ದಕ್ಷಿಣ ಆಫ್ರಿಕಾದಲ್ಲಿ ‘ದೇಣಿಗೆ ರಾಜಕೀಯ’ : ಹೊಸ ಕಾಯ್ದೆ..!

1 min read

ದಕ್ಷಿಣ ಆಫ್ರಿಕಾದಲ್ಲಿ ‘ದೇಣಿಗೆ ರಾಜಕೀಯ’ : ಹೊಸ ಕಾಯ್ದೆ..!

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ರಾಜಕೀಯ ಪಕ್ಷಗಳಿಗೆ ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಬರುವ ದೇಣಿಗೆಯನ್ನು ನಿಯಂತ್ರಿಸಲು ಹೊಸ ಕಾಯ್ದೆಯೊಂದಕ್ಕೆ ಸಹಿ ಹಾಕಿದ್ದಾರೆ.

ನೇತಾಜಿ ಜನ್ಮದಿನ : ಕಾರ್ಕಳದಲ್ಲಿ ಗುಡ್ಡಗಾಡು ಓಟ ಸ್ಪರ್ಧೆ

ಹೌದು ರಾಜಕೀಯ ಪಕ್ಷದ ಧನಸಹಾಯ ಕಾಯ್ದೆಗೆ ರಾಮಫೋಸ್ ಅವರು ಸಹಿ ಹಾಕಿದ್ದು, ಈ ಕಾಯ್ದೆಯು ಇದೇ ವರ್ಷ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈ ಕಾಯ್ದೆಯಡಿ ರಾಜಕೀಯ ನಾಯಕನಿಗೆ ವೈಯಕ್ತಿಕವಾಗಿ ದೇಣಿಗೆ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ ಸರ್ಕಾರ, ರಾಜಕೀಯ ಪಕ್ಷಗಳಿಗೆ ಧನ ಸಹಾಯ ಮಾಡಬಹುದಾಗಿದೆ.

ರೈತ ಕಲ್ಯಾಣ ಗ್ರಾಮ ಸ್ವರಾಜ್ಯಕ್ಕೆ ಆದ್ಯತೆ ನೀಡದ ಯಾವ ಸರ್ಕಾರಗಳಿಂದಲೂ ದೇಶದ ಉನ್ನತಿ ಸಾಧ್ಯವಿಲ್ಲ; ಕೃಷಿ ಬಿಲ್‌ ಹಾಗೆ ಮಾಡುವ ಬದಲು ಹೀಗೆ ಮಾಡಿದ್ದರೇ!

ವಿದೇಶಿ ಸರ್ಕಾರ ಅಥವಾ ಏಜೆನ್ಸಿಗಳು, ವಿದೇಶಿಯರು, ರಾಜ್ಯ ಅಥವಾ ಸರ್ಕಾರಿ ಸ್ವಾಮ್ಯದ ಉದ್ಯಮಗಳ ವಿಭಾಗಗಳಿಂದ ದೇಣಿಗೆ ಪಡೆಯುವುದನ್ನು ಈ ಕಾಯ್ದೆಯು ನಿಷೇಧಿಸಿದೆ. ಆದರೆ ಪಕ್ಷಗಳು ತರಬೇತಿ, ಕೌಶಲ್ಯ ಅಭಿವೃದ್ಧಿಗಾಗಿ ವಿದೇಶಿ ಘಟಕಗಳಿಂದ ಹಣ ಪಡೆಯಬಹುದಾಗಿದೆ. ಈ ಕಾಯ್ದೆಯಲ್ಲಿ ಪಕ್ಷದ ಸದಸ್ಯರು ಕೇವಲ ಪಕ್ಷದ ಕಾರ್ಯಗಳಿಗಾಗಿ ದೇಣಿಗೆಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಈ ಕಾಯ್ದೆಯನ್ನು ದಕ್ಷಿಣ ಆಫ್ರಿಕಾದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಲ್ಲಾದ ಐತಿಹಾಸಿಕ ಬದಲಾವಣೆ ಎಂದೇ ಹೇಳಲಾಗ್ತಿದೆ.

ಚಿರತೆಯನ್ನೇ ಕೊಂದು ತಿಂದ ನರರಾಕ್ಷಸರು…! ಥೂ.. ಇವರು ಮೃಗಗಳಿಗಿಂತ ಕಡೆ!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd