಹಣದಿಂದ ಚುನಾವಣೆ ಗೆದ್ದಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್, ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂದು ಅವರನ್ನೇ ಕೇಳಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಿ, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ದೆಹಲಿಗೆ ಹೋಗಿ ಚರ್ಚೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುವುದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟ ವಿಚಾರ.
ಜಾತಿ ರಾಜಕಾರಣ ಮಾಡುವವರಿಗೆ ಉಪಚುನಾವಣೆ ಪಾಠ; ಬಿ.ಸಿ.ಪಾಟೀಲ್
ನಮಗೆ ಅದರ ಉಸಾಬರಿ ಬೇಡ, ಎಲ್ಲರಿಗೂ ಒಳ್ಳೆಯದು ಆಗುತ್ತದೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel