ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿಗಳು : LATEST UPDATES

1 min read

ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿಗಳು : LATEST UPDATES

ಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪನಿಗಳಿಗೂ ಒಪ್ಪಿಗೆ ಸೂಚಿಸಿಲ್ಲ..!

ನವದೆಹಲಿ: ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆಯೇ ಚೀನಾದಿಂದ ಹೂಡಿಕೆ ಪ್ರಸ್ತಾಪಗಳು ಹರಿದುಬರುತ್ತಿವೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡ್ತಿದ್ದು, ಇಂತಹ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಭಾರತದಲ್ಲಿ ಹೂಡಿಕೆ ಮಾಡಲು ಯಾವುದೇ ಚೀನೀ ಕಂಪೆನಿಗಳಿಗೆ ಅನುಮತಿ ನೀಡಿಲ್ಲ. ಇದುವರೆಗೂ ಅಂತಹ ಯಾವ ಪ್ರಸ್ತಾವಗಳಿಗೂ ಒಪ್ಪಿಗೆ ನೀಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹಾಂಕಾಂಗ್ ಮೂಲದ ಮೂರು ಕಂಪೆನಿಗಳ ಪ್ರಸ್ತಾಪವನ್ನು ಮಾತ್ರ ಜನವರಿ 22ರಂದು ನಡೆದ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂರು ಪ್ರಸ್ತಾಪಗಳು ಸಿಟಿಜನ್ ವಾಚಸ್, ನಿಪ್ಪಾನ್ ಪೈಂಟ್ಸ್ ಮತ್ತು ನೆಟ್‌ಪ್ಲೇಗಳಿಂದ ಬಂದಿತ್ತು. ಮೂರರಲ್ಲಿ ಎರಡು ಜಪಾನಿ ಕಂಪೆನಿಗಳು ಮತ್ತು ಒಂದು ಎನ್‌ಆರ್‌ಐಗೆ ಸೇರಿದ್ದವಾಗಿವೆ ಎಂದು ಮೂಲಗಳು ಹೇಳಿವೆ.

ಅಮೇಥಿಯಲ್ಲಿ ಭೂಮಿ ಖರೀದಿಸಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಅಮೇಥಿಯಲ್ಲಿ ಭೂಮಿ ಖರೀದಿಸಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಅಮೇಥಿ, ಫೆಬ್ರವರಿ23: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಮೇಥಿಯಲ್ಲಿ ಭೂಮಿಯನ್ನು ಖರೀದಿಸಿದ್ದಾರೆ. ಅಲ್ಲಿಯೇ ಅವರು ತಮ್ಮ ಮನೆಯನ್ನು ನಿರ್ಮಿಸಲಿದ್ದಾರೆ.  ಖರೀದಿಯ ಔಪಚಾರಿಕತೆಯನ್ನು ಪೂರ್ಣಗೊಳಿಸಲು ಇರಾನಿ ಸೋಮವಾರ ಅಮೇಥಿಗೆ ಬಂದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಅವರು ಸೋಲುಣಿಸಿದ್ದರು. ಅವರು ಅಂದಿನ ಚುನಾವಣಾ ಪ್ರಚಾರದ ವೇಳೆ ಇಲ್ಲಿ ಮನೆ ಕಟ್ಟಿ, ಇಲ್ಲಿಂದಲೇ ಸಂಸದೀಯ ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದರು. ತಾವು ನೀಡಿದ ಭರವಸೆಯಂತೆ ಸ್ಥಳೀಯ ನಿವಾಸಿ ಫೂಲ್ಮತಿ ದೇವಿಯಿಂದ 11 ಬಿಸ್ವಾ ಭೂಮಿಯನ್ನು ₹ 12.11 ಲಕ್ಷಕ್ಕೆ ಸಚಿವೆ ಸ್ಮೃತಿ ಇರಾನಿ ಖರೀದಿಸಿದ್ದಾರೆ.

ಅರೆಸ್ಟ್ ಆಗ್ತಾರಾ ರಾಮ್ ದೇವ್ ಬಾಬಾ..?

ಅರೆಸ್ಟ್ ಆಗ್ತಾರಾ ರಾಮ್ ದೇವ್ ಬಾಬಾ..?

ನವದೆಹಲಿ: ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ರಾಮದೇವ್ ಬಾಬಾ ಅರೆಸ್ಟ್ ಆಗ್ತಾರಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅವರನ್ನು ಬಂಧಿಸುವಂತೆ ಅನೇಕರು ಸೋಶಿಯಲ್ ಮೀಡಿಯಾ ವೇದಿಕೆಯಾಗಿ ಒತ್ತಾಯಿಸುತ್ತಿದ್ದಾರೆ. ಕೊರೊನಾಗೆ ಔಷಧಿಯಾಗಿ ಪತಂಜಲಿ ಇತ್ತೀಚೆಗೆ ‘ಕೊರೊನಿಲ್’ ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. ಕೊರೊನಿಲ್ ಬಿಡುಗಡೆ ಸಂದರ್ಭದಲ್ಲಿ ರಾಮದೇವ್ ಬಾಬಾ ಕೊರೊನಿಲ್ ಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರವಿದೆ ಎಂದು ಹೇಳುವ ಮೂಲಕ ಎಲ್ಲರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಲು ನೋಡಿದ ಯೋಗ ಗುರುವನ್ನು ಬಂಧಿಸುವಂತೆ ಅನೇಕ ಆರೋಗ್ಯ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘ ಸಂಸ್ಥೆಗಳು ಒತ್ತಾಯಿಸುತ್ತಿವೆ. ಈ ನೇಪಥ್ಯದಲ್ಲಿ ರಾಮ್ ದೇವ್ ಅವರನ್ನ ಬಂಧಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆತ್ಮೀಯ ದೆಹಲಿ ಪೊಲೀಸ್.. ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಣದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ದಾರಿತಪ್ಪಿಸಲು ಯತ್ನಿಸಿದ್ದಕ್ಕಾಗಿ ರಾಮದೇವ್ ಬಾಬಾ ಅವರನ್ನು ಬಂಧಿಸುತ್ತೀರಾ..? ಇದು ಅಂತರರಾಷ್ಟ್ರೀಯ ವಂಚನೆ ಎಂದು ಪರಿಗಣಿಸಬೇಕು. ಇದಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.

ಕೊರೊನಿಲ್ ಪ್ರಮಾಣೀಕರಣದ ಬಗ್ಗೆ ಪತಂಜಲಿ ಆಯುರ್ವೇದ ಸಂಸ್ಥೆಯಿಂದ ಸ್ಪಷ್ಟನೆ

ಕೊರೊನಿಲ್ ಪ್ರಮಾಣೀಕರಣದ ಬಗ್ಗೆ ಪತಂಜಲಿ ಆಯುರ್ವೇದ ಸಂಸ್ಥೆಯಿಂದ ಸ್ಪಷ್ಟನೆ

ಹೊಸದಿಲ್ಲಿ, ಫೆಬ್ರವರಿ23: ದೇಶದಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ಪತಂಜಲಿ ಆಯುರ್ವೇದ ಸಂಸ್ಥೆಯ ಕೊರೊನಿಲ್ ಪ್ರಮಾಣೀಕರಣದ ಬಗ್ಗೆಗಿನ ಊಹಾಪೋಹಗಳಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

ಕೊರೊನಿಲ್ ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಜಿಎಂಪಿ ಕಂಪ್ಲೈಂಟ್ ಸಿಒಪಿಪಿ ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ ಎಂಬ ಗೊಂದಲವನ್ನು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ. WHO ಯಾವುದೇ ಔಷಧಿಗಳನ್ನು ಅನುಮೋದಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ಜನರಿಗೆ ಉತ್ತಮ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು WHO ಕೆಲಸ ಮಾಡುತ್ತದೆ ಎಂದು ಆಚಾರ್ಯ ಬಾಲಕೃಷ್ಣ ಟ್ವೀಟ್ ಮಾಡಿದ್ದಾರೆ.

ಕೋವಿಡ್ -19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದ ನಂತರ ಆಚಾರ್ಯ ಬಾಲಕೃಷ್ಣ ಟ್ವೀಟ್ ಮಾಡಿದ್ದಾರೆ.

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಚಲನ ನಿರ್ಣಯ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಚಲನ ನಿರ್ಣಯ

ಮುಂಬೈ : ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಂಚಲನ ನಿರ್ಧಾರವನ್ನ ಪ್ರಕಟಿಸಿದೆ. ತನ್ನ ಆಯಿಲ್-ಟು-ಕೆಮಿಕಲ್ಸ್ (ಒಟಿಸಿ) ವ್ಯವಹಾರವನ್ನು ಸ್ವತಂತ್ರ ಅಂಗಸಂಸ್ಥೆಯಾಗಿ ಅಭಿವೃದ್ಧಿಪಡಿಸುತ್ತಿರುವುದಾಗಿ ಮಂಗಳವಾರ ಘೋಷಿಸಿದೆ. ವ್ಯಾಪಾರ ವರ್ಗಾವಣೆಯೊಂದಿಗೆ ಹೊಸದಾಗಿ ರೂಪುಗೊಂಡ ಅಂಗಸಂಸ್ಥೆಯ ಮೇಲೆ ಶೇ 100 ರಷ್ಟು ನಿರ್ವಹಣೆ ಮತ್ತು ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಆರ್ ಐಎಲ್ ತಿಳಿಸಿದೆ.

ಪುನರ್ ವ್ಯವಸ್ಥಿಕರನ ನಂತ್ರ ಪ್ರಮೋಟರ್ ಗ್ರೂಪ್ ಒಟೊಸಿಯ ವ್ಯವಹಾರದಲ್ಲಿ ಶೇ 49.14 ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ಕಂಪನಿಯ ಷೇರುದಾರರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ರಿಲಯನ್ಸ್ ಹೇಳಿದೆ. ಇದಕ್ಕೆ ಸಂಬಂಧಿಸಿ ಈಗಾಗಲೇ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಷೇರು ವಿನಿಮಯ ಕೇಂದ್ರಗಳ ಅನುಮೋದನೆ ದೊರೆತಿದೆ ಎಂದು ಆರ್‍ಐಎಲ್ ತಿಳಿಸಿದೆ.ಆದರೆ, ಈಕ್ವಿಟಿ ಷೇರುದಾರರು, ಸಾಲದಾತರು, ಐಟಿ ಮತ್ತು ಎನ್‍ಸಿಎಲ್‍ಟಿ ಪೀಠಗಳಿಂದ ಇನ್ನೂ ಅನುಮತಿ ದೊರೆತಿಲ್ಲ ಎಂದು ಅದು ಹೇಳಿದೆ. 2022 ರ ವೇಳೆಗೆ ಮುಂಬೈ ಮತ್ತು ಅಹಮದಾಬಾದ್ ಎನ್‍ಸಿಎಲ್‍ಟಿ ಅನುಮೋದನೆ ಬರಬಹುದೆಂದು ರಿಲಿಯನ್ಸ್ ಆಶಿಸುತ್ತಿದೆ. ಕಂಪನಿಯ ಎಲ್ಲಾ ಸಂಸ್ಕರಣೆ, ಮಾರ್ಕೆಟಿಂಗ್ ಮತ್ತು ಪೆಟ್ರೋಕೆಮಿಕಲ್ ಸ್ವತ್ತುಗಳನ್ನು ಹೊಸ ಅಂಗಸಂಸ್ಥೆಗೆ ವರ್ಗಾಯಿಸಲಾಗುತ್ತದೆ. ಸೌದಿ ಅರಾಮ್ಕೊ ಜೊತೆಗಿನ ಒಪ್ಪಂದವು ಹೂಡಿಕೆದಾರರ ಮೂಲಕ ಹೆಚ್ಚಿನ ಬಂಡವಾಳವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.

“ನಾಡಿ ಅಧಿಕಾರಿ ಯಾತ್ರೆ” ಕೈಗೊಳ್ಳುವುದಾಗಿ ಪ್ರಿಯಾಂಕಾ ಘೋಷಣೆ

“ನಾಡಿ ಅಧಿಕಾರಿ ಯಾತ್ರೆ” ಕೈಗೊಳ್ಳುವುದಾಗಿ ಪ್ರಿಯಾಂಕಾ (Priyanka Gandhi ) ಘೋಷಣೆ

ನವದೆಹಲಿ : ತೊಂದರೆಗೊಳಗಾಗಿರುವ ಸಮುದಾಯದ ಉದ್ದೇಶವನ್ನು ಬೆಂಬಲಿಸಿ ಪಕ್ಷವು “ನಾಡಿ ಅಧಿಕಾರಿ ಯಾತ್ರೆ” ಕೈಗೊಳ್ಳುವುದಾಗಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಣೆ ಮಾಡಿದ್ದಾರೆ ಪ್ರಯಾಗ್ ರಾಜ್ ನಲ್ಲಿ ಪೊಲೀಸರಿಂದ ಹಾನಿಗೊಳಗಾದ ದೋಣಿಗಳು ಹಾಗೂ ಮೀನುಗಾರರನ್ನು ಪ್ರಿಯಾಂಕಾ ಭೇಟಿ ಮಾಡಿ ಅವರ ಅಹವಾಲು ಆಲಿಸಿದ್ದರು. ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕಾ, ಮೀನುಗಾರರಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ರು.

1 ಟ್ವೀಟ್.. 1 ದಿನ.. ಎಲೋನ್ ಮಸ್ಕ್ ಗೆ 1 ಲಕ್ಷ ಕೋಟಿ ನಷ್ಟ

1 ಟ್ವೀಟ್.. 1 ದಿನ.. ಎಲೋನ್ ಮಸ್ಕ್ ಗೆ 1 ಲಕ್ಷ ಕೋಟಿ ನಷ್ಟ

1 ಟ್ವೀಟ್.. 1 ದಿನ.. ಎಲೋನ್ ಮಸ್ಕ್ ಗೆ 1 ಲಕ್ಷ ಕೋಟಿ ನಷ್ಟ. ಅಚ್ಚರಿ ಅನಿಸಿದ್ರೂ ಇದು ನಂಬಲೇಬೇಕಾದ ಸತ್ಯ. ಹೌದು..! ವಿಶ್ವದ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮೊದಲಸ್ಥಾನದಲ್ಲಿದ್ದ ಎಲೋನ್ ಮಸ್ಕ್ ಒಂದೇ ದಿನದಲ್ಲಿ ಒಂದು ಲಕ್ಷ ಕೋಟಿ ಕಳೆದುಕೊಂಡು ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸೋಮವಾರ ಟೆಸ್ಲಾ ಷೇರುಗಳು 8.6 ಪ್ರತಿಶತಕ್ಕೆ ಕುಸಿದ್ದು ಅವರ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ 15.2 ಬಿಲಿಯನ್ ಡಾಲರ್ ಇಳಿಕೆ ಕಂಡಿದೆ. ಇದು ನಮ್ಮ ರೂಪಾಯಿಗಳಲ್ಲಿ ಸುಮಾರು 1 ಲಕ್ಷ ಕೋಟಿ..!!

ಈ ಕುಸಿತದಿಂದ ಎಲೋನ್ ಮಸ್ಕ್ ಬಿಲಿಯನೇರ್ ಸೂಚ್ಯಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರೇ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಬ್ಲೂಮ್ ಬರ್ಗ್ ಅಗ್ರಸ್ಥಾನ ಪಡೆದಿದ್ದಾರೆ. ಟೆಸ್ಲಾ ಕಂಪನಿಯ ಷೇರುಗಳ ಈ ಕುಸಿತಕ್ಕೆ ಎಲೋನ್ ಮಸ್ಕ್ ಮಾಡಿದ ಒಂದೇ ಒಂದು ಟ್ವೀಟ್ ಕಾರಣವಾಗಿದೆ. ಇತ್ತೀಚೆಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಜನವರಿ 2021 ರಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‍ಕಾಯಿನ್‍ಗಳನ್ನು ಖರೀದಿಸಿತ್ತು. ಈ ಘೋಷಣೆಯ ಬಳಿಕ ಬಿಟ್‍ಕಾಯಿನ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಈ ಬಗ್ಗೆ ಬಿಟ್‍ಕಾಯಿನ್ ಮತ್ತು ಸಣ್ಣ ಪ್ರತಿಸ್ಪರ್ಧಿ ಈಥರ್‍ನ ಬೆಲೆಗಳು ಹೆಚ್ಚು ಎಂದು ತೋರುತ್ತದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದು, ಬಳಿಕ ಟೆಸ್ಲಾ ಕಂಪನಿಯ ಷೇರುಗಳು ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd