ADVERTISEMENT
Wednesday, June 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಪ್ರಮುಖ ರಾಷ್ಟ್ರೀಯ ಸುದ್ದಿಗಳು : Latest Updates

Namratha Rao by Namratha Rao
February 14, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಪ್ರಮುಖ ರಾಷ್ಟ್ರೀಯ ಸುದ್ದಿಗಳು : Latest Updates

ಸುದ್ದಿಯ ಸಂಪೂರ್ಣ ವಿವರಣೆಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ

Related posts

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

June 9, 2026
ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

June 9, 2026

ಲೋಕಸಭೆಯಲ್ಲಿ ಜಮ್ಮು ಕಾಶ್ಮೀರ ಮಸೂದೆಗೆ BSP ಬೆಂಬಲ..! ಕಾಂಗ್ರೆಸ್ ವಿರುದ್ಧ ಆಕ್ರೋಶ..!

ನವದೆಹಲಿ: ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯನ್ನು ಬಿಎಸ್ ಪಿ ಬೆಂಬಲಿಸಿದೆ. ಅಲ್ದೇ ಇದೇ ವೇಳೆ ಸರ್ಕಾರದ ಸುಧಾರಣಾ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದೆ. ಇಂದು ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಎಸ್ ಪಿ ಸಂಸದ ಮಲೂಕ್ ನಗರ್ ಅವರು, ನಮ್ಮ ಪಕ್ಷ ಬಡವರು, ದಲಿತರು ಮತ್ತು ಕೇಂದ್ರಾಡಳಿತ ಪ್ರದೇಶದ ಇತರ ವಂಚಿತ ಸಮುದಾಯಗಳ ಪರವಾಗಿದೆ ಎಂದರು.

ಒಂದು ವಿಚಾರಕ್ಕಾಗಿ ನನ್ನ ತಂದೆ, ಅಜ್ಜಿ ಹತ್ಯೆಯಾದ ಬಗ್ಗೆ ನನಗೆ ಹೆಮ್ಮೆಯಿದೆ: ರಾಹುಲ್ ಗಾಂಧಿ

ನವದೆಹಲಿ: ನನ್ನ ಅಜ್ಜಿ ಮತ್ತು ತಂದೆ ಒಂದು ವಿಚಾರಕ್ಕಾಗಿ ಹತ್ಯೆಯಾದರು. ಇದರ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಅವರ ಬಗ್ಗೆ, ನನ್ನ ಸ್ಥಾನದ ಬಗ್ಗೆ ಮತ್ತು ನಾನೇನು ಮಾಡಬೇಕು ಎನ್ನುವ ಬಗ್ಗೆ ನನಗೆ ಅರ್ಥ ಮಾಡಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಚಿಕಾಗೋ ವಿಶ್ವವಿದ್ಯಾಲಯದ ದೀಪೇಶ್ ಚಕ್ರವರ್ತಿ ಜೊತೆಗೆ ನಡೆಸಿದ ವರ್ಚುವಲ್ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ , ಕಾಂಗ್ರೆಸ್ ನ ಕುಟುಂಬ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ನಮ್ಮ ಕುಟುಂಬದ ಮೇಲೆ ಈ ಆಪಾದನೆ ನನಗೆ ಅಚ್ಚರಿ ಮೂಡಿಸುತ್ತದೆ. ನಮ್ಮ ಕುಟುಂಬ ಸದಸ್ಯರು ಪ್ರಧಾನ ಮಂತ್ರಿಯಾಗಿ 30 ವರ್ಷಗಳೇ ಕಳೆಯಿತು ಎಂದಿದ್ದಾರೆ.

ಪರೀಕ್ಷೆ ಬರೆಯಲು ಹೊರಟಾಗಲೇ ಗರ್ಭಿಣಿಗೆ ಹೆರಿಗೆ ನೋವು: ಮಗುವಿಗೆ ಜನ್ಮ ನೀಡಿ ಪರೀಕ್ಷೆ ಬರೆದ ಮಹಿಳೆ..!

ಬಿಹಾರ: ಪರೀಕ್ಷೆ ಬರೆಯಲೆಂದು ತೆರಳುತ್ತಿದ್ದ ತುಂಬು ಗರ್ಭಿಣಿಗೆ ರಸ್ತೆ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡಿ, ಬಳಿಕ ಮಹಿಳೆ ಪರೀಕ್ಷೆಗೆ ಹಾಜರಾಗಿರುವ ಘಟನೆಯೊಂದು ಬಿಹಾರದ ಮೋತಿಹರ ಜಿಲ್ಲೆಯಲ್ಲಿ ನಡೆದಿದೆ. ಕಾಜಲ್ ಎಂಬ ಮಹಿಳೆ ತುಂಬು ಗರ್ಭಿಣಿಯಾಗಿದ್ದು, ದ್ವಿತೀಯ ಪಿಯು ಪರೀಕ್ಷೆ ಇದ್ದುದರಿಂದ ಪರೀಕ್ಷೆ ಬರೆಯಲು ಜಿಲ್ಲಾ ಕೇಂದ್ರಕ್ಕೆ ತೆರಳಲು ವಾಹನದಲ್ಲಿ ಹೋಗುತ್ತಿದ್ದಳು. ಮಾರ್ಗ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ತಕ್ಷಣ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆಯನ್ನು ಬರೆದಿದ್ದು, ನಿಜಕ್ಕೂ ಶ್ಲಾಘನೀಯವೇ.

ಬಿಜೆಪಿ ಕಾರ್ಯಕರ್ತರ ಕೊಲೆ ಮಾಡಿದ್ದ ಉಗ್ರನ ಬಂಧನ..!

ಜಮ್ಮು: ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಉಗ್ರನನ್ನು ಪೊಲೀಸರು ಸಾಂಬಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಅನಂತನಾಗ್ ಪೊಲೀಸರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಜಹೂರ್ ಅಹಮದ್ ಅಲಿಯಾಸ್ ಖಾಲಿದ್ನನ್ನು ಸಾಂಬಾ ಜಿಲ್ಲೆಯ ಮನೆಯೊಂದರಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಸಿಕ್ಕ ಸಿಕ್ಕ ಜಾಗಗಳಲ್ಲಿ ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ನಡೆಸೋಹಾಗಿಲ್ಲ’ : ಸುಪ್ರೀಂ ಕೋರ್ಟ್

ನವದೆಹಲಿ: ಸಿಟಿಜನ್ಶಿಪ್ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಾನೂನುಬಾಹಿರ ಎಂದು ಹೇಳಿದ್ದ ತನ್ನ ತೀರ್ಪನ್ನು ಬದಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಲ್ಲದೇ ಪ್ರತಿಭಟನೆಯ ಹಕ್ಕಿದೆ ಎಂದು ಸಿಕ್ಕ ಸಿಕ್ಕ ಜಾಗಗಳಲ್ಲಿ ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

‘ಯಾರ್ ಸ್ಯಾಮಿ ಕುಟುಂಬ ರಾಜಕಾರಣ ಮಾಡ್ತಿರೋರು..? ಪ್ರಧಾನಿಯಾಗಿ 30 ವರ್ಷವಾಗಿದೆ’..!

ನವದೆಹಲಿ: ನಮ್ಮ ಕುಟುಂಬದವರು ಪ್ರಧಾನಿಯಾಗಿ 30 ವರ್ಷವಾಗಿದೆ. ಆದರೂ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಾರೆ. ಕುಟುಂಬ ರಾಜಕಾರಣ ಮಾಡ್ತಿದ್ದೇವೆ, ವಂಶ ರಾಜಕೀಯ ಮಾಡುತ್ತಿದ್ದೇವೆ ಎಂದು ಪದೇ ಪದೇ ಕೆಲವರು ಹೀಯಾಳಿಸುತ್ತಿದ್ದಾರೆ. ನಾವೇನು ಕುಟುಂಬ ರಾಜಕಾರಣ ಮಾಡುತ್ತಿದ್ದೇವಾ. ವಿನಾಕಾರಣ ಆರೋಪ ಏಕೆ ಮಾಡುತ್ತಿದ್ದೀರಿ. ನಾವು ಇಂತಹ ಇಂಥ ಟೀಕೆಗಳಿಗೆ ಬೆದರಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಟರ್ಕಿ ಸಂಚು – ಪಾಪಿ ಪಾಕ್ ಗೆ ಟರ್ಕಿ ಸಾಥ್..!

ಭಾರತದ ಬದ್ಧ ವೈರಿ ರಾಷ್ಟ್ರ ಅಂದ್ರೆ ಅದು ಪಾಕಿಸ್ತಾನ. ಪಾಕ್ ಗೆ ಕೆಲವೇ ಕೆಲವು ಮಿತ್ರ ರಾಷ್ಟ್ರಗಳಲ್ಲಿ ಒಂದು ಟರ್ಕಿ. ಇದೇ ಟರ್ಕಿ ರಾಷ್ಟ್ರ ಇದೀಗ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದೆ. ಹಿಂಸಾಚಾರವನ್ನು ಹರಡಲು ಟರ್ಕಿಯ ಅಧ್ಯಕ್ಷ ರೆಚಪ್ ತಯ್ಯಿಪ್ ಎರ್ಡೊಗನ್ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಗ್ರೀಕ್ ಮಾಧ್ಯಮವೊಂದು ವರದಿ ಮಾಡಿದೆ.

ಚೀನಾಗೆ ಒಂದಿಂಚೂ ಭೂಮಿಯನ್ನ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯ..!

ನವದೆಹಲಿ : ಪೂರ್ವ ಲಡಾಖ್ ನ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶದಲ್ಲಿನ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಚೀನಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದ್ರೆ ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಭಾರತದ ಭೂ ಭಾಗವನ್ನ ಚೀನಾ ವಶಕ್ಕೆ ಪಡೆದಿದೆ ಎಂದು ವದಂತಿಗಳು ಹಬ್ಬುತ್ತಿದೆ. ಆದ್ರೆ ಇದಕ್ಕೆ ರಕ್ಷನಾ ಸಚಿವಾಲಯವು ಸ್ಪಷ್ಟನೆ ನೀಡಿದೆ. ಒಪ್ಪಂದದ ಫಲವಾಗಿ ಯಾವುದೇ ಭೂಭಾಗವನ್ನು ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಫೆಬ್ರವರಿ 15ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ : ಇಲ್ಲದಿದ್ದರೆ 2 ಪಟ್ಟು ದಂಡ ಕಟ್ಟಲು ರೆಡಿಯಾಗಿ..!

ನವದೆಹಲಿ: ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಇಲ್ಲದೇ ಹೋದರೆ ಎರಡು ಪಟ್ಟು ಅಧಿಕ ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿದೆ. ಈ ಹಿಂದೆ ಜನವರಿ 1 ರಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಹಾಗೂ ಇತರೇ ಕಾರಣಗಳಿಂದಾಗಿ ವಿನಾಯಿತಿ ನೀಡಿ ಫೆಬ್ರವರಿ 15 ರವರೆಗೂ ವಿಸ್ತರಿಸಲಾಗಿದ್ದು ಸೋಮವಾರದಿಂದ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿರುತ್ತದೆ. ಈ ಬಾರಿ ವಿಸ್ತರಣೆಯಾಗುವುದಿಲ್ಲ ಎಂದು ಕೇಂದ್ರ ರಸ್ತೆ ಹೆದ್ದಾರಿ ಪ್ರಾಧಿಕಾರವೂ ಈಗಾಗಲೇ ತಿಳಿಸಿದೆ.

ಕೊರೊನಾ ಮಧ್ಯೆಯೂ ದಾಖಲೆ ರಸಗೊಬ್ಬರ ಪೂರೈಕೆ

ನವದೆಹಲಿ : ಕೊರೊನಾ ಸಂಕಷ್ಟದ ಮಧ್ಯೆಯೂ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಸಗೊಬ್ಬರ ಪೂರೈಕೆ ಶೇಕಡಾ 25ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಐಆರ್‌ಸಿಟಿಸಿಯಿಂದ ಐಆರ್‌ಸಿಟಿಸಿ-ಐಪೇ ಎಂಬ ಹೊಸ ಪಾವತಿ ಗೇಟ್‌ವೇ

ಹೊಸದಿಲ್ಲಿ, ಫೆಬ್ರವರಿ13: ಇತ್ತೀಚೆಗೆ‌ ಭಾರತೀಯ ರೈಲ್ವೆ ಪ್ರವಾಸೋದ್ಯಮ ಮತ್ತು ಅಡುಗೆ ನಿಗಮ (ಐಆರ್‌ಸಿಟಿಸಿ) ತನ್ನ ನವೀಕರಿಸಿದ ವೆಬ್‌ಸೈಟ್ ಅನ್ನು ರೈಲ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಅಧಿಕೃತಗೊಳಿಸಿದೆ. ಇದೀಗ ಐಆರ್‌ಸಿಟಿಸಿ-ಐಪೇ ಎಂಬ ಹೊಸ ಪಾವತಿ ಗೇಟ್‌ವೇ ಅನ್ನು ಪ್ರಾರಂಭಿಸಿದೆ. ಇದನ್ನು ರೈಲು ಪ್ರಯಾಣಿಕರು ಪಾವತಿ ಮಾಡಲು ಬಳಸಬಹುದು.

ಋತುಮತಿಯಾದ ತಕ್ಷಣ ಮುಸ್ಲಿಂ ಹೆಣ್ಣುಮಕ್ಕಳು ಮದುವೆಗೆ ಅರ್ಹರು – ಪಂಜಾಬ್-ಹರ್ಯಾಣ ಹೈಕೋರ್ಟ್ ತೀರ್ಪು

ಹರಿಯಾಣ : ನಮ್ಮ ದೇಶದ ಕಾನೂನಿನ ಪ್ರಕಾರ ಯುವತಿಯರು ಮದುವೆಯಾಗಲು ಅವರಿಗೆ ಕನಿಷ್ಠ 16 ವರ್ಷಗಳಾಗಿರಬೇಕು. ಇಲ್ಲದೇ ಹೋದ ಪಕ್ಷದಲ್ಲಿ ಅದನ್ನ ಬಾಲ್ಯವಿವಾಹ ಎಮದು ಪರಿಗಣಿಸಲಾಗುತ್ತೆ. ಅದು ಶಿಕ್ಷಾರ್ಹ ಅಪರಾಧವೂ ಹೌದು. ಆದ್ರೆ ಪಂಜಾಬ್ ಹರಿಯಾಣ ಹೈಕೋರ್ಟ್ ನೀಡಿರುವ ತೀರ್ಪು ಆಶ್ಚರ್ಯವೆನ್ನಿಸುತ್ತೆ. ಯಾಂದ್ರೆ ಮುಸ್ಲಿಂ ಹೆಣ್ಣುಮಕ್ಕಳು ಋತುಮತಿಯಾದ ತಕ್ಷಣ ಮದುವೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಅಂಥ ಬಾಲಕಿಯರಿಗೆ 18 ವರ್ಷ ಪೂರ್ಣಗೊಳದೇ ಇದ್ದರೂ ಅವರ ವಿವಾಹ ಕಾನೂನುಬದ್ಧವಾಗಿರುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ.

ಬ್ಲಾಕ್ ಮಟ್ಟದಲ್ಲಿ ಜನೌಷಧಿ ಕೇಂದ್ರ – ಕೇಂದ್ರ ಸರ್ಕಾರದಿಂದ ಘೋಷಣೆ

ಹೊಸದಿಲ್ಲಿ, ಫೆಬ್ರವರಿ13: ಕೇಂದ್ರದ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಭಾಯ್ ಮಂದವಿಯಾ ಅವರು ಶುಕ್ರವಾರ ಬ್ಲಾಕ್ ಮಟ್ಟದಲ್ಲಿ ಜನೌಷಧಿ ಕೇಂದ್ರವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ, ಭಾರತದಲ್ಲಿ 7,326 ಜನೌಷಧಿ ಕೇಂದ್ರಗಳಿವೆ. ಬ್ಲಾಕ್ ಮಟ್ಟದಲ್ಲಿ ಹೊಸ ಜನೌಷಧಿ ಕೇಂದ್ರವನ್ನು ತೆರೆಯುವುದರೊಂದಿಗೆ, ಜನರು ಸುಲಭವಾಗಿ ಜೆನೆರಿಕ್ ಔಷಧಿಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJPCongressindiaINDIAN ARMYModiNationalrahul gandhi
ShareTweetSendShare
Join us on:

Related Posts

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

by Shwetha
June 9, 2026
0

ರಾಜ್ಯಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮಂಡ್ಯದ ರಾಜಕೀಯ ಅಖಾಡದಲ್ಲಿ ಈಗ ಹೊಸ ಕಿಚ್ಚು ಹೊತ್ತಿಕೊಂಡಿದ್ದು, ಸಂಸದೆ ಸುಮಲತಾ ಅಂಬರೀಷ್...

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

by Shwetha
June 9, 2026
0

ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜೂನ್ 11ರಂದು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ...

ಕಂದಾಯ ಇಲಾಖೆಯ ಚಾಣಕ್ಯನಿಗೆ ತಾರತಮ್ಯದ ಬಿಸಿ?  ಬಿಡಿಎ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆ ನನಗೇಕೆ? : ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಳ್ಳಲು ಕೃಷ್ಣಭೈರೇಗೌಡ ಹಿಂದೇಟು

ಕಂದಾಯ ಇಲಾಖೆಯ ಚಾಣಕ್ಯನಿಗೆ ತಾರತಮ್ಯದ ಬಿಸಿ? ಬಿಡಿಎ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆ ನನಗೇಕೆ? : ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಳ್ಳಲು ಕೃಷ್ಣಭೈರೇಗೌಡ ಹಿಂದೇಟು

by Shwetha
June 9, 2026
0

ರಾಜ್ಯ ರಾಜಕಾರಣದಲ್ಲಿ ಖಾತೆ ಹಂಚಿಕೆಯ ಕಿಚ್ಚು ಮತ್ತೆ ಜೋರಾಗಿದೆ. ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವ ಕೃಷ್ಣಭೈರೇಗೌಡ ಅವರು ತಮಗೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಬಗ್ಗೆ ತೀವ್ರ...

ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ತುರ್ತು ಎಚ್ಚರಿಕೆ

ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ತುರ್ತು ಎಚ್ಚರಿಕೆ

by Shwetha
June 9, 2026
0

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ಗೆ ಪ್ರಯಾಣ ಮಾಡದಂತೆ ಭಾರತೀಯರಿಗೆ ತುರ್ತು ಸಲಹೆ ನೀಡಲಾಗಿದೆ. ಭಾರತ ಸರ್ಕಾರದ ರಾಯಭಾರ ಕಚೇರಿ ಈ...

ಸುರ್ಜೇವಾಲ ಉರುಫ್ ವಸೂಲಿವಾಲ ಎಂದ ಜೆಡಿಎಸ್: ಎನ್ ಡಿ ಎ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೈ ಮತ್ತು ದಳ ನಡುವೆ  ಟ್ವೀಟ್ ಫೈಟ್

ಸುರ್ಜೇವಾಲ ಉರುಫ್ ವಸೂಲಿವಾಲ ಎಂದ ಜೆಡಿಎಸ್: ಎನ್ ಡಿ ಎ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೈ ಮತ್ತು ದಳ ನಡುವೆ ಟ್ವೀಟ್ ಫೈಟ್

by Shwetha
June 9, 2026
0

ಕರ್ನಾಟಕದ ರಾಜಕೀಯ ವಲಯದಲ್ಲಿ ಈಗ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣಾ ಕಣವು ರಣರಂಗವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ನಿರಾಳವಾಗಿದ್ದರೆ, ಬಿಜೆಪಿ ತನ್ನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram