ನವದೆಹಲಿ: ಇಂಟರ್ ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮದಂತೆ 40 ವರ್ಷ ವಯಸ್ಸಿನ ಪುರುಷ ಹಾಗೂ ಮಹಿಳಾ ಬಾಕ್ಸರ್ ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ 6 ಬಾರಿ ವಿಶ್ವ ಚಾಂಪಿಯನ್ ಹಾಗೂ 2012 ರ ಒಲಿಂಪಿಕ್ ಪದಕ ವಿಜೇತೆಯಾಗಿರುವ ಮೇರಿ ಕೋಮ್ (Mary Kom) ತಮ್ಮ ಬಾಕ್ಸಿಂಗ್‌ಗೆ (Boxing) ನಿವೃತ್ತಿ ಘೋಷಿಸಿದ್ದಾರೆ.
ಮೇರಿಯವರಿಗೆ 41 ವರ್ಷ ವಯಸ್ಸಾಗಿದ್ದರಿಂದ ಬುಧವಾರ ನಿವೃತ್ತಿ (Retirement) ಘೋಷಿಸಿದ್ದಾರೆ. ಬಾಕ್ಸಿಂಗ್ ನಲ್ಲಿ ಹೋರಾಡುವ ಹಸಿವು ನನಗೆ ಇನ್ನೂ ಇದೆ. ಆದರೆ, ವಯಸ್ಸಿನ ಮಿತಿ ಆಗಿರುವುದರಿಂದಾಗಿ ನಾನು ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ನಾನು ಬಲವಂತವಾಗಿ ತೊರೆಯುತ್ತಿದ್ದೇನೆ ನಾನು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ದುಃಖದಿಂದಲೇ ನಾನು ನಿವೃತ್ತಿ ಘೋಷಿಸಿದ್ದೇನೆ ಎಂದು ಹೇಳಿದ್ದಾರೆ.
ಬಾಕ್ಸಿಂಗ್ ನಲ್ಲಿ ಅವರು 6 ವಿಶ್ವ ಪ್ರಶಸ್ತಿ, ಐದು ಬಾರಿ ಏಷ್ಯನ್ ಚಾಂಪಿಯನ್, 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತದ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ. AIBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು. 2005, 2006, 2008 ಮತ್ತು 2010 ಆವೃತ್ತಿಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. 2012ರ ಒಲಿಂಪಿಕ್ ನಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದಾರೆ.