ಈ ದೇಶ ವಿಶ್ವದ ಅತ್ಯಂತ ಕುಶಾಲ ದೇಶ… ಇಲ್ಲಿ ಯಾರೂ ಕೂಡ ನಿರುದ್ಯೋಗಿಗಳಿಲ್ಲ… ಪ್ರಕೃತಿ ಪ್ರಿಯರ ಫೇವರೇಟ್ ದೇಶ…  ಇಲ್ಲಿ ಮನುಷ್ಯರಿಗಿಂತ ಹಂದಿಗಳೇ ಹೆಚ್ಚು..!

1 min read

ಈ ದೇಶ ವಿಶ್ವದ ಅತ್ಯಂತ ಕುಶಾಲ ದೇಶ… ಇಲ್ಲಿ ಯಾರೂ ಕೂಡ ನಿರುದ್ಯೋಗಿಗಳಿಲ್ಲ… ಪ್ರಕೃತಿ ಪ್ರಿಯರ ಫೇವರೇಟ್ ದೇಶ…  ಇಲ್ಲಿ ಮನುಷ್ಯರಿಗಿಂತ ಹಂದಿಗಳೇ ಹೆಚ್ಚು..!

ಡೆನ್ಮಾರ್ಕ್… ಸಮೃದ್ಧ ರಾಷ್ಟ್ರ , ಕುಶಾಲ ದೇಶ… ಶ್ರೀಮಂತ ದೇಶವೂ ಹೌದು.. ಈ ದೇಶದ ಜನರು ಎಲ್ರಿಗಿಂತ ಹೆಚ್ಚಾಗಿ ಸಂಪಾದನೆ ಮಾಡ್ತಾರೆ.. ಹಾಗೆಯೇ ಉದಾರವಾಗಿಯೇ ದುಡ್ಡು ಕರ್ಚು ಮಾಡುವುದು ಕೂಡ ಕಾಮನ್. ಸಾಕಷ್ಟು ಅಭಿವೃದ್ಧಿ ಹೊಂದಿರುವ ಈ ದೇಶದಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಹಂದಿಗಳಿವೆ.

ಈ ದೇಶದ ಬಗ್ಗೆ ತಿಳಿದುಕೊಳ್ಳಬೇಕಾದ ಸಾಕಷ್ಟು ಕುತೂಹಲಕಾರಿ ಹಾಗೂ ರೋಚಕ ಸಂಗತಿಗಳಿವೆ. ಅದರ ಬಗ್ಗೆ ತಿಳಿಯೋಣ.

ಡೆನ್ಮಾರ್ಕ್ ನ ಅಧಿಕೃತ ಹೆಸರು – ಕಿಂಗ್ ಡಮ್ ಆಫ್ ಡೆನ್ಮಾರ್ಕ್ ಕಾಂಗೇರಿಜೆಟ್ ಡೆನ್ಮಾರ್ಕ್

ರಾಜಧಾನಿ – ಕಾಪೇನ್ ಹಾಗೆನ್ , ಇಲ್ಲಿನ ಜನಸಂಖ್ಯೆ ಕೇವಲ 58 ಲಕ್ಷ ಮಾತ್ರ

89 % ರಷ್ಟು ದೇಶದ ಜನ ನಗರಗಳಲ್ಲಿ ವಾಸವಾಗಿದ್ರೆ ಉಳಿದವರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ.

ಯೂರೋಪ್ ನ ಇತರೇ ದೇಶಗಳಾದ ಸ್ವೀಡನ್ , ನಾರ್ವೆ , ಜರ್ಮನಿ ಜೊತೆಗೆ ಡೆನ್ಮಾರ್ಕ್ ಗಡಿ ಹಂಚಿಕೊಂಡಿದೆ.

ಇನ್ನೂ ಈ ದೇಶದಲ್ಲಿ ಒಂದು ವಿಚಿತ್ರ ಪರಂಪರೆಯಿದೆ. ಇಲ್ಲಿ 25 ವರ್ಷಗಳ ಒಳಗೆ ಯಾರಾದ್ರೂ ಮದುವೆಯಾಗದೇ ಇದ್ರೆ 25ನೇ ವರ್ಷದ ಜನ್ಮದಿನದಂದು ಅವರ ಮೇಲೆ ಡಾಲಿ್ಚೀನಿಯನ್ನ ಎಸೆಯಲಾಗುತ್ತದೆ. ಅಂತೆಯೇ 30 ವರ್ಷವಾದ್ರೂ ಮದುವೆಯಾಗದೇ ಇದ್ರೆ , 30ನೇ ವರ್ಷದ ಜನ್ಮದಿನದಂದು ಅವರ ಮೇಲೆ ಮೆಣಸನ್ನ ಎಸೆಯಲಾಗುತ್ತದೆ.Saakshatv story episode 1

ಈ ದೇಶ ಇಷ್ಟು ಶ್ರೀಮಂತವಾದ್ರೂ ಕೂಡ   ಇಲ್ಲಿನ ಜನರು ಕಾರ್ ಗಳಿಗಿಂತಲೂ ಹೆಚ್ಚಾಗಿ ಸೈಕಲ್ ಗಳನ್ನೇ ಬಳಸುತ್ತಾರೆ. ಇದ್ರಿಂದಾಗಿ ಈ ದೇಶದ ಬಹುತೇಕರು ಫಿಟ್ ಆಗಿರುತ್ತಾರೆ. ಅಷ್ಟೇ ಅಲ್ದೇ ಈ ದೇಶದಲ್ಲಿ ವಾಯು ಮಾಲಿನ್ಯದ ರೇಟ್ ಕೂಡ ತೀರಾ ಕಡಿಮೆಯಿದೆ.

ವಿಶ್ವದಲ್ಲಿ ಅತಿ ಹೆಚ್ಚು ವಿದ್ಯಾವಂತರ ದೇಶಗಳಲ್ಲಿ ಡೆನ್ಮಾರ್ಕ್ ಕೂಡ ಒಂದು. ಇನ್ನೂ ಕೆಲವು ವರದಿಗಳ ಪ್ರಕಾರ 1990ರಿಂದ ಹಿಡಿದು 2021ರವರೆಗೂ ಇಲ್ಲಿನ ಲಿಟ್ರೆಸಿ ರೇಟ್ 99 % ಇದೆ.

ಈ ದೇಶದಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಕೆಲಸವಿದೆ. ಅನೇಕರು ವ್ಯವಹಾರಗಳಲ್ಲಿ ತೊಡಗಿದ್ದಾರೆ. ಆದ್ರೆ ಯಾರೂ ಕೂಡ ಈ ದೇಶದಲ್ಲಿ ನಿರುದ್ಯೋಗಿಗಳಿಲ್ಲ.

ಇನ್ನೂ ಈ ದೇಶದಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಎಲ್ಲವೂ ಅಲ್ಲಿನ ನಾಗರಿಗೆ ಫ್ರೀ…!

ವಿಶ್ವದ ಅತಿ ಹಳೆಯ ಧ್ವಜ ಕೂಡ ಡೆನ್ಮಾರ್ಕ್ ನದ್ದೇ. 1219 ರಲ್ಲಿಯೇ ಇಲ್ಲಿನ ಧ್ವಜವನ್ನ ರೂಪಿಸಲಾಗಿತ್ತು.

ಇನ್ನೂ ವಿಚಿತ್ರ ಅಂದ್ರೆ ಈ ದೇಶದಲ್ಲಿ ಜನರಿಗೆ ಸರ್ಕಾರವೇ 7000 ಹೆಸರುಗಳ ಪಟ್ಟಿಯನ್ನ ನೀಡಿರುತ್ತದೆ.  ಅದರಂತೆಯೇ ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರದ ಪಟ್ಟಿಯಲ್ಲಿರುವ ಯಾವುದಾದರೂ ಒಂದು ಹೆಸರನ್ನ ಇಡಬೇಕಾಗುತ್ತದೆ. ಒಂದು ವೇಳೆ ಇದರ ಹೊರತಾಗಿ ಬೇರೆ ಹೆಸರು ಇಡಬೇಕೆಂದ್ರೂ ಕೂಡ ಜನರು ಅಲ್ಲಿನ ಸ್ಥಳೀಯ ಪೊಲೀಸರ ಅನುಮತಿ ಪಡೆಯಬೇಕಾಗುತ್ತದೆ.

ಇನ್ನೂ ಈ ದೇಶದಲ್ಲಿ ಮನುಷ್ಯರಿಗೆ ದುಪ್ಪಟ್ಟು ಸಂಖ್ಯೆಯಲ್ಲಿ ಹಂದಿಗಳಿವೆ. ಅಂದ್ರೆ ಪ್ರತಿ 100 ( ಮನುಷ್ಯರು ): 218 (ಹಂದಿಗಳು)  ರೇಷಿಯೋ ಇದೆ.

ಡೆನ್ಮಾರ್ಕ್ ನಲ್ಲಿ ತೀವ್ರವಾದ  ಗಾಳಿ ಬೀಸುತ್ತದೆ. ಆದ್ರೆ ಇಲ್ಲಿನ ಸರ್ಕಾರ ಇದೇ ಗಾಳಿಯಿಂದ ದೇಶದ ಅನುಕೂಲವಾಗುವಂತೆ ಮಾಡಿದೆ. ಅಂದ್ರೆ ಈ ದೇಶದಲ್ಲಿ ಕೇವಲ ಗಾಳಿಯಿಂದಲೇ ಸುಮಾರು 48 % ರಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ದೇಶದ ಪ್ರತಿಯೊಬ್ಬರಿಗೂ ಕೂಡ ಈಜು ಬರುವ ವಿಚಾರದಲ್ಲಿಯೂ ಡೆನ್ಮಾರ್ಕ್ ವಿಶ್ವದ ಏಕಮಾತ್ರ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ.  ಶಾಲೆಗಳಲ್ಲಿ ಮಕ್ಕಳಿಗೆ ಸ್ವಿಮ್ಮಿಂಗ್ ಹೇಳಿಕೊಡಲಾಗುತ್ತದೆ. ಸಾಮಾನ್ಯ ಭಾಷೆ – ವಿಚಾರಗಳ ಪರೀಕ್ಷೆಯಂತೆಯೇ ಸ್ವಮ್ಮಿಂಗ್ ಕೂಡ ಪಾಸ್ ಮಾಡಲೇ ಬೇಕಾಗುತ್ತದೆ.

ಈ ದೇಶದ ಜನ ಅತಿ ಹೆಚ್ಚು ನೋಡಿರುವ ವಿದೇಶಿ ಸಿನಿಮಾ ಟೈಟಾನಿಕ್

ಇನ್ನೂ ಈ ದೇಶವನ್ನ ಪ್ರಕೃತಿ ಪ್ರಿಯರ ಸ್ವರ್ಗ  ಅಂತಲೂ ಹೇಳಬಹುದು. ಈ ದೇಶದಲ್ಲಿ ಸಾಕಷ್ಟು ರೋಮಾಂಚನಕಾರಿ , ಮನಮೋಹಕ , ಸುಂದರ ಪ್ರವಾಸಿತಾಣಗಳಿವೆ.

ಟಿವೋಲಿ ಗಾರ್ಡನ್ಸ್ ಕಾಪೆನ್ ಹಾಗೆನ್ , ನ್ಯಾಷನಲ್ ಮ್ಯೂಸಿಯಮ್ ಆಫ್ ಡೆನ್ಮಾರ್ಕ್ , ಕ್ರಿಸ್ಟೇನ್ ಬರ್ಗ್ ಪ್ಯಾಲೇಸ್ ,  ಫಾರೋ ಐಲ್ಯಾಂಡ್  ನಂತಹ ಇನ್ನೂ ಸಾಕಷ್ಟು ಸ್ಥಳಗಳು ಪ್ರವಾಸಿಗರಿಗೆ ಪರ್ಫೆಕ್ಟ್.  

ಡೆನ್ಮಾರ್ಕ್ ಕರೆನ್ಸಿ – ಡ್ಯಾನಿಷ್ ಕ್ರೋನ್ – 1 ಡ್ಯಾನಿಷ್ ಕ್ರೋನ್ ಭಾರತದ 11 ರೂಪಾಯಿಗೆ ಸಮ

ಭಾರತಕ್ಕಿಂತ ಹೆಚ್ಚಾಗಿ ಚೀನಾವನ್ನ ದ್ವೇಷಿಸುವ ದೇಶ ಯಾವುದು ಗೊತ್ತಾ…? ಈ ದೇಶದಲ್ಲಿ ನಂಬರ್ 4ನೇ ಫ್ಲೋರ್ ಇರೋದೇ ಇಲ್ಲ..!

ಕನಸಿನಲ್ಲಿ ರಾಕ್ಷಸರು , ದೆವ್ವ, ಭೂತ ಕಾಣಿಸಿದರೆ ಅದರ ಅರ್ಥವೇನು..?

ಕನಸಿನಲ್ಲಿ ದುಡ್ಡು ಕಾಣಿಸಿದ್ರೆ ಅದರ ಅರ್ಥವೇನು ಗೊತ್ತಾ..?

‘ನಯಾಗರಾ’ ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

ಕನಸಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಅದರ ಅರ್ಥವೇನು..?

ಮರುಭೂಮಿಯಲ್ಲಿ ಸಿಲುಕಿರುವಂತಹ ಕನಸು ಬಿದ್ರೆ ಅದರ ಅರ್ಥವೇನು..?

ಕೇವಲ 4 ಲಕ್ಷ ಜನಸಂಖ್ಯೆ ಇದ್ರೂ ವಿಶ್ವದ ಶ್ರೀಮಂತ ದೇಶ  ಬಹಮಾಸ್ ನ ಬಗ್ಗೆ INTERSTING FACTS..!  

ಕಾಡಿನೊಳಗೆ ಸಿಲುಕಿರುವ ಕನಸು ಬಿದ್ರೆ ಅದರ ಅರ್ಥವೇನು ಗೊತ್ತಾ..?

ಈ ದೇಶದಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು… ಡಿವೋರ್ಸ್ ಪಡೆಯುವಂತಿಲ್ಲ..! ಜ್ವಾಲಾಮುಖಿ ದೇಶ ಫಿಲಿಫೈನ್ಸ್ ಬಗೆಗಿನ INTERESTING FACTS..!  

ಕಾಂಗರೋಗಳ ನಾಡು… ಹಚ್ಚ ಹಸಿರಿಂದ ಕಂಗೊಳಿಸುವ ಸುಂದರ ದೇಶ.. ಆಸ್ಟ್ರೇಲಿಯಾ ಬಗ್ಗೆ INTERSTING FACTS

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd