Sports | ಕ್ರೀಡಾ ಜಗತ್ತಿನ ಇಂದಿನ ಪ್ರಮುಖ ಸುದ್ದಿಗಳು Today’s major news in the sports world
01. CVC ಕ್ಯಾಪಿಟಲ್ ತಮ್ಮ ತಂಡದ ಹೆಸರನ್ನು “ಅಹಮದಾಬಾದ್ ಟೈಟಾನ್ಸ್” ಎಂದು ಘೋಷಿಸಿದೆ. ಮೆಗಾ ಹರಾಜಿಗೆ ಕೇವಲ ಐದು ದಿನಗಳು ಬಾಕಿ ಇರುವಾಗ ಸಿವಿಸಿ ಕಂಪನಿ ತರಾತುರಿಯಲ್ಲಿ ತಂಡಕ್ಕೆ ನಾಮಕರಣ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ : IPL2022 | ಅಹ್ಮದಾಬಾದ್ “ಟೈಟಾನ್ಸ್” ಆಗಿ ಎಂಟ್ರಿ..!?
02. ಅಹ್ಮದಾಬಾದ್ ವೇದಿಕೆಯಾಗಿ ವಿಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 8 ರನ್ ಗಳನ್ನ ಮಾತ್ರ ಗಳಿಸಿ ಔಟ್ ಆದ್ರೂ, ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ಹೆಸರಿನ ಮೇಲಿದ್ದ ದಾಖಲೆಯನ್ನು ಚಿಂದಿ ಉಡಾಯಿಸಿದ್ದಾರೆ. ವಿರಾಟ್ ಕೊಹ್ಲಿ ಸ್ವದೇಶದಲ್ಲಿ ಅತಿ ವೇಗವಾಗಿ 5000 ರನ್ ಪೂರೈಸಿದ ಕ್ರಿಕೆಟರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : Virat Kohli | ದೇವ್ರ ರಿಕಾರ್ಡು ಚಿಂದಿ.. ದಾಖಲೆಗಳಿಗೆ ಕೇರ್ ಆಫ್ ಅಡ್ರೆಸ್ ರಾಕ್ಷಸ
03. ಆಟಗಾರರು, ಆಯ್ಕೆಗಾರರು ಬರುತ್ತಾರೆ, ಹೋಗುತ್ತಾರೆ. ಆದ್ರೆ ನಾಯಕ ಯಾವಾಗಲೂ ನಾಯಕನಾಗಿಯೇ ಉಳಿಯುತ್ತಾನೆ ಎಂದು ವಿರಾಟ್ ಕೊಹ್ಲಿ ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಹೊಗಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :ViratKohli | ನಾಯಕ ಯಾವಾಗಲೂ ನಾಯಕನೇ : ಅಜಯ್ ಜಡೇಜಾ
04. ಪೂರ್ಣ ಪ್ರಮಾಣದ ವೈಟ್ ಬಾಲ್ ನಾಯಕನಾಗಿ, ರೋಹಿತ್ ಶರ್ಮಾ ತನ್ನ ಮೊದಲ ಪಂದ್ಯದಲ್ಲಿ ಭಾರತಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾರೆ. ಈ ವಿಚಾರದಲ್ಲಿ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಈ ಪಂದ್ಯದಲ್ಲಿ ಗವಾಸ್ಕರ್ ಅವರು ರೋಹಿತ್ ನಾಯಕತ್ವಕ್ಕೆ 10ಕ್ಕೆ 9.99 ರೇಟಿಂಗ್ ಕೊಟ್ಟಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :INDvsWI : ರೋಹಿತ್ ಕ್ಯಾಪ್ಟನ್ಸಿಗೆ ಸನ್ನಿಗೆ ಕೊಟ್ಟ ರೇಟಿಂಗ್ ಎಷ್ಟು..?
05. ಭಾರತ-ಪಾಕ್ ತಂಡಗಳ ಮಧ್ಯೆ ಮೆಲ್‌ಬೋರ್ನ್ ವೇದಿಕೆಯಲ್ಲಿ ಈ ವರ್ಷ ಅಕ್ಟೋಬರ್ 23 ರಂದು ನಡೆಯಲಿರುವ ಟಿ20 ವಿಶ್ವಕಪ್ ಟಗ್ ಆಫ್ ವಾರ್ ಫೈಟ್‌ಗಾಗಿ ಇಂದಿನಿಂದಲೇ ಸಿದ್ಧತೆ ಶುರುವಾಗಿದೆ. ಟೂರ್ನಿ ಆರಂಭಕ್ಕೆ ಇನ್ನೂ 8 ತಿಂಗಳು ಸಮಯ ಬಾಕಿ ಇದೆ. ದಾಯಾದಿಗಳ ಸಮರವನ್ನು ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಅನ್ ಲೈನ್ ನಲ್ಲಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.
ಹೆಚ್ಚಿನ ಮಾಹಿತಿಗಾಗಿ : INDvsPAK : ಇಂಡೋ – ಪಾಕ್ ಕಾಳಗ ಅಂದ್ರೆ ಸುಮ್ನೇನಾ..?








