RRR | ಆರ್ ಆರ್ ಆರ್ ಸಿನಿಮಾ ಆಸ್ಕರ್ ರೇಸ್ ನಲ್ಲಿ ನೋ ಎಂಟ್ರಿ !
ತೆಲುಗು ಸಿನಿಮಾ ಸಾಮರ್ಥ್ಯವನ್ನು ಪ್ರಪಂಚಕ್ಕೆ ಸಾರಿದ ಆರ್ ಆರ್ ಆರ್ ಸಿನಿಮಾಗೆ ಬಿಗ್ ಶಾಕ್ ಎದುರಾಗಿದೆ.
ಅನೇಕ ದಾಖಲೆಗಳನ್ನು ಬ್ರೇಕ್ ಮಾಡಿ ಬಾಕ್ಸ್ ಆಫೀಸ್ ಬಳಿ ಕಲೆಕ್ಷನ್ ಸುನಾಮಿ ಎಬ್ಬಿಸಿದ ಆರ್ ಆರ್ ಆರ್ ಸಿನಿಮಾ ಆಸ್ಕರ್ ನಾಮಿನೇಷನ್ ರೇಸ್ ನಲ್ಲಿ ಕಾಣಿಸಿಕೊಂಡಿಲ್ಲ.
ಕಾಶ್ಮೀರ್ ಫೈಲ್ಸ್ ಕೂಡ ಆಸ್ಕರ್ ರೇಸ್ ನಿಂದ ದೂರ ಉಳಿದಿದೆ. ಆದ್ರೆ ಈ ಎರಡೂ ಸಿನಿಮಾಗಳನ್ನು ದಾಟಿ ಒಂದು ಸಣ್ಣ ಸಿನಿಮಾ ಆಸ್ಕರ್ ರೇಸ್ ಗೆ ಬಂದಿದೆ.
ಗುಜರಾತಿ ಸಿನಿಮಾ ಚಲ್ಲೋ ಷಾ ಸಿನಿಮಾ ಆಸ್ಕರ್ ನಾಮಿನೇಷನ್ ರೇಸ್ ನಲ್ಲಿ ಕಾಣಿಸಿಕೊಂಡಿದೆ.
ಬೆಸ್ಟ್ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್ ಕ್ಯಾಟಗಿರಿಯಲ್ಲಿ ಈ ಸಿನಿಮಾ ಸ್ಥಾನ ಪಡೆದುಕೊಂಡಿದೆ.
ಈ ಬಗ್ಗೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಇದಲ್ಲದೆ ಎನ್ ಟಿ ಆರ್, ರಾಮ್ ಚರಣ್ ನಟನೆಯ ಸಿನಿಮಾ ಆರ್ ಆರ್ ಆರ್ ಅನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಸೆಟ್ಟೇರಿಸಿದ್ದರು.
ಈ ವರ್ಷ ಮಾರ್ಚ್ 25 ರಂದು ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಗಳ ಸುನಾಮಿ ಎಬ್ಬಿಸಿತ್ತು.
12 ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು.