“ಕೊಚ್ಚೆಗೆ ಕಲ್ಲು ಹಾಕಲ್ಲ” , ಮೆಂಟಲಿ ಡಿಸ್ಟರ್ಬ್ ಅದಾಗ ಟ್ರೀಟ್ಮೆಂಟ್ ತಗೊಳೋದು ಒಳ್ಳೆಯದು : ಇಂದ್ರಜಿತ್
ಬೆಂಗಳೂರು: ದರ್ಶನ್ ವಿರುದ್ಧ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪ ಮಾಡಿರುವ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಿಂದ್ರಜಿತ್ ಲಂಕೇಶ್ ಅವರು ಇದೀಗ ಮತ್ತೊಮ್ಮೆ ದಾಸನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಕೊಚ್ಚೆಗೆ ನಾನು ಹಾಕಲ್ಲ. ನಟ ದರ್ಶನ್ ಮಾನಸಿಕವಾಗಿ ವಿಚಲಿತರಾಗಿದ್ದು, ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.
“ನಿರ್ದೇಶಕರು ಸಿನಿಮಾ ಮಾಡಿದ್ರೇನೇ ನಟ ಸ್ಟಾರ್ ಆಗೋದು” : ದರ್ಶನ್ ವಿರುದ್ಧ ಪ್ರೇಮ್ ಬೇಸರ
ಅಲ್ಲದೇ ಅವರೇ ತಮ್ಮನ್ನು ಮೂರು ಬಿಟ್ಟವರು ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ ಮೂರು ಬಿಟ್ಟವರ ಜೊತೆ ಏನು ಮಾತನಾಡೋದು. ಕೊಚ್ಚೆಗೆ ಕಲ್ಲು ಎಸೆಯೋಕೆ ಇಷ್ಟ ಇಲ್ಲ. ನಾನು ಲಾಯರ್ ಹತ್ತಿರ ಹೋಗಿ ಕಾನೂನು ಮುಖಾಂತರ ಎಲ್ಲವನ್ನು ಎದುರಿಸುತ್ತೇನೆ. ಈ ಎಲ್ಲ ಬೆಳವಣಿಗೆಯಿಂದ ನಾನೇನು ವಿಚಲಿತನಾಗಿಲ್ಲ. ಓರ್ವ ಬಡವ ಮತ್ತು ಸಾಮಾನ್ಯ ವ್ಯಕ್ತಿಯ ಮೇಲೆ ಹಲ್ಲೆ ಆಗಿರೋದು ಮುಂದಿದ್ದೇನೆಯೇ ಹೊರತು ಬೇರಾವ ಉದ್ದೇಶಕ್ಕೂ ಅಲ್ಲ ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಇನ್ ಸ್ಟಾಗ್ರಾಂನಲ್ಲಿ 1.90 ಕೋಟಿ ಫಾಲೋವರ್ಸ್..!
ಇದೇ ವೇಳೆ ಸತತವಾಗಿ ಈ ರೀತಿ ಘಟನೆಗಳು ನಡೆದಾಗ ದರ್ಶನ್ ಅವರು ಸಲಹೆ ಮತ್ತು ಚಿಕಿತ್ಸೆ ಅಥವಾ ಸಹಾಯ ತೆಗೆದುಕೊಳ್ಳಬೇಕು. ದರ್ಶನ್ ಗೆ ಯಾರದೋ ಒಬ್ಬರ ಸಹಾಯದ ಅವಶ್ಯಕತೆ ಇದೆ. ಇನ್ನೂ ದರ್ಶನ್ ನಡೆಸಿರುವ ಹಲ್ಲೆಗಳ ಕುರಿತು ದಾಖಲೆಗಳಿವೆ. ಅದನ್ನು ಎಲ್ಲಿಗೆ ತಲುಪಿಸಬೇಕು ಅಲ್ಲಿಗೆ ತಲುಪಿಸುತ್ತೇನೆ ಎಂದಿದ್ದಾರೆ.