ಕೇರಳದಲ್ಲಿ ವರುಣನ ಆರ್ಭಟ , ಭೂಕುಸಿತ – 24 ಸಾವು
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರೋ ಪರಿಣಾಮ ಕೇರಳದಾದ್ಯಂತ ಭಾರೀ ಮಳೆಯಾಗ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಈವರೆಗೂ ಸಾವನಪ್ಪಿದ್ದವರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ಹವಾಮಾನ ಇಲಾಖೆಯು 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಕೋಟಂ ನಲ್ಲಿ 13 , ಇಡುಕ್ಕಿಯಲ್ಲಿ 9 ಜನರ ಮೃತದೇಹಗಳು ಸಿಕ್ಕಿವೆ. ಇನ್ನಿಬ್ಬರ ಮೃತದೇಹಗಳು ಪತ್ತೆಯಾಗಿಲ್ಲ. ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ನಾಪತ್ತೆಯಾಗಿರುವ ಇಬ್ಬರು ಇಡುಕ್ಕಿ ಜಿಲ್ಲೆಯವರಾಗಿದ್ದು ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.
ಅಲಪ್ಪುಳ, ಪಟ್ಟಣಂತಿಟ್ಟ, ಎರ್ನಾಕುಲಂ, ಮಲಪ್ಪುರಂ ಸೇರಿದಂತೆ ಅಪಾಯದ ಸುಚನೆ ಇರುವ ಜಿಲ್ಲೆಗಳಲ್ಲಿ NDRF ತಂಡಗಳನ್ನ ನಿಯೋಜನೆ ಮಾಡಲಾಗಿದೆ. ಸೇನೆಯ ಎರಡು ತಂಡಗಳನ್ನು ತಿರುವನಂತಪುರಂ ಮತ್ತು ಕೊಟಯಂ ಜಿಲ್ಲೆಗಳಿಗೆ ನಿಯೋಜಿಸಲಾಗುವುದು ಎಂದು ತಿಳಿಸಲಾಗಿದೆ.