ಟಾಪ್ ಸಿನಿಮಾ ಸುದ್ದಿಗಳು : LATEST UPDATES
ಪೂರ್ಣ ಸುದ್ದಿಗಳನ್ನು ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ನಾಯಕಿ ಈ ಕೊರಿಯಾದ ಕ್ಯೂಟ್ ಬ್ಯೂಟಿ..!
ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ನಾಯಕಿ ಈ ಕೊರಿಯಾದ ಕ್ಯೂಟ್ ಬ್ಯೂಟಿ..!
ಭಾರತ ಸಿನಿಮಾರಂಗದ ಖ್ಯಾತ ನಿರ್ದೇಶಕ ಶಂಕರ್ ಅವರ ಹೊಸ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸುತ್ತಿದ್ದು, ಅಧಿಕೃತವಾಗಿ ಅನೌನ್ಸ್ ಆಗಿದೆ. ಈ ಸಿನಿಮಾದಲ್ಲಿ ಭಾರತದ ಮತ್ತೊಬ್ಬ ಬಿಗ್ ಸ್ಟಾರ್ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣಗೊಳ್ತಿದ್ದು, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ. ಅದೇನೆಂದ್ರೆ ಈ ಸಿನಿಮಾದಲ್ಲಿ ದಕ್ಷಿಣ ಕೊರೊಯಾದ ಕ್ಯೂಟ್ ಬೆಡಗಿ ನಾಯಕಿಯಾಗಲಿದ್ದಾರಂತೆ.
ಹೌದು.. ದಕ್ಷಿಣ ಕೊರಿಯಾದ ನಟಿ ಸುಜಿ ಬೀ ರಾಮ್ ಚರಣ್ ತೇಜ ಜೊತೆ ಈ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಲಿದ್ದು, ಇದು ಆಕೆಗೆ ಮೊದಲ ವಿದೇಶಿ ಸಿನಿಮಾವಾಗಿದೆ. ನೋಡೋಕೆ ಸಿಕ್ಕಾಪಟ್ಟೆ ಕ್ಯೂಟ್ ಆಗಿರುವ ಕೊರಿಯಾದ ಈ ಸುಂದರಿ ಸಿನಿಪ್ರೇಕ್ಷಕರ ಹೃದಯಕದಿಯಲಿದ್ದಾರೆ. ಅಂದ್ಹಾಗೆ ಸುಜಿ ಈಗಾಗಲೇ ಕೊರಿಯಾದಲ್ಲಿ 4 ಕ್ಕೂ ಹೆಚ್ಚು ಸಿನಿಮಾಗಳು ಡ್ರಾಮಾಗಳು ಹಾಗೂ ಸಾಕಷ್ಟು ಟಿವಿ ಶೋಗಳಲ್ಲಿ ಭಾಗಿಯಾಗಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ತೆಲುಗು ರಾಜ್ಯಗಳಲ್ಲಿ ಯಶ್ ಅಬ್ಬರ : 7 ವರ್ಷಗಳ ಹಳೆಯ ಸಿನಿಮಾ ತೆಲುಗಿನಲ್ಲಿ ರಿಲೀಸ್..!
ತೆಲುಗು ರಾಜ್ಯಗಳಲ್ಲಿ ಯಶ್ ಅಬ್ಬರ : 7 ವರ್ಷಗಳ ಹಳೆಯ ಸಿನಿಮಾ ತೆಲುಗಿನಲ್ಲಿ ರಿಲೀಸ್..!
KGF ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಖದರ್ ಎಕ್ಸ್ಟ್ರೀಮ್ ಲೆವೆಲ್ ಹೋಗಿದೆ. ಯಶ್ ಸದ್ಯ ಭಾರತದ ಬಿಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಯಶ್ ಕ್ರೇಜ್ ಪರ ಭಾಷಿಗರನ್ನೂ ಮೋಡಿ ಮಾಡಿದೆ. ಇನ್ನೂ KGF 2 ಗಾಗಿ ಭಾರತ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಯಶ್ ಗೆ ತಮಿಳು, ತೆಲುಗು, ಹಿಂದಿ, ಮಳಯಾಳಂನಲ್ಲೂ ಅಭಿಮಾನಿಗಳ ಬಳವಗಿದೆ. ಈ ನಡುವೆ 7ವರ್ಷಗಳ ಹಿಂದೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾವೊಂದು ಇದೀಗ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಗೆ ರೆಡಿಯಾಗಿದೆ. ಗಜಕೇಸರಿ… ಹೌದು 2014 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಗಜಕೇಸರಿ ಸಿನಿಮಾ ಇದೀಗ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ತೆಲುಗು ಅಭಿಮಾನಿಗಳನ್ನ ಭರಪೂರ ರಂಜಿಸಲಿದೆ. ಇನ್ನೂ ಈಗಾಗಲೇ ಗಜಕೇಸರಿ ಸಿನಿಮಾದ ತೆಲುಗು ಟೀಸರ್ ಕೂಡ ರಿಲೀಸ್ ಆಗಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ವಿಶೇಷ ಅಂದ್ರೆ ಟೀಸರ್‌ನಲ್ಲಿ ‘ಆಫ್ಟರ್ ಕೆಜಿಎಫ್’ ಎಂದು ಸೇರಿಸಲಾಗಿದೆ.
ರೇಸ್.. ಅಡ್ವೆಂಚರ್.. ಆಕ್ಷನ್.. ಥ್ರಿಲ್ಲರ್ `ಮಡ್ಡಿ’ ಟೀಸರ್ ಸೂಪರ್..!
ರೇಸ್.. ಅಡ್ವೆಂಚರ್.. ಆಕ್ಷನ್.. ಥ್ರಿಲ್ಲರ್ `ಮಡ್ಡಿ’ ಟೀಸರ್ ಸೂಪರ್..!
ಮೈ ಝುಮ್ ಎನಿಸೋ ರೇಸ್, ಅಬ್ಬಾ ಎನಿಸೋ ಅಡ್ವೆಂಚರ್, ಸೂಪರ್ ಗುರು ಎನಿಸೋ ಆಕ್ಷನ್, ವ್ಹಾವ್ ಎನಿಸೋ ಲೊಕೇಶನ್, ಥ್ರಿಲ್ಲರ್ ನ ಡೆಡ್ಲಿ ಕಾಂಬೋ ಸೂಪರ್ರೋ ಸೂಪರ್..! ಏನ್ ಗುರು ಟೀಸರ್ ಹೀಗಿದೆ.. ಇದು ಪಕ್ಕಾ ಬ್ಲಾಕ್ ಬಸ್ಟರ್.. ಮಗ ಈ ಸಿನಿಮಾ ಪಕ್ಕಾ ನೋಡ್ಲೇಬೇಕು ಇದು ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಮಡ್ಡಿ ಸಿನಿಮಾದ ಟೀಸರ್ ಗೆ ಸಿಕ್ತಿರೋ ರೆಸ್ಪಾನ್ಸ್..!!ಹೌದು..! ಒಂದೊಳ್ಳೆ ಕಥೆಯೊಂದಿಗೆ ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಸಿನಿಮಾ ಮಡ್ಡಿ. ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಕಂಪ್ಲೀಟ್ ಮಡ್ ರೇಸ್ ಸಿನಿಮಾ.
ದೊಡ್ಡ ಮಟ್ಟದಲ್ಲಿ ತಯಾರಾಗಿರುವ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಅಂದಹಾಗೆ ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಮೋಷನ್ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಸಿನಿಮಾದ ಅಫೀಶಿಯಲ್ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಚಿಂದಿ ಉಡಾಯಿಸುತ್ತಿದೆ.
ಇನ್ನು ಟೀಸರ್ ವಿಚಾರಕ್ಕೆ ಬಂದ್ರೆ ಮಡ್ಡಿ ಟೀಸರ್ ಚಿಂದಿ..! ರವಿ ಬಸ್ರೂರ್ ಬಿಜಿಎಂ ಮೈಂಡ್ ಬ್ಲೋಯಿಂಗ್..! ಸಿನಿಮಾಟೋಗ್ರಾಫಿ ಬೊಂಬಾಟ್..! ಮುಖ್ಯವಾಗಿ ಟೀಸರ್ ಎಡಿಟಿಂಗ್ ಸೂಪರಃ ಸೂಪರಸ್ಯಃ ಸೂಪರೋಭ್ಯಃ ಅಷ್ಟೆ..! ಟೀಸರ್ ನಲ್ಲಿ ಬರೋ ಒಂದೊಂದು ಸೀನ್ ವ್ಹಾವ್ ಎಸಿಸುತ್ತೆ.
ಮುಂಬೈನಲ್ಲಿ ಲಕ್ಷ್ಯೂರಿಯಸ್ ಫ್ಲಾಟ್ ಖರೀದಿಸಿದ್ದಾರಂತೆ ‘ಕಿರಿಕ್ ರಾಣಿ’…!
ಮುಂಬೈನಲ್ಲಿ ಲಕ್ಷ್ಯೂರಿಯಸ್ ಫ್ಲಾಟ್ ಖರೀದಿಸಿದ್ದಾರಂತೆ ‘ಕಿರಿಕ್ ರಾಣಿ’…!
ಟಾಲಿವುಡ್ ನಲ್ಲಿ ಬ್ಯುಸಿಯೆಸ್ಟ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸದ್ಯ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಈ ಬಾರಿ ಕಾಂಟ್ರವರ್ಸಿ ಬಿಟ್ಟು ಬೇರೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೌದು, ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಅದ್ದೂರಿಯಾಗಿರುವ ಫ್ಲಾಟ್ ಖರೀದಿಸಿದ್ದಾರೆ. ಈ ಫ್ಲಾಟ್ ಮುಂಬೈ ಉಪನಗರದಲ್ಲಿದೆ. ರಶ್ಮಿಕಾ ಅಭಿನಯಿಸುತ್ತಿರುವ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸುಲಭವಾಗಲೆಂದು ರಶ್ಮಿಕಾ ಮುಂಬೈನಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಂತೆ ರಶ್ಮಿಕಾ ಎಲ್ಲಿಯೂ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ.
ಅಷ್ಟೇ ರಶ್ಮಿಕಾ ಈಗಾಗಲೇ ಮತ್ತೊಂದು ಬಾಲಿವುಡ್ ನ ಸಿನಿಮಾಗೂ ಸಹಿಹಾಕಿದ್ದಾರೆ ಎನ್ನಲಾಗ್ತಿದೆ. ಬಿಗ್ ಬಿ ಅಮಿತಾ ಬಚ್ಚನ್ ಜೊತೆ ಅಭಿನಯಿಸಲಿದ್ದಾರೆ. ಈ ಸಿನಿಮಾಕ್ಕೆ ಕ್ವೀನ್ ಸಿನಿಮಾದ ನಿರ್ದೇಶಕ ವಿಕಾಸ್ ಬಹ್ಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತಂದೆ ಮಗಳ ಸಂಬಂಧವನ್ನು ಆಧಾರಿಸಿದ ಹಾಸ್ಯಮಯವಾದ ಕಥೆಯನ್ನು ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ.
`ಪೊಗರು’ ಸಿನಿಮಾ ನೋಡಿ `ಇದೊಂದು ಮೈಲಿಗಲ್ಲು’ ಎಂದ ಪ್ರಶಾಂತ್ ನೀಲ್
`ಪೊಗರು’ ಸಿನಿಮಾ ನೋಡಿ `ಇದೊಂದು ಮೈಲಿಗಲ್ಲು’ ಎಂದ ಪ್ರಶಾಂತ್ ನೀಲ್
ಬೆಂಗಳೂರು : ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಸದ್ಯ ಗಲ್ಲಾಪೆಟ್ಟಿಗೆಯನ್ನ ಕೊಳ್ಳೆ ಹೊಡೆಯುತ್ತಿದೆ. ಒಂದಿಷ್ಟು ವಿವಾದಗಳ ಸಿನಿಮಾಗೆ ಅಂಟಿಕೊಂಡರೂ ಸಿನಿ ರಸಿಕರ ಹೃದಯ ಗೆಲ್ಲುವಲ್ಲಿ ಪೊಗರು ಶಿವ ಸಕ್ಸಸ್ ಆಗಿದ್ದಾರೆ. ನಿರ್ದೇಶಕ ನಂದಕಿಶೋರ್ ಮೇಕಿಂಗ್.. ಚಂದನ ಶೆಟ್ಟಿ ಚಿಂದಿ ಮ್ಯೂಸಿಕ್.. ಜೊತೆಗೆ ಒಂಟಿ ಸಲಗದ ಅಬ್ಬರದಂತೆ ಧ್ರುವ ಸರ್ಜಾ ಪರ್ಪಾಮೆನ್ಸ್.. ಸಿನಿಮಾವನ್ನ ಬೇರೆ ಲೆವೆಲ್ಲಿಗೆ ಕರೆದೋಯ್ದಿದೆ. ಸದ್ಯ ಈ ಸಿನಿಮಾ 45 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದಿದೆ. ಈ ಮಧ್ಯೆ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಪೊಗರು’ ಚಿತ್ರಕ್ಕೆ ಫುಲ್ ಮಾಕ್ರ್ಸ್ ನೀಡಿದ್ದಾರೆ. ಭರ್ಜರಿ ಪ್ರದರ್ಶನ ಕಾಣುತ್ತಿರುವ ಪೊಗರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿರುವ ಪ್ರಶಾಂತ್, ಚಿತ್ರತಂಡಕ್ಕೆ ಟ್ವಿಟ್ಟರ್ ನಲ್ಲಿ ಶಹಬ್ಬಾಸ್ ಹೇಳಿದ್ದಾರೆ.
ಪ್ರಿಯಾಂಕಾ ಫ್ಯಾಷನ್ ಶೈಲಿಗೆ ದಂಗಾದ ನೆಟ್ಟಿಗರು : ಟ್ರೋಲ್ ಗಳಲ್ಲಿ ‘ಪಿಂಕಿ’ ಮಿಂಚಿಂಗ್..!
ಪ್ರಿಯಾಂಕಾ ಫ್ಯಾಷನ್ ಶೈಲಿಗೆ ದಂಗಾದ ನೆಟ್ಟಿಗರು : ಟ್ರೋಲ್ ಗಳಲ್ಲಿ ‘ಪಿಂಕಿ’ ಮಿಂಚಿಂಗ್..!
ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಯಾಂಕಾ ಡಿಫರೆಂಟ್ ಫ್ಯಾಶನ್ ಸ್ಟೈಲ್ ನ ಭಿನ್ನ ವಿಭಿನ್ನ , ವಿಚಿತ್ರ ಬಟ್ಟೆಗಳನ್ನ ತೊಟ್ಟು ಪ್ರಿಯಾಂಕಾ ಚೋಪ್ರಾ ಆಗಾಗ ಸುದ್ದಿಯಲ್ಲಿರುತ್ತಾರೆ.ಆದ್ರೆ ಅವರ ವಿಭಿನ್ನ ಫ್ಯಾಶನ್ ಶೈಲಿಯನ್ನ ಇಷ್ಟ ಪಡೋ ಜನರಿಗಿಂತ ಅಪಹಾಸ್ಯ ಮಾಡೋರೆ ಹೆಚ್ಚು. ಆಗಾಗ ಪ್ರಿಯಾಂಕಾ ಬಟ್ಟೆ ವಿಚಾರವಾಗಿಯೇ ಸಾಕಷ್ಟು ಟ್ರೋಲ್ ಗೂ ಗುರಿಯಾಗ್ತಾರೆ.ನೆಟ್ಟಿಗರಿಂದ ನಗೆಪಾಟಲಿಗೀಡಾಗ್ತಾರೆ. ಇದೀಗ ಮತ್ತೆ ಅಂತಹದ್ದೇ ಟ್ರೋಲ್ ಗೆ ಗುರಿಯಾಗಿದ್ದಾರೆ. ಬಾಲಿವುಡ್ ನ ಬ್ಯೂಟಿ ಪ್ರಿಯಾಂಕಾ ಅವರ ಆತ್ಮಚರಿತ್ರೆ ಅನ್ ಫಿನಿಶಿಡ್ ಬಿಡುಗಡೆ ಆಗಿದ್ದು, ಉತ್ತಮವಾಗಿ ಸೇಲ್ ಕೂಡ ಆಗ್ತಿದೆ.
ಆದ್ರೆ ಮ್ಯಾಗಜಿನ್ ಗೆ ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿರುವ ಪ್ರಿಯಾಂಕಾ ಚೋಪ್ರಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ವಿಚಿತ್ರ ಬಟ್ಟೆ ಧರಿಸಿರುವ ಫೋಟೋ ವೈರಲ್ ಆಗ್ತಿದೆ. ಈ ಬಟ್ಟೆ ಧರಿಸಿರುವ ಪ್ರಿಯಾಂಕಾ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನೆಟ್ಟಿಗರು ತರಹೇವಾರಿ ಮೇಮ್ ಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ.
‘ಕಿರಿಕ್ ರಾಣಿ’ ರಶ್ಮಿಕಾಗೆ ‘ಕನ್ನಡತಿ’ ಕೃತಿ ಶೆಟ್ಟಿ ಸವಾಲ್…!
‘ಕಿರಿಕ್ ರಾಣಿ’ ರಶ್ಮಿಕಾಗೆ ‘ಕನ್ನಡತಿ’ ಕೃತಿ ಶೆಟ್ಟಿ ಸವಾಲ್…!
ಬಹುತೇಕ ಕನ್ನಡದ ಬೆಡಗಿಯರು ಟಾಲಿವುಡ್, ಬಾಲಿವುಡ್, ಮಾಲಿವುಡ್ , ಕಾಲಿವುಡ್ ಹೀಗೆ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದ್ದಾರೆ. ಟಾಪ್ ನಟಿಯರಾಗಿ ಇಂಡಸ್ಟರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ಐಶ್ವರ್ಯಾ , ಅನುಷ್ಕಾ ಶೆಟ್ಟಿ ಹೀಗೆ ಅನೇಕ ಟಾಪ್ ನಟಿಯರಿದ್ದಾರೆ. ಇನ್ನೂ ಇತ್ತೀಚೆಗೆ ಆ ಸಾಲಿಗೆ ಕನ್ನಡದ ಮತ್ತಷ್ಟು ನಟಿಯರು ಸೇರ್ಪಯಾಗ್ತಿದ್ದಾರೆ.ಕನ್ನಡದ ಪೂಜಾ ಹೆಗ್ಡೆ, ಗೂಗ್ಲಿ ನಟಿ ಕೃತಿ ಕರಬಂಧಾ, ವಜ್ರಕಾಯ ಬೆಡಗಿ ನಭಾ ನಟೇಶ್, ಕಿರಿಕ್ ಪಾರ್ಟಿಯ ರಶ್ಮಿಕಾ ಸಹ ಟಾಲಿವುಡ್ ನಲ್ಲಿ ಕಮಾಲ್ ಮಾಡಿ ತಮಿಳು ಹಿಂದಿ ಭಾಷೆಗಳಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ. ಈಗ 17 ವರ್ಷದ ಕ್ಯೂಟ್ ನಟಿ ನಮ್ಮ ಕನ್ನಡತಿ ಕೃತಿ ಶೆಟ್ಟಿ ಟಾಪ್ ನಟಿಯರಿಗೆ ಟಕ್ಕರ್ ಕೊಡೋಕೆ ಸಜ್ಜಾಗಿದ್ದಾರೆ. ಹೌದು ಮೊದಲ ಸಿನಿಮಾದಲ್ಲಿ ಟಾಲಿವುಡ್ ನಲ್ಲಿ ಮಿಂಚು ಹರಿಸಿರುವ ನಟಿ ಕೃತಿ ಉಪ್ಪೆನ ಸಿನಿಮಾ ಮೂಲಕ ಜನರಿಗೆ ಪರಿಚಯವಾಗಿದ್ದಾರೆ. ಕ್ಯೂಟ್ ಲುಕ್ಸ್ ಸ್ವೀಟ್ ಸ್ಮೈಲ್ ನಿಂದ ಯುವಕರ ಹಾರ್ಟ್ ಗೆ ಕೊಳ್ಳಿ ಇಟ್ಟಿದ್ದಾರೆ. ಇವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಜೈಲಿಂದ ಬಂದ ಬಳಿಕ ಹೊಸ ಸಿನಿಮಾಗೆ ಒಪ್ಪಿದ ‘ತುಪ್ಪದ ಬೆಡಗಿ’ : ಯಾವುದು ಆ ಸಿನಿಮಾ..!
ಜೈಲಿಂದ ಬಂದ ಬಳಿಕ ಹೊಸ ಸಿನಿಮಾಗೆ ಒಪ್ಪಿದ ‘ತುಪ್ಪದ ಬೆಡಗಿ’ : ಯಾವುದು ಆ ಸಿನಿಮಾ..!
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ 145ಕ್ಕೂ ಹೆಚ್ಚು ದಿನಗಳ ಕಾಲ ಜೈಲೂಟ ಮಾಡಿದ್ದ ರಾಗಿಣಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಹೊಸ ಸಿನಿಮಾಗೆ ರಾಗಿಣಿ ಸಹಿ ಮಾಡಿದ್ದಾರೆ. ಜೈಲಿನಿಂದ ರಾಗಿಣಿ ಹೊರಬರುತ್ತಿದ್ದಂತೆಯೇ ನಿರ್ಮಾಪಕ ಕೆ ಮಂಜು ರಾಗಿಣಿಯನ್ನ ಭೇಟಿ ಮಾಡಿದ್ದರು. ಇದೀಗ ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿರುವ ‘ಕರ್ವ-2’ ಚಿತ್ರಕ್ಕೆ ರಾಗಿಣಿ ಪ್ರಮುಖ ನಟಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜೈಲಿನಿಂದ ಹೊರಬಂದ ಮೇಲೆ ರಾಗಿಣಿ ಸಹಿ ಮಾಡಿದ ಮೊದಲ ಸಿನಿಮಾ ಇದಾಗಿದೆ.