ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ (Paris Paralympics 2024) ಕ್ರೀಡಾಕೂಟದಲ್ಲಿ ಭಾರತ 3ನೇ ದಿನವೂ ಪದಕ ಬೇಟೆ ಮುಂದುವರೆಸಿದೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ (Air Pistol) ಸ್ಪರ್ಧೆಯಲ್ಲಿ ಶೂಟರ್ ರುಬಿನಾ ಫ್ರಾನ್ಸಿಸ್ (Rubina Francis) ಕಂಚಿನ ಪದಕಕ್ಕೆ ಕೊರಳೊಡ್ಡುವ ಮೂಲಕ ದೇಶಕ್ಕೆ ಶೂಟಿಂಗ್ ನಲ್ಲಿ ಮತ್ತೊಂದು ಪದಕ ತಂದು ಕೊಟ್ಟಿದ್ದಾರೆ. ಈ ಮೂಲಕ ಭಾರತ 5ನೇ ಪದಕ ಗೆದ್ದ ಸಾಧನೆ ಮಡಿದೆ.
211.1 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದ ರುಬಿನಾ ಬೆಳ್ಳಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದ್ರೆ, ಟರ್ಕಿಯ ಐಸೆಲ್ ಓಜ್ಗಾನ್, ರುಬಿನಾರನ್ನು ಹಿಂದಿಕ್ಕಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಂತಿಮವಾಗಿ ರುಬಿನಾ ಕಂಚಿನ ಪದಕ ಗೆದ್ದರು. ಇರಾನ್‌ನ ಸರೆಹ್ ಜವನ್ ಮಾರ್ಡಿ ಚಿನ್ನದ ಪದಕ ಗೆದ್ದರು.
ಭಾರತೀಯ ಬಿಲ್ಲುಗಾರ್ತಿ ಶೀತಲ್ ದೇವಿ (Sheetal Devi) ಕೂಡ ಪದಕ ಗೆಲ್ಲುವ ಹಾದಿಯಲ್ಲಿದ್ದಾರೆ. ಆರ್ಮ್‌ಲೆಸ್ ಬಿಲ್ಲುಗಾರ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ 2ನೇ ಸ್ಥಾನ ಗಳಿಸಿರುವ ಶೀತಲ್ ದೇವಿ ನೇರವಾಗಿ 16ನೇ ಸುತ್ತು ಪ್ರವೇಶಿಸಿದ್ದಾರೆ. ಅಲ್ಲದೇ, ಇನ್ನೂ ಹಲವು ಪದಕಗಳು ಭಾರತದ ಬುಟ್ಟಿಗೆ ಬಿದ್ದಿದೆ.