ಲಹರಿ ಸಂಸ್ಥೆ ಪಾಲಾದ ‘KGF ಚಾಪ್ಟರ್ 2’ ಆಡಿಯೋ ರೈಟ್ಸ್
ಬೆಂಗಳೂರು: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಪ್ರಸಾಂತ್ ನೀಲ್ ಕಾಂಬಿನೇಷನ್ ನ KGF ಸಿನಿಮಾ ತನ್ನ ಹವಾ ಸೃಷ್ಟಿ ಮಾಡಿದ ಮೇಲೆ ಸೌತ್ ಸಿನಿಮಾಗಳ ಹೈಪ್ ಹೆಚ್ಚಾಗಿರೋದು ಅಂತ ಹೇಳುದ್ರೂ ತಪ್ಪಾಗೋದಿಲ್ಲ. ಅದಕ್ಕೂ ಮುಂಚೆ ಬಾಹುಲಿ ದಕ್ಷಿಣ ಪಬಾರತದತ್ತ ಬಾಲಿವುಡ್ ಬೆರಾಗು ಗಣ್ಣಿನಲ್ಲಿ ನೋವುಂತೆ ಮಾಡಿತ್ತು.. ಆದ್ರೆ ಅದನ್ನ KGF ಬೇರೆಯದ್ದೇ ಲೆವೆಲ್ ಗೆ ತೆಗೆದುಕೊಂಡು ಹೋಗಿದೆ.. ಯಾಕಂದ್ರೆ KGF ಸಿನಿಮಾದ ಕ್ರೇಜ್ ಇನ್ನೂವರೆಗೂ ಕಡಿಮೆಯಾಗಿಲ್ಲ.. ವಿಶ್ವಾದ್ಯಂತ ಸಿನಿಮಾ ಸೌಂಡ್ ಮಾಡಿದೆ.. ಅಲ್ಲದೇ ಚಾಪ್ಟರ್ 2 ಯಾವಾಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು , ಇಡೀ ಬಾರತೀಯ ಸಿನಿಮಾರಂಗವೇ ತುದಿಗಾಲಿನಲ್ಲಿ ಕಾದುಕುಳಿತಿದೆ..
ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ ರಿಲೀಸ್ – ನಂ 1 ಸ್ಥಾನ ಯಾವ ಸಿನಿಮಾಗೆ..? ಟಾಪ್ 3 ನಲ್ಲಿ ಬಾಲಿವುಡ್ ಗೆ ಜಾಗವಿಲ್ಲ..!
ಇತ್ತೀಚೆಗೆ IMDb ಬಿಡುಗಡೆ ಮಾಡಿದ್ದ ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿ ‘KGF ಚಾಪ್ಟರ್ 2’ ಚಾಪ್ಟರ್ 2 ಅಗ್ರ ಸ್ಥಾನದ ಪಡೆದಿದೆ.. ಇದೀಗ ಚಿತ್ರದ ಆಡಿಯೋ ರೈಟ್ಸ್ ಇದೀಗ ಬಿಗ್ ಮೊತ್ತಕ್ಕೆ ಸೇಲಾಗಿದೆ. ಕೆಜಿಎಫ್ ಆಡಿಯೋ ರೈಟ್ಸ್ ಹೆಸರಾಂತ ಸಂಸ್ಥೆ ಲಹರಿ ಆಡಿಯೋಸ್ ಕಂಪನಿಯ ಪಾಲಾಗಿದೆ. ಇಂದು ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಅವರನ್ನು ಭೇಟಿಯಾದ ನಿರ್ಮಾಪಕ ವಿಜಯ್ ಕಿರಗಂದೂರ್ ಕೆಜಿಎಫ್ 2 ಚಿತ್ರದ ಆಡಿಯೋ ರೈಟ್ಸ್ ಮಾರಾಟದ ಪ್ರತಿಯನ್ನು ಹಸ್ತಾಂತರಿಸಿದ್ದಾರೆ. ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ಮಾತ್ರ ರಿವೀಲ್ ಆಗಿಲ್ಲ.
ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ ಚಾಪ್ಟರ 2 ಸಿನಿಮಾ ಇದೆ ವರ್ಷ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಅವರು ಬಹುಕೋಟಿಯಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಕುತೂಹಲ ಹುಟ್ಟುಹಾಕಿದೆ…
ನಂಬಿ ಕೆಟ್ಟವರಿಲ್ಲಾ ಗುರುರಾಯರ..ರಾಯರ ಕೃಪೆಯಿಂದ ಯತಿರಾಜನಿಗೆ ಸಣ್ಣ ಗಾಯವೂ ಆಗಿಲ್ಲ : ಜಗ್ಗೇಶ್
ಸೋಷಿಯಲ್ ಮೀಡಿಯಾ ತುಂಬ ರಣವೀರ್ ಸಿಂಗ್ ಹೊಸ ಸ್ಟೈಲ್ ನದ್ದೇ ಹವಾ…!
ಪವರ್ ಸ್ಟಾರ್ ಮುಂದಿನ ಚಿತ್ರಕ್ಕೆ `ದ್ವಿತ್ವ’ ಶೀರ್ಷಿಕೆ
ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಆ ಒಂದು ತಪ್ಪಿನಿಂದ ರಾಜೀನಾಮೆ ಕೊಟ್ಟಿದ್ದ ರಮ್ಯಾ…!
ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಆ ಒಂದು ತಪ್ಪಿನಿಂದ ರಾಜೀನಾಮೆ ಕೊಟ್ಟಿದ್ದ ರಮ್ಯಾ…!
ಸೋಷಿಯಲ್ ಮೀಡಿಯಾದಲ್ಲಿ ‘RRR’ ಪೋಸ್ಟರ್ ಸಂಚಲನ : ಸಸುದೀಪ್ , ವಿರಾಟ್ , ಪವನ್ ಕಲ್ಯಾಣ್ ರೋಹಿತ್ ಒಟ್ಟಾಗಿ ದರ್ಶನ…!
ಕಂಗನಾ ಹಿಂದೆಯೂ ನನಗೆ ಮುಖ್ಯವಾಗಿರಲಿಲ್ಲ, ಈಗಲೂ ಇಲ್ಲ – ತಾಪ್ಸಿ..!
ವಿಜಯ್ ದೇವರಕೊಂಡ ಜೊತೆಗಿರುವ ಫೇವರೇಟ್ ಫೋಟೋ ಶೇರ್ ಮಾಡಿದ ರಶ್ಮಿಕಾ