ಸಿಎಂ ಬದಲಾಗಲ್ಲ , ಸುಳ್ಳಾಯ್ತು ಯಶ್ ಬಗ್ಗೆ ರಮ್ಯಾ ನುಡಿದಿದ್ದ ಭವಿಷ್ಯ, ಮಿಲ್ಕಾ ಸಿಂಗ್ ಗೆ ಕೊರೊನಾ TOP 10 ನ್ಯೂಸ್
ಸಿದ್ದು ಗೂಗ್ಲಿಗೆ ಹೆಚ್ ಡಿಕೆ ಸಿಕ್ಸರ್
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಡುವೆ ಮತ್ತೆ ಟ್ವೀಟ್ ವಾರ್ ಶುರುವಾಗಿದೆ. ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಟ್ವೀಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕ್ರಿಕೆಟ್ ಬಾಷೆ ಬಳಸಿ ಟಾಂಗ್ ನೀಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ತಮ್ಮ ಟ್ವೀಟ್ ನಲ್ಲಿ.. ಶಾಂತಿ ಕಾಲದಲ್ಲಿ ಕಲಹಕ್ಕೆ ಬರುವುದು, ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್ಸಿನ ಜಾಡ್ಯ. ಈ ಅಂಟುರೋಗಕ್ಕೆ ಒಳಗಾದವರು ಸಿದ್ದರಾಮಯ್ಯ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ಸಿನ ಆತ್ಮವಂಚನೆ ನೆನಪಿಸಿದ್ದಕ್ಕೆ ಸಿದ್ದರಾಮಯ್ಯ ನನ್ನ ವಿರುದ್ಧ ಕಾಲು ಕೆರೆದುಕೊಂಡು ಬಂದಿದ್ದಾರೆ. ಅವರ ಪ್ರತಿ ಎಸೆತಕ್ಕೆ ಸಿಕ್ಸರ್ ಕೊಡಬೇಕೆನಿಸಿದೆ ಎಂದು ಕಾಲೆಳೆದಿದ್ದಾರೆ.
ಸಿದ್ದರಾಮಯ್ಯನವರೇ ನೀವು ಹಿಟ್ ವಿಕೆಟ್ ಆಗಿದ್ದೀರಿ : ಸಿದ್ದು ಗೂಗ್ಲಿಗೆ ಹೆಚ್ ಡಿಕೆ ಸಿಕ್ಸರ್
ವಿಜಯೇಂದ್ರ ವಿರುದ್ಧ ಎಫ್ ಐಆರ್
ರಾಜ್ಯದಾದ್ಯಂತ ಲಾಕ್ ಡೌನ್ ಇದ್ದರೂ, ಕೊರೊನಾ ನಿಯಮ ಉಲ್ಲಂಘಿಸಿ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಎ???ಐಆರ್ ದಾಖಲು ಮಾಡಬೇಕು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತು ಮೈಸೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿ ಸಲ್ಲಿಸಿದೆ.
ಕೋವಿಡ್ ನಿಯಮ ಉಲ್ಲಂಘಿಸಿ ದೇಗುಲಕ್ಕೆ ಭೇಟಿ : ವಿಜಯೇಂದ್ರ ವಿರುದ್ಧ ಎಫ್ ಐಆರ್..?
ಸಿಎಂ ಬದಲಾಗಲ್ಲ
ಮೈಸೂರು: ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಮ್ಮ ಪಕ್ಷದಲ್ಲಿ ನಡೆಯುತ್ತಿಲ್ಲ, ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ನಿರ್ವಹಣೆ ನಡೆಯುತ್ತಿದ್ದು ನಾಯಕತ್ವದ ಬದಲಾವಣೆ ಪ್ರಕ್ರಿಯೆ ಇಲ್ಲ ಎಂದು ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದರು.ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ್ ಶ್ರೀಗಳ ಜೊತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ನಮ್ಮ ಪಕ್ಷದಲ್ಲಿ ಈ ರೀತಿಯ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ, ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಅನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಸಿಎಂ ಬದಲಾವಣೆ ಪ್ರಕ್ರಿಯೆ ನಡೆಯುತ್ತಿಲ್ಲ ಎಂದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಡಿಸಿಎಂ ಸ್ಪಷ್ಟನೆ
ಬ್ಲ್ಯಾಕ್ ಫಂಗಸ್ ಆಯ್ತು…ಈಗ ವೈಟ್ ಫಂಗಸ್..!
ನವದೆಹಲಿ: ಕೊರೊನಾ 2ನೇ ಅಲೆ ಹಾವಳಿ ನಡುವೆ ಬ್ಲಾಕ್ ಫಂಗಸ್ ವೈರಸ್ ನ ಕಾಟ ಶುರುವಾಗಿದೆ. ಇದು ಸಾಲದಕ್ಕೆ ಈಗ ದೇಶಕ್ಕೆ ವೈಟ್ ಫಂಗಸ್ ಕಾಟ ಶುರುವಾಗಿದೆ. ಬಿಹಾರದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈಗಾಗಲೇ ಬಿಹಾರದ ಪಟ್ನಾದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ ಬ್ಲ್ಯಾಕ್ ಫಂಗಸ್ ಗಿಂತಲೂ ವೈಟ್ ಫಂಗಸ್ ಹೆಚ್ಚು ಅಪಾಯಕಾರಿಯಾಗಿದೆ. ಅಲ್ಲದೇ ಇದು ಶ್ವಾಸಕೋಶ ಸೇರಿ ದೇಹದ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಬಾಯಿಗೂ ಹಾನಿ ಮಾಡುತ್ತದೆ ಎನ್ನಲಾಗಿದೆ.
ಕೋವಿಡ್… ಬ್ಲ್ಯಾಕ್ ಫಂಗಸ್…ಈಗ ವೈಟ್ ಫಂಗಸ್ ಹಾವಳಿ ಶುರು..!
‘ತೌಕ್ತೆ’ ಆಯ್ತು… ಈಗ ‘ಯಾಸ್’ ಚಂಡಮಾರುತ …!
ನವದೆಹಲಿ: ದೇಶದಲ್ಲಿ ತೌಕ್ತೇ ಚಂಡಮಾರುತವು ಭಾರಿ ಅನಾಹುತ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ಚಂಡಮಾರುತವು ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಮೇ 23ರ ವೇಳೆಗೆ ಹೊಸ ಚಂಡಮಾರುತ ಅಪ್ಪಳಿಸಲಿದ್ದು, ಬಂಗಾಳ ಕೊಲ್ಲಿಯಲ್ಲಿ ಇದು ಸೃಷ್ಟಿಯಾಗಲಿದೆ. ಈ ಚಂಡಮಾರುತಕ್ಕೆ ‘ಯಾಸ್’ ಎಂದು ಹೆಸರಿಡಲಾಗಿದೆ. ಈ ವಿಚಾರವಾಗಿ ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ಚಂಡಮಾರುತ ವಿಭಾಗದ ಮುಖ್ಯಸ್ಥೆ ಸುನೀತಾ ದೇವಿ, ಮುಂದಿನ ವಾರ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಬಹುದು. ಇದು ತೀವ್ರಗೊಳ್ಳುವ ಸಾಧ್ಯತೆಯೂ ಇದೆ ಎಂದು ನಾವು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
‘ತೌಕ್ತೆ’ ಚಂಡಮಾರುತದ ಬೆನ್ನಲ್ಲೇ ‘ಯಾಸ್’ ಚಂಡಮಾರುತದ ಭೀತಿ…!
‘ಡಿಸೆಂಬರ್ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಲಸಿಕೆ’
ನವದೆಹಲಿ: ಲಸಿಕೆ ಅಭಾವ ಸಮಸ್ಯೆ ಶಿಘ್ರದಲ್ಲೇ ಸರಿಹೋಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ ವೇಳೆಗೆ ದೇಶದಲ್ಲಿರುವ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ ಎಂದು ತಿಳಿಸಿದ್ದಾರೆ. ರಾಜಸ್ಥಾನದ ಕೋವಿಡ್ ಪರಿಸ್ಥಿತಿ ಕುರಿತು ವರ್ಚುವಲ್ ಮಾತುಕತೆ ವೇಳೆ ಮಾತನಾಡಿದ ಅವರು, ಲಸಿಕೆ ಕುರಿತು ಕಾಂಗ್ರೆಸ್ ದೇಶದ ಜನರ ದಾರಿ ತಪ್ಪಿಸುತ್ತಿದೆ. ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿರುವಾಗ ಈ ರೀತಿ ಲಸಿಕೆ ಕುರಿತು ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಡಿಸೆಂಬರ್ ವೇಳೆಗೆ ದೇಶದ ಪ್ರತಿಯೊಬ್ಬರು ಲಸಿಕೆ ಲಭ್ಯ – ಜೆ.ಪಿ ನಡ್ಡಾ
ಎಲ್ಲಿಗೆ ಬಂತು ನಮೋ ಲಸಿಕಾ ಮಹಾಯಜ್ಞ..?
ನವದೆಹಲಿ : ತಜ್ಞರು ಹೇಳುವ ಪ್ರಕಾರ ದೇಶದಲ್ಲಿ ಕೊರೊನಾಗೆ ಮೂಗುದಾರ ಹಾಕಬೇಕು ಅಂದ್ರೆ ಅದು ಲಸಿಕೆಯಿಂದ ಮಾತ್ರ ಸಾದ್ಯ. ಶೇಖಡಾ 80 ರಷ್ಟು ಜನರಿಗೆ ಲಸಿಕೆ ಹಾಕಿದರೇ ದೇಶದಲ್ಲಿ ಕೊರೊನಾ ಅಬ್ಬರವನ್ನು ತಡೆಯಬಹುದು ಎನ್ನುತ್ತಿದ್ದಾರೆ. ಆದ್ರೆ ವಾಸ್ತವದಲ್ಲಿ ಸರ್ಕಾರದ ಇದನ್ನ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಕೊವಿಡ್-19 ಲಸಿಕೆ ಪಡೆಯುವವರ ಸಂಖ್ಯೆ ಇಳಿಮುಖವಾಗುತ್ತಿರುವುದೇ ಅದಕ್ಕೆ ಸಾಕ್ಷಿಯಾಗಿದೆ. ಅಂದಹಾಗೆ ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ ಇಂದಿಗೆ 124 ದಿನ ಕಳೆದಿದ್ದು, 18,69,89,265 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗಿದೆ. ಕಳೆದ ಮೇ 1ರಿಂದ ಈವರೆಗೂ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ 70,12,752 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ.
ಲಸಿಕೆ ಕೊರತೆ : ಎಲ್ಲಿಗೆ ಬಂತು ನಮೋ ಲಸಿಕಾ ಮಹಾಯಜ್ಞ..?
ಸುಳ್ಳಾಯ್ತು ಯಶ್ ಬಗ್ಗೆ ರಮ್ಯಾ ನುಡಿದಿದ್ದ ಭವಿಷ್ಯ..!
ಸಿನಿಮಾರಂಗದಲ್ಲಿ ಯಶ್ ಗೆ ಗೆಲುವು ಸಿಗುದಿಲ್ಲ ಎಂದು ಈ ಹಿಂದೆ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಭವಿಷ್ಯ ನುಡಿದಿದ್ದರು. ಆದ್ರೆ ಇದೀಗ ಅವರ ಭವಿಷ್ಯ ಸುಳ್ಳಾಗಿದೆ. ಹಿಂದೊಂದು ದಿನ ಯಶ್ ಗೆ ಬೈದಿದ್ದ ರಮ್ಯಾ ‘ ನಿಮಗೆ ತುಂಬಾನೆ ಆಟಿಟ್ಯೂಡ್ ಪ್ರಾಬ್ಲಮ್ ಇದ್ದು, ನಿಮಗೆ ಯಾವತ್ತು ಯಶಸ್ಸು ಸಿಗುವುದಿಲ್ಲ ಎಂದಿದ್ರಂತೆ. ಲಕ್ಕಿ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಕಾಣಲಿಲ್ಲ. ಹೀಗಾಗಿ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಮ್ಯಾ ಯಶ್ ನನ್ನ ಕರೆಯರ್ ನಾಶ ಮಾಡಿಬಿಟ್ಟರು ಎಂದು ಆರೋಪಿದ್ದರು ಬಳಿಕ ಆ ಟ್ವೀಟ್ ಡಿಲೀಟ್ ಮಾಡಿದ್ದರು.. ಅಲ್ಲದೇ ಈ ರೀತಿ ಆಟಿಟ್ಯೂಟ್ ಇದ್ದರೆ ಯಾವತ್ತೂ ನೀವು ಯಶಸ್ಸು ಕಾಣುವುದಿಲ್ಲ ಎಂದೂ ಕೂಡ ಭವಿಷ್ಯ ನುಡಿದಿದ್ದರು.. ಆದ್ರೆ ಮೋಹಕ ತಾರೆ ರಮ್ಯಾ ಹೇಳಿದ್ದ ಮಾತು ಈಗ ಸುಳ್ಲಾಗಿದ್ದು ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
‘ಯಶ್… ನಿಮಗೆ ಆಟಿಟ್ಯೂಡ್ ಪ್ರಾಬ್ಲಮ್ ಇದೆ… ನಿಮಗೆ ಯಾವತ್ತೂ ಯಶಸ್ಸು ಸಿಗಲ್ಲ’ ಎಂದಿದ್ದ ರಮ್ಯಾ…!
ಯಂಗ್ ಇಂಡಿಯಾಗೆ ದ್ರಾವಿಡ್ ಕೋಚ್
ನವದೆಹಲಿ : ಜುಲೈನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಆರು ಪಂದ್ಯಗಳ ಸರಣಿಗೆ ಭಾರತೀಯ ತಂಡಕ್ಕೆ ಕೋಚ್ ಆಗಿ ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಹಾಲಿ ಎಸ್ ಸಿ ಎ ಮುಖ್ಯಸ್ಥ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ರವಿಶಾಸ್ತ್ರಿ, ಭಾರತ್ ಅರುಣ್ ಮತ್ತು ವಿಕ್ರಮ್ ರಾಥೋಡ್ ಮೂವರು ಟೆಸ್ಟ್ ತಂಡದೊಂದಿಗೆ ಇಂಗ್ಲೆಂ???ನಲ್ಲಿ ಇರುವುದರಿಂದ ಎ???ಸಿಎ ಮುಖ್ಯಸ್ಥರಾದ ರಾಹುಲ್ ದ್ರಾವಿಡ್, ಶ್ರೀಲಂಕಾ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ದೃಢಪಡಿಸಿದ್ದಾರೆ.
ಶ್ರೀಲಂಕಾ ಸರಣಿ : ಯಂಗ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್
ಮಿಲ್ಕಾ ಸಿಂಗ್ ಗೆ ಕೊರೊನಾ
ಭಾರತದ ಲೆಜೆಂಡರಿ ಓಟಗಾರ ಮಿಲ್ಖಾ ಸಿಂಗ್ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಮಿಲ್ಖಾ ಸಿಂಗ್ ಅವರ ಮಗ ಈ ವಿಚಾರವನ್ನು ಖಚಿತಪಡಿಸಿದ್ದು, ಚಂಡೀಗಢ್?ನಲ್ಲಿರುವ ತಮ್ಮ ಮನೆಯಲ್ಲಿ ಅವರು ಐಸೊಲೇಟ್? ಆಗಿದ್ದಾರೆ ಎಂದು ತಿಳಿಸಿದ್ದಾರೆ.