ಶಿಖರ್ ಧವನ್ ದಾಂಪತ್ಯದಲ್ಲಿ ಬಿರುಕು – ಪತ್ನಿ ಆಯಿಷಾ ಜೊತೆ ಡಿವೋರ್ಸ್
ಟೀಮ್ ಇಂಡಿಯಾದ ಕ್ರಿಕೆಟರ್ ಶಿಖರ್ ಧವನ್ ಹಾಗೂ ಅವರ ಪತ್ನಿ ಆಯಿಷಾ ಮದುವೆಯಾಗಿ 8 ವರ್ಷಗಳ ನಂತರ ವಿಚ್ಛೇಧನ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನೂವರೆಗೂ ಈ ವಿಚಾರವನ್ನೂ ಧವನ್ ಖಚಿತಪಡಿಸಿಲ್ಲ. ಆದ್ರೆ ಈ ಬಗ್ಗೆ ಆಯಿಷಾ ಇನ್ಸ್ಟಾಗ್ರಾಮ್ ನಲ್ಲಿ ಸುಧೀರ್ಘ ಪೋಸ್ಟ್ ಹಾಕುವ ಮೂಲಕ ಬಹಿರಂಗ ಪಡಿಸಿದ್ದಾರೆ.
ಆಯಿಷಾಗೆ ಶಿಖರ್ ಧವನ್ 2ನೇ ಪತಿಯಾಗಿದ್ದಾರೆ. ಮೊದಲ ಪತಿ ಜೊತೆಗೆ ವಿಚ್ಛೇಧನ ಪಡೆದುಕೊಂಡಿದ್ದ ಆಯಿಷಾಗೆ ಆ ವೇಳೆ ಇಬ್ಬರು ಹೆಣ್ಣು ಮಕ್ಕಳಿದ್ದರು.
ನಂತರ 2012 ರಲ್ಲಿ ಶಿಖರ್ ಧವನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ಧವನ್ ಜೊತೆಗೂ ವಿಚ್ಛೇಧನ ಪಡೆದಿದ್ದಾರೆ.
ಶಿಖರ್ ಧವನ್ ಹಾಗೂ ಆಯಿಪಷಾಗೆ ಓರ್ವ ಗಂಡು ಮಗನಿದ್ದಾನೆ. ಅವನ ಹೆಸರು ಜೋರಾವರ್.
ಆಯಿಷಾ ಮೆಲ್ಬೋರ್ನ್ ಮೂಲದ ಬಾಕ್ಸರ್ ಆಗಿದ್ದಾರೆ. ಪ್ರಸ್ತುತ ಧವನ್ ದೆಹಲಿ ಕ್ಯಾಪಿಟಲ್ಸ್ಗಾಗಿ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2021 ರಲ್ಲಿ ಆಡಲಿದ್ದಾರೆ.
ಅಲ್ಲದೇ ಶಿಖರ್ ಇತ್ತೀಚೆಗೆ ಶ್ರೀಲಂಕಾದಲ್ಲಿ ಸೀಮಿತ ಓವರ್ಗಳ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದರು.